ಬಿಜೆಪಿ ಮುಖಂಡನ ಕೊಲೆ ಆರೋಪಿ ಅಪರಿಚಿತರ ಗುಂಡಿನ ದಾಳಿಗೆ ಬಲಿ
ಮಂಗಳೂರು: ಅಪರಿಚಿತರಿಂದ ನಡೆದ ಗುಂಡಿನ ದಾಳಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಆರೋಪಿ ಮೃತ ಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಂತಿನಗರದಲ್ಲಿ ನಡೆದಿದೆ. ಕೊಲೆ ಆರೋಪಿ ಸಂಪತ್ ಕುಮಾರ್ ಮೃತಪಟ್ಟಿದ್ದಾನೆ. ಕಾರಿನಲ್ಲಿ ಬಂದಿದ್ದ ನಾಲ್ವರಿಂದ ಆರೋಪಿ ಸಂಪತ್ ಮೇಲೆ ಫೈರಿಂಗ್ ನಡೆದಿದೆ. ಈ ಪರಿಣಾಮ ಸಂಪತ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ 2019ರ ಮಾರ್ಚ್‌ನಲ್ಲಿ ಕೊಡಗಿನ BJP ಮುಖಂಡ ಬಾಲಚಂದ್ರ ಕಳಗಿ ಹತ್ಯೆ ಮಾಡಿದ್ದ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಮತ್ತು ಎಫ್.ಎಸ್.ಎಲ್ ತಂಡ ಭೇಟಿ […]
Follow us on
ಮಂಗಳೂರು: ಅಪರಿಚಿತರಿಂದ ನಡೆದ ಗುಂಡಿನ ದಾಳಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಆರೋಪಿ ಮೃತ ಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶಾಂತಿನಗರದಲ್ಲಿ ನಡೆದಿದೆ. ಕೊಲೆ ಆರೋಪಿ ಸಂಪತ್ ಕುಮಾರ್ ಮೃತಪಟ್ಟಿದ್ದಾನೆ.
ಕಾರಿನಲ್ಲಿ ಬಂದಿದ್ದ ನಾಲ್ವರಿಂದ ಆರೋಪಿ ಸಂಪತ್ ಮೇಲೆ ಫೈರಿಂಗ್ ನಡೆದಿದೆ. ಈ ಪರಿಣಾಮ ಸಂಪತ್‌ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ 2019ರ ಮಾರ್ಚ್‌ನಲ್ಲಿ ಕೊಡಗಿನ BJP ಮುಖಂಡ ಬಾಲಚಂದ್ರ ಕಳಗಿ ಹತ್ಯೆ ಮಾಡಿದ್ದ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಮತ್ತು ಎಫ್.ಎಸ್.ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.