ದೊಡ್ಡಬಳ್ಳಾಪುರ: ಯುವತಿಯರ ಜೊತೆ ಬಿಜೆಪಿ ತಾಲೂಕು ಅಧ್ಯಕ್ಷ ಮದ್ಯಪಾನ ಮಾಡುತ್ತಾ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಯುವತಿಯರ ಜೊತೆ ತಾಲೂಕು ಅಧ್ಯಕ್ಷ ನಾಗರಾಜ್ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಇದು ಕೇವಲ ರಾಜಕೀಯ ದುರುದ್ದೇಶ’
ಇತ್ತ, ವೈರಲ್ ವಿಡಿಯೋ ಬಗ್ಗೆ ನಾಗರಾಜ್ ಟಿವಿ9ಗೆ ಪ್ರತಿಕ್ರಿಯಿಸಿದ್ದು ಹಳೇ ವಿಡಿಯೋ ಒಂದನ್ನು ಎಡಿಟ್ ಮಾಡಿ ಇದೀಗ ವೈರಲ್ ಮಾಡಿದ್ದಾರೆ. ನಾನು ಯುವತಿಯರ ಜೊತೆ ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ. ಅದು ಕೇವಲ ರಾಜಕೀಯ ದುರುದ್ದೇಶದಿಂದ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.