ನಿಲುವು ಸಡಿಲಿಸಿದ ಜಿಲ್ಲಾಡಳಿತ: ಇಂದು ಬಂದ ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ
ಹಾಸನ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲುಗಳನ್ನು ಒಂದು ವರ್ಷದ ನಂತರ ಇಂದು ತೆರೆಯಲಾಯಿತು. ವಿಶೇಷ ಪೂಜೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಮ್ಮುಖದಲ್ಲಿ ದೇವಸ್ಥಾನದ ದ್ವಾರವನ್ನು ತೆರೆಯಲಾಯಿತು. ದೇವಸ್ಥಾನದ ಬಾಗಿಲು ಇಂದಿನಿಂದ 12 ದಿನಗಳ ಕಾಲ ತೆರೆದಿರಲಾಗುವುದು. ಒಂದು ವರ್ಷದ ಬಳಿಕ ದೇವಿಯ ದರ್ಶನಕ್ಕೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನ ಪಡೆಯಲು ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ದೇವಾಲಯದ ಒಳಗೆ ಉರಿಯುತ್ತಿರೋ ದೀಪವನ್ನು ನೋಡಲು ಜನರು ಮುಗಿಬಿದ್ದರು. ಸಾರ್ವಜನಿಕರಿಗೆ ದರ್ಶನ ಪಡೆಯುವ […]

ಹಾಸನ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲುಗಳನ್ನು ಒಂದು ವರ್ಷದ ನಂತರ ಇಂದು ತೆರೆಯಲಾಯಿತು. ವಿಶೇಷ ಪೂಜೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಮ್ಮುಖದಲ್ಲಿ ದೇವಸ್ಥಾನದ ದ್ವಾರವನ್ನು ತೆರೆಯಲಾಯಿತು.
ದೇವಸ್ಥಾನದ ಬಾಗಿಲು ಇಂದಿನಿಂದ 12 ದಿನಗಳ ಕಾಲ ತೆರೆದಿರಲಾಗುವುದು. ಒಂದು ವರ್ಷದ ಬಳಿಕ ದೇವಿಯ ದರ್ಶನಕ್ಕೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ಹಾಸನಾಂಬೆ ದರ್ಶನ ಪಡೆಯಲು ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ದೇವಾಲಯದ ಒಳಗೆ ಉರಿಯುತ್ತಿರೋ ದೀಪವನ್ನು ನೋಡಲು ಜನರು ಮುಗಿಬಿದ್ದರು. ಸಾರ್ವಜನಿಕರಿಗೆ ದರ್ಶನ ಪಡೆಯುವ ನಿರ್ಬಂಧವಿದ್ದರೂ ನೂರಾರು ಜನರು ಆಗಮಿಸಿದ ಕಾರಣ ಕೆಲ ಕಾಲ ನೂಕುನುಗ್ಗಲು ಉಂಟಾಯಿತು. ಅಂತಿಮವಾಗಿ ಜಿಲ್ಲಾಡಳಿತ ತನ್ನ ನಿಲುವು ಸಡಿಲಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿತು. ಇಂದು ದರ್ಶನಕ್ಕೆ ಬಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿತು. ಸರತಿ ಸಾಲಿನಲ್ಲಿ ಬಂದು ದೇವಿ ದರ್ಶನ ಪಡೆಯಲು ಅಧಿಕಾರಿಗಳು ಅವಕಾಶ ನೀಡಿದರು. ಈ ನಡುವೆ, ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಭಕ್ತರು ಯಾವುದೇ ಸಾಮಾಜಿಕ ಅಂತರ ಇಲ್ಲದೆ ದರ್ಶನಕ್ಕೆ ಮುಂದಾದರು.
Published On - 1:08 pm, Thu, 5 November 20