ನೌಕರರ ಸಂಬಳಕ್ಕಾಗಿ ಸಾಲಮಾಡಲು ಹೊರಟಿರುವ BMTC; 643 ಹೊಸ ಬಸ್ ಖರೀದಿಗೆ ಟೆಂಡರ್

|

Updated on: Jan 03, 2021 | 12:04 PM

ಈಗಿರುವ 6500 ಬಸ್ಗಳಲ್ಲಿ, ಪ್ರತಿನಿತ್ಯ 4000 ಬಸ್ಗಳು ರಸ್ತೆಗಿಳಿಯುತ್ತಿವೆ. ಈಗಾಗಲೇ BMTC ಹಲವು ಶೆಡ್ಯೂಲ್ಗಳನ್ನೇ ಕ್ಯಾನ್ಸಲ್ ಮಾಡಿದೆ. ಅಂತಾದ್ರಲ್ಲಿ ಹೊಸದಾಗಿ ಬಸ್ ಖರೀದಿ ಉದ್ದೇಶವಾದ್ರೂ ಏನು? ಆರ್ಥಿಕ ಸಂಕಷ್ಟದಲ್ಲಿರುವಾಗ ಬಸ್ ಖರೀದಿ ಯಾಕೆ?

ನೌಕರರ ಸಂಬಳಕ್ಕಾಗಿ ಸಾಲಮಾಡಲು ಹೊರಟಿರುವ BMTC; 643 ಹೊಸ ಬಸ್ ಖರೀದಿಗೆ ಟೆಂಡರ್
ಬಿಎಂಟಿಸಿ ಬಸ್ (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ನೌಕರರಿಗೆ ಸಂಬಳ ನೀಡಲು BMTC ಬಳಿ ಹಣ ಇಲ್ಲ. ಹೀಗಾಗಿ ನೌಕರರ ಸಂಬಳಕ್ಕಾಗಿ BMTC ಸಾಲಮಾಡಲು ಹೊರಡಿದೆ. ಆದ್ರೆ ಹೊಸ ಬಸ್ ಖರೀದಿಗೆ ಟೆಂಡರ್ ಕರೆದು ಈಗ ಸಾರಿಗೆ ನೌಕರರ ಕೆಂಗಣ್ಣಿಗೆ ಗುರಿಯಾಗಿದೆ.

ಹೌದು.. ಕೊರೊನಾ ಸೋಂಕಿನಿಂದಾಗಿ ಸಾಲದ ಸುಳಿಯಲ್ಲಿರುವ BMTC, ಸಂಸ್ಥೆಯ ನೌಕರರಿಗೆ ಸಂಬಳ ನೀಡಲಾಗದೆ ಪರಿತಪಿಸುತ್ತಿದೆ. ಆದರೆ ಇದೀಗ ಹೊಸದಾಗಿ 643 ಬಸ್ ಖರೀದಿಗೆ ಮುಂದಾಗಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಸದ್ಯ ಈಗ ಇರುವ ಬಸ್​ಗಳೇ  ರಸ್ತೆಗಿಳಿಯುತ್ತಿಲ್ಲ. ಕೋವಿಡ್ ಲಾಕ್​ಡೌನ್ ಬಳಿಕ ಅರ್ಧದಷ್ಟು ಪ್ರಯಾಣಿಕರ ಸಂಖ್ಯೆ ಇಳಿದಿದೆ. ಕೊರೊನಾ ಕಡಿಮೆಯಾದರೂ ಪ್ರಯಾಣಿಕರ ಸಂಖ್ಯೆಯಲ್ಲಿ ಚೇತರಿಕೆ ಕಾಣ್ತಿಲ್ಲ.

ಈಗಿರುವ 6500 ಬಸ್​ಗಳಲ್ಲಿ, ಪ್ರತಿನಿತ್ಯ 4000 ಬಸ್​​ಗಳು ರಸ್ತೆಗಿಳಿಯುತ್ತಿವೆ. ಈಗಾಗಲೇ BMTC ಹಲವು ಶೆಡ್ಯೂಲ್ಗಳನ್ನೇ  ರದ್ದು ಮಾ ಡಿದೆ. ಅಂತಾದ್ರಲ್ಲಿ ಹೊಸದಾಗಿ ಬಸ್ ಖರೀದಿ ಉದ್ದೇಶವಾದ್ರೂ ಏನು? ಆರ್ಥಿಕ ಸಂಕಷ್ಟದಲ್ಲಿರುವಾಗ ಬಸ್ ಖರೀದಿ ಯಾಕೆ? ಇರೋ ಬಸ್​​ಗೆ   ಜನರಿಲ್ಲದಿರುವಾಗ ಹೊಸ ಬಸ್​​ಗೆ ಜನ ಬರ್ತಾರಾ.?  ಎಂಬ  ಅನುಮಾನಗಳು ಸಾರ್ವಜನಿಕರಲ್ಲಿ ಮೂಡುತ್ತಿದೆ. ಈಗಾಗಲೇ 230 ಕೋಟಿ ಸಾಲ ಪಡೆಯಲು ಮುಂದಾಗಿರೋ ಬಿಎಂಟಿಸಿ, ಇದರ ನಡುವೆ ಹೊಸದಾಗಿ 643 ಬಸ್ ಖರೀದಿಗೆ ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ

ಕೋಟ್ಯಾಂತರ ರೂ ನಷ್ಟದಲ್ಲಿ ಮುಳಗಿದ BMTC.. ಸಾಲ ಪಡೆಯಲು ಬ್ಯಾಂಕ್​ಗಳ ಹುಡುಕಾಟ

Published On - 12:00 pm, Sun, 3 January 21