ಸತ್ತು 2 ದಿನ ಆದ್ರೂ ಅಂತ್ಯಸಂಸ್ಕಾರ ಮಾಡ್ತಿಲ್ಲ, ದೇಹ ಕೊಡ್ತಿಲ್ಲ..
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆ ಮರುಕಳಿಸಿದೆ. ತಾಯಿಯ ಶವ ಸಂಸ್ಕಾರಕ್ಕೆ ಮಗಳು ಗೋಳಾಡಬೇಕಾದಂತ ಪರಿಸ್ಥಿತಿ ಎದುರಾಗಿದೆ. ಕಳೆದ ಎರಡು ದಿನದ ಹಿಂದೆ ಹೆಬ್ಬಾಳದ ವಿನಾಯಕನಗರದ 70 ವರ್ಷದ ಮಹಿಳೆ ಬೌರಿಂಗ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದರು. ಇವರ ಮೃತದೇಹ ಪಡೆಯಲು ಮಗಳು ಪರದಾಡುತ್ತಿದ್ದಾರೆ. ಎರಡು ದಿನ ಕಳೆದರೂ ಆಸ್ಪತ್ರೆಯಲ್ಲೇ ಮೃತ ದೇಹ ಇಟ್ಟುಕೊಂಡು ಆಸ್ಪತ್ರೆ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಮೃತರ ಮಗಳು ಅಳಲು ತೋಡಿಕೊಂಡಿದ್ದಾರೆ. ಮೃತಪಟ್ಟು ಎರಡೂ ದಿನ […]
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಮಾನವೀಯ ಘಟನೆ ಮರುಕಳಿಸಿದೆ. ತಾಯಿಯ ಶವ ಸಂಸ್ಕಾರಕ್ಕೆ ಮಗಳು ಗೋಳಾಡಬೇಕಾದಂತ ಪರಿಸ್ಥಿತಿ ಎದುರಾಗಿದೆ.
ಕಳೆದ ಎರಡು ದಿನದ ಹಿಂದೆ ಹೆಬ್ಬಾಳದ ವಿನಾಯಕನಗರದ 70 ವರ್ಷದ ಮಹಿಳೆ ಬೌರಿಂಗ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದರು. ಇವರ ಮೃತದೇಹ ಪಡೆಯಲು ಮಗಳು ಪರದಾಡುತ್ತಿದ್ದಾರೆ. ಎರಡು ದಿನ ಕಳೆದರೂ ಆಸ್ಪತ್ರೆಯಲ್ಲೇ ಮೃತ ದೇಹ ಇಟ್ಟುಕೊಂಡು ಆಸ್ಪತ್ರೆ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಮೃತರ ಮಗಳು ಅಳಲು ತೋಡಿಕೊಂಡಿದ್ದಾರೆ.
ಮೃತಪಟ್ಟು ಎರಡೂ ದಿನ ಕಳೆದರು ಅಂತ್ಯಸಂಸ್ಕಾರ ಮಾಡಿಲ್ಲ. ಕೊರೊನಾದಿಂದ ಮೃತಪಟ್ಟಿದ್ದಾರೆ ಅಂತಾ ಗೊತ್ತಿದ್ರೂ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಬೌರಿಂಗ್ ಆಸ್ಪತ್ರೆಗೆ ಕರೆ ಮಾಡಿದರೆ ಉಡಾಫೆ ಉತ್ತರ ಕೊಡ್ತಿದ್ದಾರೆ ದಯವಿಟ್ಟು ತಾಯಿಯ ಶವಸಂಸ್ಕಾರ ಮಾಡಿ, ಇಲ್ಲವೇ ನಮಗೆ ಕೊಡಿ. ಶವ ಇಟ್ಟುಕೊಂಡು ಆಟ ಆಡಬೇಡಿ ಅಂತಾ ಮೃತರ ಮಗಳು ಬೇಡಿಕೊಂಡಿದ್ದಾರೆ.
Published On - 2:42 pm, Tue, 14 July 20