SSLC ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ಕೊಡಲು ಹೋದ ಯುವಕ ಶವವಾದ.. ಯಾಕೆ?
ವಿಜಯಪುರ: SSLC ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಸಾಗರ ಚಲವಾದಿ ಮೃತ ಯುವಕ. ಯುವಕನ ಸಾವಿಗೆ ಕಾರಣವೇನು..? ಗ್ರಾಮದಲ್ಲಿದ್ದ ವಿಶ್ವಚೇತನ ಪರೀಕ್ಷಾ ಕೇಂದ್ರದಲ್ಲಿ ಪರಿಚಯಸ್ಥ ಪರೀಕ್ಷಾರ್ಥಿಗೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕನ ಕಂಡ ಪೊಲೀಸರು ಲಾಠಿ ರುಚಿ ತೋರಿಸಿದರು ಎಂದು ತಿಳಿದುಬಂದಿದೆ. ಜೊತೆಗೆ ಈತನಿಗೆ ಹೃದಯ ಸಂಬಂಧಿ ಕಾಯಿಲೆಯೂ ಸಹ ಇತ್ತು ಎಂಬ ಮಾಹಿತಿ ಸಿಕ್ಕಿದೆ. […]
ವಿಜಯಪುರ: SSLC ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ. 19 ವರ್ಷದ ಸಾಗರ ಚಲವಾದಿ ಮೃತ ಯುವಕ.
ಯುವಕನ ಸಾವಿಗೆ ಕಾರಣವೇನು..? ಗ್ರಾಮದಲ್ಲಿದ್ದ ವಿಶ್ವಚೇತನ ಪರೀಕ್ಷಾ ಕೇಂದ್ರದಲ್ಲಿ ಪರಿಚಯಸ್ಥ ಪರೀಕ್ಷಾರ್ಥಿಗೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕನ ಕಂಡ ಪೊಲೀಸರು ಲಾಠಿ ರುಚಿ ತೋರಿಸಿದರು ಎಂದು ತಿಳಿದುಬಂದಿದೆ. ಜೊತೆಗೆ ಈತನಿಗೆ ಹೃದಯ ಸಂಬಂಧಿ ಕಾಯಿಲೆಯೂ ಸಹ ಇತ್ತು ಎಂಬ ಮಾಹಿತಿ ಸಿಕ್ಕಿದೆ.
ಹಾಗಾಗಿ ಸಾಗರ ಪೊಲೀಸರ ಲಾಠಿ ಏಟಿಗೆ ಮೃತಪಟ್ಟನಾ ಅಥವಾ ಗಾಬರಿಗೆ ಹೃದಯಾಘಾತವಾಗಿ ಮೃತಪಟ್ಟನಾ ಎಂಬ ಅನುಮಾನ ಹುಟ್ಟಿದೆ. ಸದ್ಯಕ್ಕೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು ವಿದ್ಯಾರ್ಥಿಗಳು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
Published On - 2:04 pm, Sat, 27 June 20