9 ವರ್ಷದ ಬಳಿಕ ಪ್ರೇಯಸಿಗೆ ಕೈಕೊಟ್ಟ.. ಇನ್ನೊಬ್ಬಳ ಕೈಹಿಡಿದ! ಪ್ರಿಯಕರನಿಗಾಗಿ ಮಹಿಳೆ ಕಣ್ಣೀರು..
ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ. ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ […]

ಗದಗ: ಆಕೆ ಮದ್ವೆ ಮಾಡ್ಕೊಂಡು ಗಂಡನ ಮನೆಗೆ ಹೋಗಿದ್ಲು. ಆದ್ರೆ ಪ್ರೀತಿಸಿದವ ಮಾತ್ರ ಸಂಸಾರ ಮಾಡೋಕೆ ಬಿಡದೆ ಆಕೆಯನ್ನ ತನ್ನ ಜೊತೆ ಕರೆದುಕೊಂಡು ಬಂದಿದ್ದ. ಬರೋಬ್ಬರಿ 9 ವರ್ಷ ಒಟ್ಟಿಗೆ ಜೀವನ ನಡೆಸಿದ್ರು. ಆದ್ರೀಗ ಪ್ರೀತಿಸಿದವಳಿಗೆ ಕೈಕೊಟ್ಟು ಬೇರೆಯವಳನ್ನ ಮದ್ವೆ ಆಗಿದ್ದಾನೆ. ಇದ್ರಿಂದ ಆತನನ್ನ ನಂಬಿ ಬಂದವಳ ಬದುಕು ಬೀದಿಗೆ ಬಂದಿದೆ.
ಗಂಡ ಬೇಕು ಅಂತಾ ನೊಂದ ಮಹಿಳೆಯ ಕಣ್ಣೀರು..! ನನ್ನ ಗಂಡ ನಂಗೆ ಬೇಕು.. ಅವನಿಲ್ಲದೆ ಬದುಕೋಕೆ ಆಗಲ್ಲ ಅಂತಾ ಒಂದೇ ಸಮನೆ ಗೋಳಾಡ್ತಿರೋ ಈಕೆಯ ಹೆಸ್ರು ಆಶಾ. ಗದಗ ತಾಲೂಕಿನ ಅಡವಿಸೋಮಪುರ ನಿವಾಸಿ. 9 ವರ್ಷದ ಹಿಂದೆ ಈಕೆಯನ್ನ ವಿಜಯಪುರಕ್ಕೆ ಕೊಟ್ಟು ಮದ್ವೆ ಮಾಡಲಾಗಿತ್ತು. ಆದ್ರೆ ಅಲ್ಲಿ ಈಕೆ ಗಂಡನ ಜೊತೆ ಸಂಸಾರ ಮಾಡಿದ್ದು ಜಸ್ಟ್ ನಾಲ್ಕೇ ತಿಂಗಳು. ಅಷ್ಟರಲ್ಲೇ ಹುಚ್ಚೀರಪ್ಪ ಅನ್ನೋ ಪಾಗಲ್ ಪ್ರೇಮಿ ನನ್ನ ಹುಡುಗಿ ನಂಗೆ ಬೇಕು ಅಂತಾ ಪಟ್ಟು ಹಿಡಿದಿದ್ನಂತೆ. ಆಶಾಳ ಗಂಡನ ಮನೆಗೆ ಹೋಗಿ ಗಲಾಟೆ ಮಾಡಿದ್ನಂತೆ.
ವಿಷ್ಯ ಗೊತ್ತಾದ ಮೇಲೆ ಗಂಡನ ಮನೆಯವ್ರು ಈಕೆಯನ್ನ ಬಿಟ್ಟು ಬಿಟ್ಟಿದ್ರಂತೆ. ಅಂದಿನಿಂದ ಹುಚ್ಚೀರಪ್ಪನ ಜೊತೆ ಈಕೆ ಸಂಸಾರ ಮಾಡ್ಕೊಂಡಿದ್ಲು. ಆದ್ರೀಗ ಐನಾತಿ ಆಸಾಮಿ ಬೇರೆಯವಳನ್ನ ಮದ್ವೆ ಆಗಿದ್ದು, ಮೋಸ ಹೋದ ಆಶಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಗಂಡ ಬೇಕು ಅಂತಾ ಕಣ್ಣೀರಾಕ್ತಿದ್ದಾಳೆ.
ಇನ್ನು ಇದಿಷ್ಟೇ ಅಲ್ಲದೆ ಹುಚ್ಚೀರಪ್ಪ 5 ತಿಂಗಳ ಗರ್ಭಿಣಿ ಇದ್ದಾಗ ಅಬಾರ್ಷನ್ ಮಾಡಿಸಿದ್ದ ಅಂತಾ ಮಹಿಳೆ ಆರೋಪಿಸಿದ್ದಾಳೆ. ಬಳಿಕ ಹೆಂಡ್ತಿ ಜೊತೆಗೆ ನಿನ್ನನ್ನೂ ಚೆನ್ನಾಗಿ ನೋಡಿಕೊಳ್ತೇನೆ ಅಂದಿದ್ನಂತೆ. ಹುಚ್ಚೀರಪ್ಪನ ಮಾತಿಗೆ ಮರುಳಾಗಿ ಆಶಾ ಮದ್ವೆಗೆ ಒಪ್ಪಿಗೆ ನೀಡಿದ್ಲಂತೆ. ಆದ್ರೀಗ ಹೆಂಡ್ತಿ ಬಂದ್ಮೇಲೆ ನನ್ನಿಂದ ದೂರ ಆಗಿದ್ದಾನೆ. ನನಗೆ ನ್ಯಾಯ ಬೇಕು ಅಂತಿದ್ದಾಳೆ. ಆದ್ರೆ ಪೊಲೀಸ್ರು ಮಾತ್ರ, ಆಶಾಳನ್ನ ಹುಚ್ಚೀರಪ್ಪ ಮದ್ವೆ ಆಗಿಲ್ಲ. ಹೀಗಾಗಿ ಇದನ್ನ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿದೆ. ಅಲ್ಲಿ ಇಬ್ಬರನ್ನ ಕರೆದು ಇತ್ಯರ್ಥ ಮಾಡ್ತಾರೆ ಅಂದ್ರು.
ಒಟ್ನಲ್ಲಿ ಪಾಗಲ್ ಪ್ರೇಮಿ ಮಾಡಿದ ಅವಾಂತರಕ್ಕೆ ಮಹಿಳೆಯೊಬ್ಬಳು ಬೀದಿಪಾಲಾಗಿದ್ದಾಳೆ. ಅತ್ತ ಗಂಡನ ಇಲ್ಲದೆ ಇತ್ತ ಪ್ರಿಯಕರನೂ ಇಲ್ಲದೆ ಕಣ್ಣೀರಾಕ್ತಿದ್ದಾಳೆ.