ಮತ್ತೆ ಬಿಎಂಟಿಸಿ ಬ್ರೇಕ್ ಫೇಲ್, ಏನಾಯ್ತು?
ಬೆಂಗಳೂರು: ಜಯನಗರದ ಪಂಪ್‌ಹೌಸ್ ಬಳಿಯ ಈಸ್ಟ್ ಎಂಡ್ ಸರ್ಕಲ್‌ನಲ್ಲಿ BMTC ವೋಲ್ವೊ ಬಸ್‌ನಿಂದ ಸರಣಿ ಅಪಘಾತವಾಗಿದೆ. ಕೆಎ 01, ಎಫ್ 318 ನಂಬರಿನ ಬಿಎಂಟಿಸಿ ವೋಲ್ವೊ ಬಸ್ನ ಬ್ರೇಕ್ ವಿಫಲವಾಗಿ ಸರಣಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಿಗ್ನಲ್‌ನಲ್ಲಿದ್ದ 6 ಕಾರು, 2 ಆಟೋ, ಮತ್ತೊಂದು ಬಿಎಂಟಿಸಿ ಬಸ್ಗೆ ವೋಲ್ವೊ ಬಸ್ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಎಂಟಿಸಿ ಬಸ್ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಹ ಗಾಯಗಳಾಗಿದೆ. […]
ಬೆಂಗಳೂರು: ಜಯನಗರದ ಪಂಪ್‌ಹೌಸ್ ಬಳಿಯ ಈಸ್ಟ್ ಎಂಡ್ ಸರ್ಕಲ್‌ನಲ್ಲಿ BMTC ವೋಲ್ವೊ ಬಸ್‌ನಿಂದ ಸರಣಿ ಅಪಘಾತವಾಗಿದೆ. ಕೆಎ 01, ಎಫ್ 318 ನಂಬರಿನ ಬಿಎಂಟಿಸಿ ವೋಲ್ವೊ ಬಸ್ನ ಬ್ರೇಕ್ ವಿಫಲವಾಗಿ ಸರಣಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಿಗ್ನಲ್‌ನಲ್ಲಿದ್ದ 6 ಕಾರು, 2 ಆಟೋ, ಮತ್ತೊಂದು ಬಿಎಂಟಿಸಿ ಬಸ್ಗೆ ವೋಲ್ವೊ ಬಸ್ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಎಂಟಿಸಿ ಬಸ್ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಹ ಗಾಯಗಳಾಗಿದೆ. ಘಟನಾ ಸ್ಥಳಕ್ಕೆ ಮೈಕೋಲೇಔಟ್ ಪೊಲೀಸು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.