ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್

ಸುವಿಖ್ಯಾತ ವೀಪಿಗೆ ಸನ್ಮಾನ ವಿಚಾರ, ವೇದಿಕೆಯಲ್ಲೇ MLA, DC ಕಿರಿಕ್

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್‌ಗೆ ಸನ್ಮಾನ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಆನೆಗೊಂದಿ ಉತ್ಸವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ರವರಿಗೆ ಸನ್ಮಾನಿಸಲು ಅಹ್ವಾನಿಸಲಾಗಿತ್ತು. ಆದರೆ ಅವರನ್ನು ಸನ್ಮಾನಿಸುವ ವಿಷಯದಲ್ಲಿ ಎಡವಟ್ಟಾಗಿದೆ. ಇದರಿಂದ ದೊಡ್ಡ ಗಾಯಕರೊಬ್ಬರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಕಾರ್ಯಕ್ರಮದಲ್ಲಿ ಡಿಸಿ ಸುನಿಲ್ ಕುಮಾರ್‌ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇಬ್ಬರು ಸೇರಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಬೇಕಿತ್ತು. ಆದರೆ ಶಾಸಕರು ಬರುವುದನ್ನು ತಡ […]

sadhu srinath

|

Jan 10, 2020 | 11:20 AM

ಕೊಪ್ಪಳ: ಗಾಯಕ ವಿಜಯ್ ಪ್ರಕಾಶ್‌ಗೆ ಸನ್ಮಾನ ಮಾಡುವ ವಿಚಾರಕ್ಕೆ ಕಿರಿಕ್ ಆಗಿದೆ. ಆನೆಗೊಂದಿ ಉತ್ಸವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಯಕ ವಿಜಯ್ ಪ್ರಕಾಶ್ ರವರಿಗೆ ಸನ್ಮಾನಿಸಲು ಅಹ್ವಾನಿಸಲಾಗಿತ್ತು. ಆದರೆ ಅವರನ್ನು ಸನ್ಮಾನಿಸುವ ವಿಷಯದಲ್ಲಿ ಎಡವಟ್ಟಾಗಿದೆ. ಇದರಿಂದ ದೊಡ್ಡ ಗಾಯಕರೊಬ್ಬರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿವೆ. ಕಾರ್ಯಕ್ರಮದಲ್ಲಿ ಡಿಸಿ ಸುನಿಲ್ ಕುಮಾರ್‌ ಹಾಗೂ ಗಂಗಾವತಿ ಕ್ಷೇತ್ರದ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಇಬ್ಬರು ಸೇರಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಬೇಕಿತ್ತು.

ಆದರೆ ಶಾಸಕರು ಬರುವುದನ್ನು ತಡ ಮಾಡಿದ್ದಕ್ಕೆ ಡಿಸಿ ವಿಜಯ್‌ ಪ್ರಕಾಶ್‌ ರವರಿಗೆ ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಹೋಗಿದ್ದಾರೆ. ಹೀಗಾಗಿ ಡಿಸಿ ವಿರುದ್ಧ ಶಾಸಕ ಪರಣ್ಣ ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಎದುರು ಆಕ್ರೋಶ ಹೊರಹಾಕಿದ್ದಾರೆ. ನಂತರ ವೇದಿಕೆ ಕೆಳಗಡೆ ಹೋಗಿ ಕುಳಿತುಕೊಂಡಿದ್ದಾರೆ. ಅಧಿಕಾರಿಗಳಾದ ಎಸ್ಪಿ ಸಂಗೀತಾ, ಎಸಿ ಗೀತಾ ರವರು ಶಾಸಕರಿಗೆ ಮತ್ತೊಮ್ಮೆ ಸನ್ಮಾನ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಶಾಸಕರು ಅಧಿಕಾರಿಗಳ ಮಾತಿಗೆ ಸಮ್ಮತಿ ಸೂಚಿಸದೇ ಸುಮ್ಮನೆ ಕುಳಿತಿದ್ದರು.

ವಿಜಯ್ ಪ್ರಕಾಶ್ ರಂಪಾಟಕ್ಕೆ ಬೇಸತ್ತು ಕಾರ್ಯಕ್ರಮ ನಿಲ್ಲಿಸಿ, ಕೊನೆಗೆ ವೇದಿಕೆಯಿಂದ ಕೆಳಗೆ ಇಳಿದು ಬಂದು ಶಾಸಕರನ್ನು ಮನವೊಲಿಸಿ ವೇದಿಕೆ ಮೇಲೆ ಬರಲು ಮನವಿ ಮಾಡಿದ್ದಾರೆ. ನಂತರ ಶಾಸಕರು ತಮ್ಮ ಬೆಂಬಲಿಗರ ಜತೆ ಗಾಯಕ ವಿಜಯ್ ಪ್ರಕಾಶ್‌ ರವರಿಗೆ ಪುನಃ ಸನ್ಮಾನ ಮಾಡಿದ್ದಾರೆ. ಈ ರೀತಿ ಒಂದೇ ವೇದಿಕೆ ಮೇಲೆ ಎರಡು ಬಾರಿ ವಿಜಯ್ ಪ್ರಕಾಶ್‌ ರವರಿಗೆ ಸನ್ಮಾನ ಮಾಡಲಾಯಿತು.

Follow us on

Related Stories

Most Read Stories

Click on your DTH Provider to Add TV9 Kannada