ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ಸದಸ್ಯರ ವಿರುದ್ಧ ಲಂಚ ವಸೂಲಿ ಆರೋಪ ಕೇಳಿಬಂದಿದೆ. ಆರ್ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಮಾಡಿರುವ ಈ ಆರೋಪಕ್ಕೆ ಪುಷ್ಟಿ ನೀಡುವಂತಹ ಆಡಿಯೋವೊಂದು ಬಿಡುಗಡೆಯಾಗಿದೆ.
ಏನಿದು ಲಂಚಗುಳಿ ಘಟನೆ?
ಲಕ್ಷ್ಮೀ ಶಿವಣ್ಣ ಮಾತನಾಡಿದ್ದಾರೆನ್ನಲಾದ ಆಡಿಯೋ ಕೂಡ ಬಿಡುಗಡೆಯಾಗಿದೆ. ಮಾಜಿ ಮೇಯರ್ ಸಂದೇಶ್ ಸ್ವಾಮಿಗೂ ಈ ಹಣದಲ್ಲಿ ಪಾಲಿದೆ ಎಂದು ಸದಸ್ಯೆ ಹೇಳಿದ್ದು, ಆಡಿಯೋದಲ್ಲಿ ಅದು ಕೇಳಿಬಂದಿದೆ.
ಪಾಲಿಕೆ ಸದಸ್ಯರು ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಎಸಿಬಿಗೆ ದೂರು ನೀಡಿದ್ದೆ. ಲಂಚ ಸ್ವೀಕರಿಸುವಾಗಲೇ ದಾಳಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರ ವಿರುದ್ಧವೂ ಪ್ರಕರಣ ದಾಖಲು ಮಾಡುತ್ತೇವೆ ಎಂದು ಕಟ್ಟಡ ಮಾಲೀಕ ರಮೇಶ್ ತಿಳಿಸಿದ್ದಾರೆ.
ನಾವು ಅನುಮತಿ ಪಡೆಯದೆ ಸೆಲ್ಲಾರ್ ನಿರ್ಮಾಣ ಮಾಡಿದ್ದು ಸತ್ಯ. ಆ ಬಗ್ಗೆ ಅವರು ಕಾನೂನಿನ ಅಡಿ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಲಂಚ ಕೇಳುತ್ತಾರೆ. ಈಗಾಗಲೇ ಎರಡು ಪಟ್ಟು ದಂಡದ ಜತೆ, ಕಂದಾಯ ಕಟ್ಟುತ್ತಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗಂಗರಾಜು ಅವರೂ ಕೂಡ ರಮೇಶ್ ಜತೆ ಇದ್ದು, ಬೆಂಬಲ ಸೂಚಿಸಿದ್ದಾರೆ.