ಬ್ರಿಸ್ಬೇನ್: ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸಂಕಷ್ಟದ ಪರಿಸ್ಥಿತಿಯಿಂದ ಪಾರುಮಾಡಿದ ವಾಷಿಂಗ್ಟನ್ ಸುಂದರ್ ಮತ್ತು ಶರ್ದುಲ್ ಠಾಕೂರ್ ಅವರನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ನಲ್ಲಿ ಶ್ಲಾಘಿಸಿದ್ದಾರೆ.
ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ವಿಕೆಟ್ ಜೊತೆಯಾಟದಲ್ಲಿ ಅತಿಹೆಚ್ಚು ರನ್ ಗಳಿಸಿದ ಕೀರ್ತಿಗೆ ಸುಂದರ್ ಮತ್ತು ಠಾಕೂರ್ ಭಾಜನರಾದರು. 123 ರನ್‌ಗಳ ಜೊತೆಯಾಟ ಆಡಿದ ಸುಂದರ್ ಮತ್ತು ಠಾಕೂರ್ನನ್ನು ಹಾಡಿ ಹೋಗಳಿರುವ ಕೊಹ್ಲಿ, ಮುಂಬೈ ವೇಗಿ ಠಾಕೂರ್ನನ್ನು ಮರಾಠಿ ಭಾಷೆಯಲ್ಲಿ ಶ್ಲಾಘಿಸಿದ್ದಾರೆ.
ಉತ್ತಮ ಜೊತೆಯಾಟ ಆಡಿದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ನನ್ನು ಹೊಗಳಿರುವ ಕೊಹ್ಲಿ, ಟೆಸ್ಟ್ ಕ್ರಿಕೆಟ್ ಎಂದರೆ ಇದೇ. ವಾಶಿ (ವಾಷಿಂಗ್ಟನ್ ಸುಂದರ್) ಚೊಚ್ಚಲ ಪಂದ್ಯದಲ್ಲಿ ಬಹಳ ತಾಳ್ಮೆಯಿಂದ ತಮ್ಮ ಪ್ರದರ್ಶನ ನೀಡಿದ್ದಾರೆ ಹಾಗೆಯೇ ಅದ್ಭುತ ಆಟ ಆಡಿದ ಠಾಕೂರ್ ಮತ್ತೊಮ್ಮೆ ನಿಮಗೆ ನಮಸ್ಕರಿಸುತ್ತೇನೆ ಎಂದು ಮರಾಠಿ ಭಾಷೆಯಲ್ಲಿ ಶ್ಲಾಘಿಸಿದ್ದಾರೆ.
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ನ 369 ರನ್ಗಳಿಗೆ ಉತ್ತರಿಸಿದ ಭಾರತ, ಒಂದು ಹಂತದಲ್ಲಿ ಆರು ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಆ ಸಮಯದಲ್ಲಿ ಜೊತೆಯಾದ ಈ ಜೋಡಿ ಆಸ್ಟ್ರೇಲಿಯಾದ ಬೌಲರ್‌ಗಳು ಎಸೆದ ಬಾಲ್ಗಳಿಗೆ ಮೈದಾನದ ಎಲ್ಲಾ ಭಾಗಗಳ ದರ್ಶನ ಮಾಡಿಸಿದರು. 67 ರನ್‌ಗಳ ಕಾಣಿಕೆಯಲ್ಲಿ ಠಾಕೂರ್ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಸಹ ಆದರು. ತನ್ನ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಸುಂದರ್ ಕೂಡ 1 ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಅಮೂಲ್ಯವಾದ 62 ರನ್‌ಗಳ ಕೊಡುಗೆ ನೀಡಿದರು.
Outstanding application and belief by @Sundarwashi5 and @imShard. This is what test cricket is all about. Washy top composure on debut and tula parat maanla re Thakur! ??
— Virat Kohli (@imVkohli) January 17, 2021