AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋ ಬೈಡೆನ್ ಸಂಪುಟಕ್ಕೆ 13 ಮಹಿಳೆಯರೂ ಸೇರಿ 20 ಅನಿವಾಸಿ ಭಾರತೀಯರು ಸೇರ್ಪಡೆ

ಬಹಳ ಹಿಂದಿನಿಂದಲೂ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಅಮೆರಿಕಾಕ್ಕೆ ಅಭಿವೃದ್ಧಿಗೆ ಕೊಡುಗೆ ನೀಡುತ್ತಲೇ ಬಂದಿದೆ. ಈಗ, ಭಾರತೀಯ ಮೂಲದ ನಾವು ಅಮೆರಿಕಕ್ಕೆ ನೇರವಾಗಿ ಸೇವೆ ಸಲ್ಲಿಸುವ ಕಾಲ ಬಂದಿದೆ ಎಂದು ಇಂಡಿಯಾಸ್ಪೊರಾದ ಸಂಸ್ಥಾಪಕ ಎಂ.ಆರ್.ರಾಮಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಜೋ ಬೈಡೆನ್ ಸಂಪುಟಕ್ಕೆ 13 ಮಹಿಳೆಯರೂ ಸೇರಿ 20 ಅನಿವಾಸಿ ಭಾರತೀಯರು ಸೇರ್ಪಡೆ
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
guruganesh bhat
|

Updated on:Jan 17, 2021 | 2:19 PM

Share

ವಾಷಿಂಗ್ಟನ್: ಜನವರಿ 20ರಂದು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಜೋ ಬೈಡೆನ್​ ಸಂಪುಟದಲ್ಲಿ 13 ಮಹಿಳೆಯರೂ ಸೇರಿ 20 ಭಾರತೀಯ ಮೂಲದವರು ಸೇರ್ಪಡೆಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ಮೂಲಕ ಅಮೆರಿಕದಲ್ಲಿ ವಾಸವಿರುವ ಸಣ್ಣ ಪ್ರಮಾಣದ ಭಾರತೀಯ ಸಮುದಾಯಕ್ಕೆ ನೂತನ ಅಧ್ಯಕ್ಷ ಜೋ ಬೈಡೆನ್ ಉತ್ತಮ ಕೊಡುಗೆ ನೀಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ವೈಟ್​ಹೌಸ್ ಕಚೇರಿ ನಿರ್ವಹಣೆ ಮತ್ತು ಬಜೆಟ್​ನ ಸಹಾಯಕ ನಿರ್ದೇಶಕರನ್ನಾಗಿ ನೀರಾ ಟಂಡನ್​ರನ್ನು ಜೋ ಬೈಡೆನ್ ಆಯ್ಕೆಮಾಡಿದ್ದಾರೆ. ಡಾ. ವಿವೇಕ್ ಮೂರ್ತಿಯವರು ಅಮೆರಿಕದ ಸರ್ಜನ್ ಜನರಲ್ ಆಗಿ ಈಗಾಗಲೇ ನೇಮಿಸಲಾಗಿದೆ.

ವನಿತಾ ಗುಪ್ತಾರನ್ನು ನ್ಯಾಯಾಂಗ ಇಲಾಖೆಯ ಸಹಾಯಕ ಅಟಾರ್ನಿ ಜನರಲ್​ರನ್ನಾಗಿ ನೇಮಿಸಲಾಗಿದೆ. ಉಜ್ರಾ ಝೇಯಾರನ್ನು ವಿದೇಶಾಂಗ ಇಲಾಖೆಯ ನಾಗರಿಕ ಭದ್ರತೆ ಮತ್ತು ಮಾನವ ಹಕ್ಕುಗಳ ವಿಭಾಗಕ್ಕೆ ನೇಮಿಸಲಾಗಿದೆ.

ನಿಯೋಜಿತ ಪ್ರಥಮ ಮಹಿಳೆ ಡಾ.ಜಿಲ್ ಬೈಡೆನ್​ರ ನೀತಿ ನಿಯಮಗಳ ನಿರ್ದೇಶಕಿಯಾಗಿ ಮಾಲಾ ಅಡಿಗರನ್ನು, ಡಿಜಿಟಲ್ ನಿರ್ದೇಶಕಿಯಾಗಿ ಗರಿಮಾ ವರ್ಮಾರನ್ನು ನೇಮಿಸಲಾಗಿದೆ. ಜತೆಗೆ ಮಾಧ್ಯಮ ಉಪ ಕಾರ್ಯದರ್ಶಿಯಾಗಿ ಸಬ್ರಿಯಾನಾ ಸಿಂಗ್​ರನ್ನು ನೇಮಿಸಲಾಗಿದೆ.

ಕಾಶ್ಮೀರ ಮೂಲದ ಮಹಿಳೆಯರ ನೇಮಕ ಇತಿಹಾಸದಲ್ಲೇ ಮೊದಲ ಬಾರಿಗೆ, ಕಾಶ್ಮೀರ ಮೂಲದ ಮಹಿಳೆಯೋರ್ವರನ್ನು ಪ್ರಮುಖ ಹುದ್ದೆಗೆ ನೇಮಿಸಲಾಗಿದೆ. ವೈಡ್​ಹೌಸ್​ನ ಡಿಜಿಟಲ್ ಸ್ಟ್ರಾಟರ್ಜಿ ವಿಭಾಗದ ಪಾಲುದಾರಿಕಾ ಮ್ಯಾನೇಜರ್​ ಆಗಿ ಕಾಶ್ಮೀರ ಮೂಲದ ಐಶಾ ಶಾರನ್ನು ನೇಮಿಸಲಾಗಿದೆ. ಯುಎಸ್ ನ್ಯಾಶನಲ್ ಎಕನಾಮಿಕ್ ಕೌನ್ಸಿಲ್​ನ ಸಹಾಯಕ ನಿರ್ದೇಶಕಿಯಾಗಿ ಸಮೀರಾ ಫಾಜಿಲ್ ಆಯ್ಕೆಯಾಗಿದ್ದಾರೆ. ಇದೇ ಕೌನ್ಸಿಲ್​ನಲ್ಲಿ ಭಾರತೀಯ ಮೂಲದ ಇನ್ನೋರ್ವ ಭರತ್ ರಾಮಮೂರ್ತಿಯವರು ಸಹ ಇದ್ದಾರೆ.

ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದ ಗೌತಮ್ ರಾಘವನ್ ಸಹ ಜೋ ಬೈಡೆನ್ ಸಂಪುಟ ಸೇರಲಿದ್ದಾರೆ. ಅಧ್ಯಕ್ಷರ ಸ್ಪೀಚ್​ರೈಟಿಂಗ್​ನ ನಿರ್ದೇಶಕರಾಗಿ ವಿನಯ್ ರೆಡ್ಡಿ ನೇಮಕಗೊಂಡಿದ್ದಾರೆ. ವೈಟ್​ಹೌಸ್​ನ ಮಾಧ್ಯಮ ತಂಡದಲ್ಲಿ ಭಾರತೀಯ ಮೂಲದ ವೇದಾಂತ್ ಪಟೇಲ್ ಇರಲಿದ್ದು, ಸಹ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಅಲ್ಲದೇ, ತರುಣ್ ಛಬ್ರಾ, ಸುಮೋನಾ ಗುಹಾ, ಶಾಂತಿ ಕಲಥಿಲ್ ರಾಷ್ಟ್ರೀಯ ಭದ್ರತಾ ಕೌನ್ಸಿಲ್​ಗೆ ಸೇರ್ಪಡೆಯಾಗಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂದಿಸಿದ ಸಮಿತಿಯ ಹಿರಿಯ ಸಲಹೆಗಾರರಾಗಿ ಸೋನಿಯಾ ಅಗರ್ವಾಲ್, ಕೊರೊನಾ ಸೋಂಕಿನ ನಿರ್ವಹಣಾ ತಂಡದ ಪಾಲಿಸಿ ಸಲಹೆಗಾರರಾಗಿ ವಿಧುರ್ ಶರ್ಮಾ ನೇಮಕಗೊಂಡಿದ್ದಾರೆ. ವೈಟ್​ಹೌಸ್​ ಕೌನ್ಸಿಲ್​ಗಳಿಗೆ ನೇಹಾ ಗುಪ್ತಾ ಮತ್ತು ರೀಮಾ ಶರ್ಮಾ ನೇಮಕಗೊಂಡಿದ್ದಾರೆ.

ದಕ್ಷಿಣ ಏಷ್ಯಾದ ಇತರ ದೇಶಗಳಿಗೂ ಪ್ರಾತಿನಿಧ್ಯ ಭಾರತೀಯರನ್ನು ಹೊರತುಪಡಿಸಿ ದಕ್ಷಿಣ ಏಷ್ಯಾದ ಮೂವರು ಸಹ ಜೋ ಬೈಡೆನ್ ಸಂಪುಟ ಸೇರ್ಪಡೆಯಾಗಿದ್ದಾರೆ. ಪಾಕಿಸ್ತಾನಿ ಮೂಲದ ಅಮೇರಿಕಾ ನಾಗರಿಕ ಅಲಿ ಜೈದಿ, ಶ್ರೀಲಂಕಾ ಮೂಲದ ಅಮೆರಿಕನ್ ರೋಹಿಣಿ ಕೊಸೊಗ್ಲು ಮತ್ತು ಬಾಂಗ್ಲಾ ಮೂಲದ ಜಯಾನ್ ಸಿದ್ದಿಕಿ ಶ್ವೇತ ಭವನದ ಮುಖ್ಯ ಪದವಿಗಳಿಗೆ ನೇಮಕಗೊಂಡಿದ್ದಾರೆ.

ಬಹಳ ಹಿಂದಿನಿಂದಲೂ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಅಮೆರಿಕಾಕ್ಕೆ ಅಭಿವೃದ್ಧಿಗೆ ಕೊಡುಗೆ ನೀಡುತ್ತಲೇ ಬಂದಿದೆ. ಈಗ, ಭಾರತೀಯ ಮೂಲದ ನಾವು ಅಮೆರಿಕಕ್ಕೆ ನೇರವಾಗಿ ಸೇವೆ ಸಲ್ಲಿಸುವ ಕಾಲ ಬಂದಿದೆ ಎಂದು ಇಂಡಿಯಾಸ್ಪೊರಾದ ಸಂಸ್ಥಾಪಕ ಎಂ.ಆರ್.ರಾಮಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಅಧ್ಯಕ್ಷರಾಗಿ ಜೋ ಬೈಡೆನ್: ಅಧಿಕೃತವಾಗಿ ಘೋಷಿಸಿದ ಅಮೆರಿಕ ಸಂಸತ್

Published On - 2:00 pm, Sun, 17 January 21