ಎರಡು ವಾರಗಳಿಂದ ನ್ಯೂಜಿಲೆಂಡ್ನಲ್ಲಿ ಯಾವುದೇ ಕೊರೊನಾ ಪ್ರಕರಣ ಪತ್ತೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ ಕೊರೊನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಿಸಿದೆ.
ಇನ್ಮುಂದೆ ಸಾಮಾಜಿಕ ಅಂತರ ಪಾಲಿಸುವ ಅಗತ್ಯವಿಲ್ಲ. ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸೇರಲು ಯಾವುದೇ ನಿರ್ಬಂಧವಿಲ್ಲ ಎಂದು ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂಡಾ ಆರ್ಡರ್ನ್ ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ ದೇಶದ ಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ವಿದೇಶಿಯರಿಗೆ ನ್ಯೂಜಿಲ್ಯಾಂಡ್ನೊಳಗೆ ಪ್ರವೇಶಕ್ಕೆ ಅವಕಾಶ ಒದಗಿಸಿಲ್ಲ ಎಂದು ಮಿರರ್ ನೌ ವರದಿ ಮಾಡಿದೆ.
ಈ ಮೊದಲು ಸಹ ಕೆಲ ಬಾರಿ ನ್ಯೂಜಿಲ್ಯಾಂಡ್ ಕೊರೊನಾ ಮುಕ್ತ ದೇಶವಾಗಿ ಗುರುತಿಸಿಕೊಂಡಿತ್ತು. ಆದರೆ, ನಂತರ ಅಲ್ಲಿ ಕೊರೊನಾ ಪ್ರಕರಣ ವರದಿ ಆಗಿತ್ತು.