ಪ್ರಿಯ ಕಿನ್ನರಿ.. ಹಲ್ಲು ಮುರಿದು ಹೋಗಿದ್ದಕ್ಕೆ ಪ್ರತಿಯಾಗಿ ಉಡುಗೊರೆ ಕೊಡು.. ಎಲ್ಲರ ಮನಗೆದ್ದ ಚೆಂದದ ಪತ್ರ!
ಶಾಲೆಯಲ್ಲಿ ಪುಟ್ಟ ಹುಡುಗನೊಬ್ಬನ ಹಲ್ಲು ಮುರಿದುಹೋಗಿದ್ದಕ್ಕೆ ಶಿಕ್ಷಕಿ ಅವನನ್ನು ಸಮಾಧಾನಿಸುವ ಸಲುವಾಗಿ ಒಂದು ಪತ್ರ ಬರೆದಿದ್ದಾರೆ. ಕಿನ್ನರಿ ಇವನ ಹಲ್ಲಿಗೆ ಪ್ರತಿಯಾಗಿ ಉಡುಗೊರೆ ಕೊಡು ಎಂದು ಬರೆದಿರುವ ಪತ್ರದ ಭಾವಾನುವಾದ ಇಲ್ಲಿದೆ.
ಕೆಲವೊಂದು ಸಣ್ಣ ಘಟನೆಗಳು ನಮಗೆ ಅರಿವಿಲ್ಲದಂತೆಯೇ ಮುಖದಲ್ಲಿ ಮಂದಹಾಸ ಮೂಡಿಸಿಬಿಡುತ್ತವೆ. ಎಷ್ಟು ದೊಡ್ಡವರಾದರೂ ಮಕ್ಕಳ ಜೊತೆ ಇದ್ದಾಗ ಮಕ್ಕಳಂತೆ ಯೋಚಿಸಿದರೆ ಮಾತ್ರ ಚೆನ್ನ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ನರ್ಸರಿ ಶಾಲೆಯ ಉಪಪ್ರಾಂಶುಪಾಲರು ಬರೆದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಸ್ಸು ಗೆದ್ದಿದೆ.
ಶಾಲೆಯಲ್ಲಿ ಪುಟ್ಟ ಹುಡುಗನೊಬ್ಬನ ಹಲ್ಲು ಮುರಿದುಹೋಗಿದ್ದಕ್ಕೆ ಶಿಕ್ಷಕಿ ಅವನನ್ನು ಸಮಾಧಾನಿಸುವ ಸಲುವಾಗಿ ಒಂದು ಪತ್ರ ಬರೆದಿದ್ದಾರೆ. ಕಿನ್ನರಿ ಇವನ ಹಲ್ಲಿಗೆ ಪ್ರತಿಯಾಗಿ ಉಡುಗೊರೆ ಕೊಡು ಎಂದು ಬರೆದಿರುವ ಪತ್ರದ ಭಾವಾನುವಾದ ಇಲ್ಲಿದೆ.
——-
ಹಾರ್ಟ್ ಹೈಲ್ಯಾಂಡ್ಸ್ ಎಲಿಮೆಂಟರಿ ಸ್ಕೂಲ್
ಪ್ರಿಯ ಕಿನ್ನರಿ,
ಇಂದು ನಮ್ಮ ಪುಟ್ಟ ಗೇವಿನ್ ಮಧ್ಯಾಹ್ನದ ಊಟಕ್ಕೆ ತಯಾರಾಗುತ್ತಿದ್ದ ಹೊತ್ತಿನಲ್ಲೇ ಅವನ ಒಂದು ಹಲ್ಲು ಕಳಚಿ ಬಿದ್ದಿದೆ. ಅದು ತರಗತಿಯಲ್ಲೇ ಉದುರಿಹೋಗಿದೆಯಾದರೂ ನಮ್ಮ ತಂಡದ ಶತಾಯುಗತಾಯ ಪ್ರಯತ್ನದ ನಂತರವೂ ಹಲ್ಲನ್ನು ಹುಡುಕೋದು ಸಾಧ್ಯವಾಗಲೇ ಇಲ್ಲ. ಅವನಿಗೆ ಹಲ್ಲು ಹುಡುಕಿ ಕೊಡುವುದರಲ್ಲಿ ನಾವು ಸೋತು ಹೋಗಿದ್ದೇವೆ.
ಬೆಳಗ್ಗೆ ಗೇವಿನ್ ಶಾಲೆಗೆ ಬರುವಾಗ ಅವನ ಹಲ್ಲುಗಳು ಸರಿಯಾಗಿಯೇ ಇದ್ದವು. ಆದರೆ, ಮಧ್ಯಾಹ್ನ ಆಗುವಷ್ಟರಲ್ಲಿ ಅದು ಹೇಗೋ ಏನೋ ಹಲ್ಲುಗಳ ನಡುವೆ ಪುಟಾಣಿ ಅಂತರ ಕಾಣಿಸಿಕೊಂಡಿದೆ. ಒಬ್ಬ ಅನುಭವಿ ಶಿಕ್ಷಕಿ ಮತ್ತು ಹವ್ಯಾಸಿ ದಂತ ವೈದ್ಯಳಾಗಿರುವ ನಾನು ಇದನ್ನು ಖಂಡಿತವಾಗಿಯೂ ದೃಢಪಡಿಸಬಲ್ಲೆ.
ದಯವಿಟ್ಟು ನನ್ನ ಈ ಪತ್ರವನ್ನು ಗೇವಿನ್ನ ಹಲ್ಲು ಕಳೆದು ಹೋಗಿರುವುದಕ್ಕೆ ಸಾಕ್ಷಿಯೆಂದು ಪರಿಗಣಿಸು ಮತ್ತು ಆ ಹಲ್ಲು ತೆಗೆದುಕೊಂಡಿರುವುದಕ್ಕೆ ಪ್ರತಿಯಾಗಿ ಈ ಪುಟಾಣಿಗೆ ನೀನು ಬೇರೆಯವರಿಗೆ ಕೊಡುವಂತೆಯೇ ಉಡುಗೊರೆ ರೂಪದಲ್ಲಿ ಹಣವನ್ನು ಕೊಟ್ಟುಬಿಡು.
ನಿನಗೆ ಇದರ ಬಗ್ಗೆ ಏನೇ ಅನುಮಾನವಿದ್ದರೂ ಮೇಲಿರುವ ವಿಳಾಸದ ಮೂಲಕ ನನ್ನನ್ನು ಧಾರಾಳವಾಗಿ ಸಂಪರ್ಕಿಸು.
ಇಂತಿ ನಿನ್ನ ವಿಶ್ವಾಸಿ, ಶಾಂಡೀ ಎಂ ವೈಟ್ಹೆಡ್
ವಿಶೇಷ ಸೂಚನೆ: ನಾನು 2000ನೇ ಇಸವಿಯಲ್ಲಿ ಕಳೆದುಕೊಂಡ ಬುದ್ಧಿವಂತ ಹಲ್ಲಿಗೆ ನೀನಿನ್ನೂ ದುಡ್ಡು ಕೊಡುವುದು ಬಾಕಿಯಿದೆ. ಅದಕ್ಕಾಗಿ ನಾನು ಕಾಯುತ್ತಲೇ ಇದ್ದೇನೆ. ಆದಷ್ಟು ಬೇಗ ನನಗೂ ದುಡ್ಡು ಕೊಡು. ನನಗೆ ನನ್ನದೇ ಆದ ಖರ್ಚಿದೆ!
In addition to contributing to a long-term plan for ST success, cultivating leadership in others, managing PPL, data, & processes, & improving school leadership … a VP has the duty of helping to create a positive school culture … one that saves the day! pic.twitter.com/udZhQ19SGV
— shandeemay (@shandeemay1) January 13, 2021
ಓದು ಮಗು ಓದು: ಯಾವ ಪುಸ್ತಕವದು ಅನನ್ಯಳನ್ನು ಅಮೆರಿಕಕ್ಕೆ ಕರೆದೊಯ್ದಿದ್ದು?
Published On - 6:58 pm, Sat, 16 January 21