ಕಬಿನಿ ನಾಲೆಯಲ್ಲಿ ಈಜಲು ಹೋಗಿದ್ದ.. BSP ತಾಲೂಕು ಅಧ್ಯಕ್ಷ ನಾಪತ್ತೆ

ಮೈಸೂರು: ಕಬಿನಿ ನಾಲೆಯಲ್ಲಿ ಈಜಲು ಹೋದ BSP ತಾಲೂಕು ಅಧ್ಯಕ್ಷ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಗಾರಿಪುರದಲ್ಲಿ ನಡೆದಿದೆ. 48 ವರ್ಷದ ರಾಮಚಂದ್ರಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ವಾಕಿಂಗ್ ಮುಗಿಸಿ, ನಾಲೆಗೆ ಈಜಲು ಇಳಿದಿದ್ದರು ತಗಡೂರು ರಾಮಚಂದ್ರ ಸಿಂಗಾರಿಪುರ ಮತ್ತು ಉಪ್ಪಿನಹಳ್ಳಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ ವಾಕಿಂಗ್ ಮುಗಿಸಿ ನಾಲೆಗೆ ಈಜಲು ಇಳಿದಿದ್ದರು ಎಂದು ಹೇಳಲಾಗಿದೆ. ದೇಹದಲ್ಲಿ ಬೆವರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದರಂತೆ. ಇದೇ ವೇಳೆ, ರಾಮಚಂದ್ರ ನಾಲೆಯಲ್ಲಿ ಮುಳುಗುವುದನ್ನು ಜೊತೆಯಲ್ಲಿ ವಾಕ್ ಮಾಡುತ್ತಿದ್ದ ಗ್ರಾಮದ […]

ಕಬಿನಿ ನಾಲೆಯಲ್ಲಿ ಈಜಲು ಹೋಗಿದ್ದ.. BSP ತಾಲೂಕು ಅಧ್ಯಕ್ಷ ನಾಪತ್ತೆ
Edited By: ಸಾಧು ಶ್ರೀನಾಥ್​

Updated on: Oct 12, 2020 | 10:54 AM

ಮೈಸೂರು: ಕಬಿನಿ ನಾಲೆಯಲ್ಲಿ ಈಜಲು ಹೋದ BSP ತಾಲೂಕು ಅಧ್ಯಕ್ಷ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಸಿಂಗಾರಿಪುರದಲ್ಲಿ ನಡೆದಿದೆ. 48 ವರ್ಷದ ರಾಮಚಂದ್ರಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

ವಾಕಿಂಗ್ ಮುಗಿಸಿ, ನಾಲೆಗೆ ಈಜಲು ಇಳಿದಿದ್ದರು
ತಗಡೂರು ರಾಮಚಂದ್ರ ಸಿಂಗಾರಿಪುರ ಮತ್ತು ಉಪ್ಪಿನಹಳ್ಳಿ ಮುಖ್ಯರಸ್ತೆಯಲ್ಲಿ ಬೆಳಗ್ಗೆ ವಾಕಿಂಗ್ ಮುಗಿಸಿ ನಾಲೆಗೆ ಈಜಲು ಇಳಿದಿದ್ದರು ಎಂದು ಹೇಳಲಾಗಿದೆ. ದೇಹದಲ್ಲಿ ಬೆವರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾಲೆಯಲ್ಲಿ ಈಜಲು ತೆರಳಿದ್ದರಂತೆ. ಇದೇ ವೇಳೆ, ರಾಮಚಂದ್ರ ನಾಲೆಯಲ್ಲಿ ಮುಳುಗುವುದನ್ನು ಜೊತೆಯಲ್ಲಿ ವಾಕ್ ಮಾಡುತ್ತಿದ್ದ ಗ್ರಾಮದ ಮತ್ತೊಬ್ಬ ಯುವಕನಿಗೆ ಕಾಣಸಿದೆ ಎಂದು ಹೇಳಲಾಗಿದೆ. ಹಾಗಾಗಿ, ಆತ ಗ್ರಾಮದವರಿಗೆ ವಿಷಯ ಮುಟ್ಟಿಸಿದ್ದಾನೆ.

ಕೂಡಲೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಾಲೆಯಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ರಾಮಚಂದ್ರ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ರಾಮಚಂದ್ರಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.

KUSHAL V
Loading...
Unable to load recommendations.
Follow Us