AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2021 | ಮಧ್ಯಮ ವರ್ಗದವರಿಗಿಲ್ಲ ರಿಲೀಫ್​: ಟ್ವಿಟರ್​ನಲ್ಲಿ ಸಖತ್​ ಟ್ರೋಲ್​

ಬಜೆಟ್​ ಮಂಡನೆ ಪೂರ್ಣಗೊಂಡ ಬೆನ್ನಲ್ಲೇ ಟ್ವಿಟರ್​ನಲ್ಲಿ ಸಾಕಷ್ಟು ಟ್ರೋಲ್​​ಗಳು ಹರಿದಾಡಿವೆ. ಕೇಂದ್ರ ಸರ್ಕಾರ ಆಯವ್ಯಯ ಪತ್ರದಲ್ಲಿ ಮಧ್ಯವರ್ಗದವರಿಗೆ ಏನು ನೀಡಿಲ್ಲ ಎನ್ನುವ ವಿಚಾರದ ಬಗ್ಗೆ ಟ್ರೋಲ್​ ಮಾಡಲಾಗಿದೆ.

Budget 2021 | ಮಧ್ಯಮ ವರ್ಗದವರಿಗಿಲ್ಲ ರಿಲೀಫ್​: ಟ್ವಿಟರ್​ನಲ್ಲಿ ಸಖತ್​  ಟ್ರೋಲ್​
ಟ್ರೋಲ್​ ಆದ ಟ್ವೀಟ್​
ರಾಜೇಶ್ ದುಗ್ಗುಮನೆ
| Edited By: |

Updated on: Feb 01, 2021 | 4:24 PM

Share

ನವದೆಹಲಿ: 2021-22ರ ಬಜೆಟ್​ಗೆ ಕೆಲವರು ಮೆಚ್ಚುಗೆಯ ಮಾತನಾಡಿದರೆ, ಇನ್ನೂ ಕೆಲವರು ಬಜೆಟ್​ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ, ಮಧ್ಯಮ ವರ್ಗದವರಿಗೆ ಬಜೆಟ್​ನಲ್ಲಿ ಏನೂ ನೀಡಿಲ್ಲ ಎನ್ನುವ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಆಗಿದೆ.

ಬೆಳಗ್ಗೆ 11 ಗಂಟೆಗೆ ಬಜೆಟ್ ಆರಂಭಗೊಂಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರೋಬ್ಬರಿ 1.50 ಗಂಟೆಗಳ ಕಾಲ ಬಜೆಟ್​ ಮಂಡನೆ ಮಾಡಿದರು. ಆದಾಯ ತೆರಿಗೆ ವಿನಾಯಿತಿ ಸೇರಿ ಸಾಕಷ್ಟು ಭರವಸೆಗಳನ್ನು ಮಧ್ಯಮ ವರ್ಗದವರು ಹೊಂದಿದ್ದರು. ಆದರೆ, ಮಧ್ಯಮ ವರ್ಗದವರಿಗೆ ಹೇಳಿಕೊಳ್ಳುವಂಥ ಯಾವುದೇ ಭರವಸೆ ಸಿಕ್ಕಿಲ್ಲ.

ಬಜೆಟ್​ ಮಂಡನೆ ಪೂರ್ಣಗೊಂಡ ಬೆನ್ನಲ್ಲೇ ಟ್ವಿಟರ್​ನಲ್ಲಿ ಸಾಕಷ್ಟು ಟ್ರೋಲ್​​ಗಳು ಹರಿದಾಡಿವೆ. ಕೇಂದ್ರ ಸರ್ಕಾರ ಆಯವ್ಯಯ ಪತ್ರದಲ್ಲಿ ಮಧ್ಯವರ್ಗದವರಿಗೆ ಏನು ನೀಡಿಲ್ಲ ಎನ್ನುವ ವಿಚಾರದ ಬಗ್ಗೆ ಟ್ರೋಲ್​ ಮಾಡಲಾಗಿದೆ. ಟ್ರೋಲ್​ ಆದ ಟ್ವೀಟ್​ಗಳು ಇಲ್ಲಿವೆ.

Budget 2021: ಕೃಷಿ ಸೆಸ್‌ನಿಂದ ಗ್ರಾಹಕರಿಗೆ ಯಾವುದೇ ಹೊರೆ ಆಗುವುದಿಲ್ಲ- ನಿರ್ಮಲಾ ಸೀತಾರಾಮನ್​ ಸ್ಪಷ್ಟನೆ