Budget 2021: ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿಲ್ಲ ಬದಲಾವಣೆ: 75 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿ
ಹೆಚ್ಚು ತೆರಿಗೆ ಪಾವತಿ ಮಾಡುವವರಿಗೆ ಕೊವಿಡ್ ಸೆಸ್ ಹೇರಿಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ, ಬಜೆಟ್ನಲ್ಲಿ ಕೇಂದ್ರ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ ಇಂದಿನ ಬಜೆಟ್ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದರ ಜೊತೆಗೆ ನೇರ ತೆರಿಗೆಯಲ್ಲೂ ಹೆಚ್ಚಿನ ವ್ಯತ್ಯಾಸ ಆಗಿಲ್ಲ.
ಕೊರೊನಾ ಲಸಿಕೆ ನೀಡಲು ಅಂದಾಜು 60-65 ಸಾವಿರ ಕೋಟಿ ಅಗತ್ಯವಿದ್ದು, ಈ ಮೊತ್ತದ ಹಣ ಸಂಗ್ರಹಿಸಲು ಗರಿಷ್ಠ ಶೇ 2ರಷ್ಟು ಕೊರೊನಾ ಸೆಸ್ ವಿಧಿಸುವ ಕುರಿತು ಹಣಕಾಸು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿತ್ತು. ಆದರೆ, ಬಜೆಟ್ನಲ್ಲಿ ಕೇಂದ್ರ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಇದು ತೆರಿಗೆ ಪಾವತಿದಾರರಿಗೆ ದೊಡ್ಡ ರಿಲೀಫ್ ನೀಡಿದಂತಾಗಿದೆ.
75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. 75 ವರ್ಷ ಮೇಲ್ಪಟ್ಟಟ್ಟಿದ್ದು ಅವರಿಗೆ ಪಿಂಚಣಿ ಹಾಗೂ ಬಡ್ಡಿ ಮಾತ್ರ ಆದಾಯವಾಗಿದ್ದರೆ ತೆರಿಗೆಯಲ್ಲಿ ವಿನಾಯಿತಿ ನಿಡುತ್ತಿದ್ದೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಕಳೆದ ವರ್ಷ ಸರ್ಕಾರ ಆದಾಯ ತೆರಿಗೆ ವಿನಾಯಿತಿ ನೀಡಿತ್ತು. 2.5- 5 ಲಕ್ಷ ರೂಪಾಯಿವರೆಗೆ ಗಳಿಕೆ ಮಾಡುವವರು ಶೇ. 5 ತೆರಿಗೆ ಪಾವತಿಸಬೇಕು. 5-7.5 ಲಕ್ಷದವರೆಗೆ ಶೇ.10, 7.5-10 ಲಕ್ಷ ಆದಾಯದವರಿಗೆ ಶೇ.15, 10-12.5 ಲಕ್ಷ ಆದಾಯ ಹೊಂದುವರಿಗೆ ಶೇ.20 ಹಾಗೂ 12.5-15 ಲಕ್ಷ ಆದಾಯ ಇರುವವರಿಗೆ ಶೇ. 25 ಹಾಗೂ 15 ಲಕ್ಷ ರೂಪಾಯಿಗಿಂತ ಮೇಲ್ಪಟ್ಟವರಿಗೆ ಶೇ.20 ತೆರಿಗೆ ವಿಧಿಸುವ ಬಗ್ಗೆ ಸರ್ಕಾರ ಘೋಷಣೆ ಮಾಡಿತ್ತು.
Budget 2021 | ಷೇರುಪೇಟೆ ಭಾರೀ ಏರಿಕೆ: ಬ್ಯಾಂಕ್, ಆಟೊಮೊಬೈಲ್ ವಲಯ ಜಿಗಿತ
Published On - 2:15 pm, Mon, 1 February 21