ಕೊರೊನಾಗೆ ಡೋಂಟ್​ ಕೇರ್! ಮಳೆಯಲ್ಲೇ ಹೋರಿ ಓಡಿಸಿ ಸಂಭ್ರಮಿಸಿದ ಗ್ರಾಮಸ್ಥರು

ಹಾವೇರಿ: ಕಾರ ಹುಣ್ಣಿಮೆಯ ದಿನ, ಮಳೆಯ ಮಧ್ಯೆ, ಕೊರೊನಾ ಭೀತಿಯ ನಡುವೆಯೂ ಹೋರಿಗಳನ್ನು ಓಡ್ಸಿ, ಓಡಿಸಿ ಗ್ರಾಮಸ್ಥರು ಭರಪೂರ ಸಂಭ್ರಮಿಸಿದರು. ಯಾವ ಕೊರೊನಾ ಭಯವೂ ಇರಲಿಲ್ಲ ಅಲ್ಲಿ. ಕಾರ ಹುಣ್ಣಿಮೆಯ ಪ್ರಯುಕ್ತ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಈ ಹೋರಿ ಓಟ ಅಬಾಧಿತವಾಗಿ ನಡೆಯಿತು. ಕೊರೊನಾ ಸೋಂಕು ಭೀತಿಗೆ ಡೋಂಟ್ ಕೇರ್ ಅನ್ನದ ಸಾವಿರಾರು ಗ್ರಾಮಸ್ಥರು ಕೊರನಾ ಕಾಲದಲ್ಲಿ ಸಾಮಾಜಿಕ ಅಂತರ ಮರೆತು, ಹೋರಿ ಓಟದಲ್ಲಿ ಭಾಗಿಯಾದರು. ಜನ ಸೇರಬಾರದು ಎಂದು ಜಿಲ್ಲಾಧಿಕಾರಿ ಆದೇಶವಿದ್ದರೂ ಅದನ್ನು […]

ಕೊರೊನಾಗೆ ಡೋಂಟ್​ ಕೇರ್! ಮಳೆಯಲ್ಲೇ ಹೋರಿ ಓಡಿಸಿ ಸಂಭ್ರಮಿಸಿದ ಗ್ರಾಮಸ್ಥರು
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jun 17, 2020 | 1:27 PM

ಹಾವೇರಿ: ಕಾರ ಹುಣ್ಣಿಮೆಯ ದಿನ, ಮಳೆಯ ಮಧ್ಯೆ, ಕೊರೊನಾ ಭೀತಿಯ ನಡುವೆಯೂ ಹೋರಿಗಳನ್ನು ಓಡ್ಸಿ, ಓಡಿಸಿ ಗ್ರಾಮಸ್ಥರು ಭರಪೂರ ಸಂಭ್ರಮಿಸಿದರು. ಯಾವ ಕೊರೊನಾ ಭಯವೂ ಇರಲಿಲ್ಲ ಅಲ್ಲಿ. ಕಾರ ಹುಣ್ಣಿಮೆಯ ಪ್ರಯುಕ್ತ ಜಿಲ್ಲೆಯ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಈ ಹೋರಿ ಓಟ ಅಬಾಧಿತವಾಗಿ ನಡೆಯಿತು.

ಕೊರೊನಾ ಸೋಂಕು ಭೀತಿಗೆ ಡೋಂಟ್ ಕೇರ್ ಅನ್ನದ ಸಾವಿರಾರು ಗ್ರಾಮಸ್ಥರು ಕೊರನಾ ಕಾಲದಲ್ಲಿ ಸಾಮಾಜಿಕ ಅಂತರ ಮರೆತು, ಹೋರಿ ಓಟದಲ್ಲಿ ಭಾಗಿಯಾದರು. ಜನ ಸೇರಬಾರದು ಎಂದು ಜಿಲ್ಲಾಧಿಕಾರಿ ಆದೇಶವಿದ್ದರೂ ಅದನ್ನು ಪಕ್ಕಕ್ಕಿಟ್ಟು ಹೋರಿಗಳನ್ನ ಓಡಿಸಿ, ಉಲ್ಲಸಿತರಾದರು ಗ್ರಾಮದ ಯುವಕರು. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 6:04 pm, Mon, 15 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us