ಸಿಬ್ಬಂದಿಯನ್ನ ಕೆಲಸದಿಂದ ತೆಗೆಯೊಲ್ಲ, ಬಸ್​ ಪಾಸ್ ದರ ಏರಿಸಲ್ಲ -ಸವದಿ

| Updated By:

Updated on: May 26, 2020 | 5:20 PM

ಹುಬ್ಬಳ್ಳಿ: ಕೊರೊನಾದಿಂದ ರಾಜ್ಯ ಸಾರಿಗೆ ಇಲಾಖೆಗೆ ದೊಡ್ಡ ನಷ್ಟ ಆಗಿದೆ. ಆದ್ರೆ ಯಾವುದೇ ಕಾರಣಕ್ಕೂ ನಮ್ಮ ಯಾವ ಸಿಬ್ಬಂದಿಯನ್ನೂ ಕೆಲಸದಿಂದ ತೆಗೆಯಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅರ್ಧ ಸಂಬಳ ನೀಡಲು ಸರ್ಕಾರ ಒಪ್ಪಿದೆ: ನಾವು ನಮ್ಮ ಎಲ್ಲಾ ನೌಕರರಿಗೆ ಏಪ್ರಿಲ್ ತಿಂಗಳ ಸಂಬಳ ನೀಡಿದ್ದೇವೆ. ಮೇ ತಿಂಗಳ ಸಂಬಳದ ಬಗ್ಗೆಯೂ ಈಗಾಗಲೆ ಯೋಚನೆ ಮಾಡುತ್ತಿದ್ದೇವೆ. ಅರ್ಧ ಸಂಬಳ‌ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಎಲ್ಲಾ ನಿಗಮಗಳ ಸಭೆ ನಡೆಸಿ […]

ಸಿಬ್ಬಂದಿಯನ್ನ ಕೆಲಸದಿಂದ ತೆಗೆಯೊಲ್ಲ, ಬಸ್​ ಪಾಸ್ ದರ ಏರಿಸಲ್ಲ -ಸವದಿ
Follow us on

ಹುಬ್ಬಳ್ಳಿ: ಕೊರೊನಾದಿಂದ ರಾಜ್ಯ ಸಾರಿಗೆ ಇಲಾಖೆಗೆ ದೊಡ್ಡ ನಷ್ಟ ಆಗಿದೆ. ಆದ್ರೆ ಯಾವುದೇ ಕಾರಣಕ್ಕೂ ನಮ್ಮ ಯಾವ ಸಿಬ್ಬಂದಿಯನ್ನೂ ಕೆಲಸದಿಂದ ತೆಗೆಯಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅರ್ಧ ಸಂಬಳ ನೀಡಲು ಸರ್ಕಾರ ಒಪ್ಪಿದೆ:
ನಾವು ನಮ್ಮ ಎಲ್ಲಾ ನೌಕರರಿಗೆ ಏಪ್ರಿಲ್ ತಿಂಗಳ ಸಂಬಳ ನೀಡಿದ್ದೇವೆ. ಮೇ ತಿಂಗಳ ಸಂಬಳದ ಬಗ್ಗೆಯೂ ಈಗಾಗಲೆ ಯೋಚನೆ ಮಾಡುತ್ತಿದ್ದೇವೆ. ಅರ್ಧ ಸಂಬಳ‌ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಎಲ್ಲಾ ನಿಗಮಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಅಲ್ಲದೆ ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡಿ ಮೇ ತಿಂಗಳ ಸಂಬಳವೂ ನೀಡಲು ಪ್ರಯತ್ನ ಮಾಡುತ್ತೇನೆ.

ಬಸ್‌ ದರ ಏರಿಕೆ ಮಾಡಲ್ಲ:
ಭ್ರಷ್ಟಾಚಾರ ನಿಲ್ಲಬೇಕು ಹಾಗಾದ್ರೆ ಮಾತ್ರ ಲಾಭ ಆಗುತ್ತೆ. ಸಂಸ್ಥೆಯಲ್ಲಿ ಭ್ರಷ್ಟಾಚಾರ ತಡೆಯುವ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಸ್‌ ಪ್ರಯಾಣಿಕರ ದರ ಏರಿಕೆ ಮಾಡುವುದಿಲ್ಲ. ವಿದ್ಯಾರ್ಥಿ ಪಾಸ್‌ ಸೇರಿ ಯಾವುದೇ ಪಾಸ್‌ ದರ ಹೆಚ್ಚಿಸುವುದಿಲ್ಲ. ದರ ಹೆಚ್ಚಿಸುವ ಪ್ರಸ್ತಾಪವೂ ನಮ್ಮ ಮುಂದೆ ಇಲ್ಲ.

ರಾತ್ರಿ ವೇಳೆಯೂ ಬಸ್‌ ಪ್ರಯಾಣ ಆರಂಭಿಸುತ್ತೇವೆ:
ಈಗಾಗಲೆ ನಾವು ಬಸ್ ಪ್ರಯಾಣ ಆರಂಭ ಮಾಡಿದ್ದೇವೆ. ಆದ್ರು ಸಂಸ್ಥೆಗೆ ನಷ್ಟ ಆಗುತ್ತಿದೆ, ಯಾಕಂದ್ರೆ ಕೇವಲ 30 ಜನ ಮಾತ್ರ ನಾವು ತೆಗೆದುಕೊಳ್ಳುತ್ತಿದ್ದೇವೆ. ಹಾಗಾಗಿ ಇನ್ಮುಂದೆ ಪ್ರಯಾಣಿಕರನ್ನ ನೋಡಿಕೊಂಡು ರಾತ್ರಿ ವೇಳೆಯೂ ಬಸ್‌ ಪ್ರಯಾಣ ಆರಂಭಿಸುತ್ತೇವೆ. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಹೇಳಿದ್ದೇನೆ. ಬೆಂಗಳೂರಿನಲ್ಲಿ ಪಾಸ್‌ ಸಿಸ್ಟಮ್‌ ತೆಗೆದು ಬಿಟ್ಟಿದ್ದೇವೆ. ಕಿಲೋ ಮೀಟರ್ ನೋಡಿ ಟಿಕೆಟ್ ದರ ನಿಗದಿಗೆ ಸೂಚನೆ ನೀಡಿದ್ದೇವೆ.

Published On - 5:19 pm, Tue, 26 May 20