ಕೊರೊನಾ ಸಂಕಷ್ಟದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ACB ಬಲೆಗೆ
ಗದಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 40 ಸಾವಿರ ಲಂಚ ಪಡೆಯುವಾಗ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಕುಕನೂರ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. 3 ಲಕ್ಷ ಸಬ್ಸಿಡಿ ಹಣದ ಚೆಕ್ ನೀಡಲು 40 ಸಾವಿರ ಹಣಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದ. ನರಗುಂದ ಪಟ್ಟಣದ ಫಾರೂಕ್ ಅಹಮದ್ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ವಾಸುದೇವ ರಾಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಜಾಕೀರ್ ಹುಸೇನ್ ಹಾಗೂ ಕಂಪ್ಯೂಟರ್ ಆಪರೇಟರ್ […]
ಗದಗ: ಕೊರೊನಾ ಸಂಕಷ್ಟದ ಸಮಯದಲ್ಲೂ ಲಂಚಕ್ಕೆ ಕೈಚಾಚಿದ್ದ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. 40 ಸಾವಿರ ಲಂಚ ಪಡೆಯುವಾಗ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಾಕೀರ್ ಹುಸೇನ್ ಕುಕನೂರ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
3 ಲಕ್ಷ ಸಬ್ಸಿಡಿ ಹಣದ ಚೆಕ್ ನೀಡಲು 40 ಸಾವಿರ ಹಣಕ್ಕೆ ಅಧಿಕಾರಿ ಬೇಡಿಕೆ ಇಟ್ಟಿದ್ದ. ನರಗುಂದ ಪಟ್ಟಣದ ಫಾರೂಕ್ ಅಹಮದ್ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ವಾಸುದೇವ ರಾಮ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಜಾಕೀರ್ ಹುಸೇನ್ ಹಾಗೂ ಕಂಪ್ಯೂಟರ್ ಆಪರೇಟರ್ ಅಕ್ಬರ್ ಕೂಡಾ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಹಲವಾರು ಫಲಾನುಭವಿಗಳ ಚೆಕ್ಗಳು ನೀಡದೇ ಕಚೇರಿಯಲ್ಲಿ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.