AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DCM ಸವದಿ ಕ್ಷೇತ್ರದಲ್ಲಿ ಯಡವಟ್ಟು, ಮನೆಗೆ ಕಳುಹಿಸಿದ್ದ 13ಮಂದಿಗೂ ಕೊರೊನಾ

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರ ಅಥಣಿಯಲ್ಲಿ ಅಧಿಕಾರಿಗಳ ಮಹಾಯಡವಟ್ಟು ಮಾಡಿಕೊಂಡಿದ್ದಾರೆ. ಕೊರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್​ನಲ್ಲಿದ್ದವರನ್ನು ಬಿಡುಗಡೆ ಮಾಡಿದ್ದಾರೆ. ಅಥಣಿ ತಹಶೀಲ್ದಾರ್ ಬೇಜವಾಬ್ದಾರಿಗೆ ಇದೀಗ 4 ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ. ಮೇ 6ರಂದು ಜಾರ್ಖಂಡ್​ನಿಂದ ಅಥಣಿಗೆ 44 ಜನ ಬಂದಿದ್ದರು. ಹಾಗಾಗಿ ಮೇ 6 ರಿಂದ ಮೇ 20ರವರೆಗೆ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಯಾರಲ್ಲೂ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ 14 ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದಕ್ಕೆ ಎಲ್ಲರನ್ನೂ ಬಿಡುಗಡೆ […]

DCM ಸವದಿ ಕ್ಷೇತ್ರದಲ್ಲಿ ಯಡವಟ್ಟು, ಮನೆಗೆ ಕಳುಹಿಸಿದ್ದ 13ಮಂದಿಗೂ ಕೊರೊನಾ
ಸಾಧು ಶ್ರೀನಾಥ್​
|

Updated on:May 26, 2020 | 4:53 PM

Share

ಬೆಳಗಾವಿ: ಡಿಸಿಎಂ ಲಕ್ಷ್ಮಣ ಸವದಿ ಕ್ಷೇತ್ರ ಅಥಣಿಯಲ್ಲಿ ಅಧಿಕಾರಿಗಳ ಮಹಾಯಡವಟ್ಟು ಮಾಡಿಕೊಂಡಿದ್ದಾರೆ. ಕೊರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಕ್ವಾರಂಟೈನ್​ನಲ್ಲಿದ್ದವರನ್ನು ಬಿಡುಗಡೆ ಮಾಡಿದ್ದಾರೆ. ಅಥಣಿ ತಹಶೀಲ್ದಾರ್ ಬೇಜವಾಬ್ದಾರಿಗೆ ಇದೀಗ 4 ಗ್ರಾಮಗಳಿಗೆ ಸಂಕಷ್ಟ ಎದುರಾಗಿದೆ.

ಮೇ 6ರಂದು ಜಾರ್ಖಂಡ್​ನಿಂದ ಅಥಣಿಗೆ 44 ಜನ ಬಂದಿದ್ದರು. ಹಾಗಾಗಿ ಮೇ 6 ರಿಂದ ಮೇ 20ರವರೆಗೆ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಯಾರಲ್ಲೂ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ 14 ದಿನ ಕ್ವಾರಂಟೈನ್ ಪೂರ್ಣಗೊಳಿಸಿದ್ದಕ್ಕೆ ಎಲ್ಲರನ್ನೂ ಬಿಡುಗಡೆ ಮಾಡಲಾಗಿತ್ತು.

ಮೇ 20ಕ್ಕೆ ಊರಿಗೆ ತೆರಳಿದ ಬಳಿಕ ತಮ್ಮ ಊರು ಸೇರಿದಂತೆ ಅಥಣಿ ತಾಲೂಕಿನಲ್ಲಿ ಮಾರ್ಕೆಟ್ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಓಡಾಡಿಕೊಂಡಿದ್ದರು. ಆದ್ರೆ ಇಂದು 13ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಥಣಿ ತಾಲೂಕಿನ ಸವದಿ ಗ್ರಾಮದ 8, ಬೆಳವಕ್ಕಿ ಗ್ರಾಮದ 1, ನಂದಗಾಂವ 3, ಝುಂಜರವಾಡ ಗ್ರಾಮದಲ್ಲಿ 1 ಕೇಸ್ ಪತ್ತೆಯಾಗಿದೆ. ಇದೀಗ ನೆರೆ ಹೊರೆಯ ಗ್ರಾಮಗಳಿಗೆ ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿದೆ.

Published On - 4:52 pm, Tue, 26 May 20