AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಟ್ನೆಸ್ ಪಾಸ್ ಮಾಡಲು ತುದಿಗಾಲಲ್ಲಿ ನಿಂತ ರೋಹಿತ್ ಶರ್ಮಾ

ಕಳೆದ ವಿಶ್ವಕಪ್​ನಲ್ಲಿ ಒಂದಲ್ಲಾ ಎರಡಲ್ಲಾ ಐದು ಶತಕಗಳನ್ನ ಸಿಡಿಸಿ ವಿಶ್ವದಾಖಲೆ ಬರೆದಿದ್ದ ರೋಹಿತ್ ಶರ್ಮಾ, ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ರು. ಆದ್ರೆ ಈ ವರ್ಷ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಉಪನಾಯಕ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ರು. ಹೌದು.. ನ್ಯೂಜಿಲೆಂಡ್ ವಿರುದ್ಧದ 5ನೇ ಟಿಟ್ವೆಂಟಿ ಪಂದ್ಯದಲ್ಲಿ ಅಜೇಯ 60 ರನ್​ಗಳಿಸಿ ಅಬ್ಬರಿಸಿತ್ತಿದ್ದ ರೋಹಿತ್ ಶರ್ಮಾ, ಕಾಫ್ ಇಂಜುರಿಗೆ ತುತ್ತಾಗಿದ್ರು. ನೋವು ತಾಳಲಾರದೇ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಹೇಳಿ ಪೆವಿಲಿಯನ್ ಸೇರಿಕೊಂಡಿದ್ರು. ಇದಾದ ಬಳಿಕ ರೋಹಿತ್ ಶರ್ಮಾ ನ್ಯೂಜಿಲೆಂಡ್ […]

ಫಿಟ್ನೆಸ್ ಪಾಸ್ ಮಾಡಲು ತುದಿಗಾಲಲ್ಲಿ ನಿಂತ ರೋಹಿತ್ ಶರ್ಮಾ
ಆಯೇಷಾ ಬಾನು
|

Updated on:May 26, 2020 | 3:11 PM

Share

ಕಳೆದ ವಿಶ್ವಕಪ್​ನಲ್ಲಿ ಒಂದಲ್ಲಾ ಎರಡಲ್ಲಾ ಐದು ಶತಕಗಳನ್ನ ಸಿಡಿಸಿ ವಿಶ್ವದಾಖಲೆ ಬರೆದಿದ್ದ ರೋಹಿತ್ ಶರ್ಮಾ, ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ರು. ಆದ್ರೆ ಈ ವರ್ಷ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದ ಉಪನಾಯಕ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ರು.

ಹೌದು.. ನ್ಯೂಜಿಲೆಂಡ್ ವಿರುದ್ಧದ 5ನೇ ಟಿಟ್ವೆಂಟಿ ಪಂದ್ಯದಲ್ಲಿ ಅಜೇಯ 60 ರನ್​ಗಳಿಸಿ ಅಬ್ಬರಿಸಿತ್ತಿದ್ದ ರೋಹಿತ್ ಶರ್ಮಾ, ಕಾಫ್ ಇಂಜುರಿಗೆ ತುತ್ತಾಗಿದ್ರು. ನೋವು ತಾಳಲಾರದೇ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಹೇಳಿ ಪೆವಿಲಿಯನ್ ಸೇರಿಕೊಂಡಿದ್ರು. ಇದಾದ ಬಳಿಕ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದಲೇ ಹೊರಗುಳಿದಿದ್ರು.

ತವರಿಗೆ ಬಂದ ರೋಹಿತ್ ಶರ್ಮಾ, ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ, ರಿಹ್ಯಾಬ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ರು. ಆದ್ರೆ ಕೊರೊನಾದಿಂದಾಗಿ ದೇಶವ್ಯಾಪಿ ಲಾಕ್​ಡೌನ್ ಘೋಷಿಸುತ್ತಿದ್ದಂತೆ ರೋಹಿತ್ ಶರ್ಮಾ ಮುಂಬೈಗೆ ತೆರಳಿದ್ರು.

ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್: 2 ತಿಂಗಳ ಕಾಲ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡಿರೋ ರೋಹಿತ್ ಶರ್ಮಾ, ಈಗ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಹಾಗೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ರೋಹಿತ್ ಶರ್ಮಾ ಮತ್ತೆ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡ್ಬೇಕು ಅಂದ್ರೆ, ಫಿಟ್ನೆಸ್ ಪರೀಕ್ಷೆಯನ್ನ ಪಾಸ್ ಮಾಡಲೇಬೇಕು. ಈ ಬಗ್ಗೆ ಮಾತನಾಡಿರೋ ರೋಹಿತ್ ಶರ್ಮಾ ಲಾಕ್​ಡೌನ್ ಬಳಿಕ ನಾನು ಮಾಡೋ ಮೊದಲ ಕೆಲಸವೇ ಫಿಟ್ನೆಸ್ ಪರೀಕ್ಷೆಯನ್ನ ಪಾಸ್ ಮಾಡೋದು ಎಂದಿದ್ದಾರೆ.

‘‘ ಲಾಕ್​ಡೌನ್ ಮುಗಿದ ಬಳಿಕ ನಾನು ಮೊದಲು ಹೋಗದೇ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ. ಅಲ್ಲಿ ನನ್ನ ಫಿಟ್ನೆಸ್ ಪರೀಕ್ಷೆಯನ್ನ ಎದುರಿಸಲಿದ್ದೇನೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಬಳಿಕ ನಾನು ಟೀಮ್ ಇಂಡಿಯಾವನ್ನ ಸೇರಿಕೊಂಡು ನನ್ನ ಕರ್ತವ್ಯವನ್ನ ನಿಭಾಯಿಸುತ್ತೇನೆ.’’ ಎಂದು ರೋಹಿತ್ ಶರ್ಮಾ ಉತ್ಸಾಹದಿಂದ ಹೇಳಿಕೊಂಡಿದ್ದಾರೆ. https://www.instagram.com/p/CApKe4WBBOr/?utm_source=ig_web_copy_link

Published On - 2:58 pm, Tue, 26 May 20