ನೋಡ ನೋಡುತ್ತಿದ್ದಂತೆ ಹೋಟೆಲ್‌ಗೆ ನುಗ್ಗಿದ ಬಸ್: ಮೂವರು ಗಂಭೀರ
ಬೆಂಗಳೂರು: ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್ ಒಂದು ಹೋಟೆಲ್‌ಗೆ ನುಗ್ಗಿರುವ ಘಟನೆ ಸದಾಶಿವನಗರದ ವಿನಾಯಕ ಸರ್ಕಲ್ ಬಳಿ ನಡೆದಿದೆ. ಚಾಲಕ ಬಸ್ನಿಂದ ಇಳಿಯುತ್ತಿದ್ದಂತೆ ವಾಹನ ಚಲಿಸಲು ಆರಂಭಿಸಿತು. ಚಾಲಕ ಓಡಿ ಬಂದು ಹತ್ತಿದ್ರೂ ಬಸ್ ಆತನ ನಿಯಂತ್ರಣಕ್ಕೆ ಬಾರದೆ ಅಲ್ಲೇ ಇದ್ದ ಹೋಟೆಲ್‌ಗೆ ನುಗ್ಗಿದೆ. ಹೋಟೆಲ್‌ಗೆ ಬಸ್ ಏಕಾಏಕಿ ನುಗ್ಗಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿದ್ದು ಚಾಲಕನ ಕಾಲು ಮುರಿದಿದೆ. ಗಾಯಾಳುಗಳಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಚಾಲಕನ ನಿಯಂತ್ರಣಕ್ಕೆ ಸಿಗದ ಬಸ್ ಒಂದು ಹೋಟೆಲ್‌ಗೆ ನುಗ್ಗಿರುವ ಘಟನೆ ಸದಾಶಿವನಗರದ ವಿನಾಯಕ ಸರ್ಕಲ್ ಬಳಿ ನಡೆದಿದೆ.
ಚಾಲಕ ಬಸ್ನಿಂದ ಇಳಿಯುತ್ತಿದ್ದಂತೆ ವಾಹನ ಚಲಿಸಲು ಆರಂಭಿಸಿತು. ಚಾಲಕ ಓಡಿ ಬಂದು ಹತ್ತಿದ್ರೂ ಬಸ್ ಆತನ ನಿಯಂತ್ರಣಕ್ಕೆ ಬಾರದೆ ಅಲ್ಲೇ ಇದ್ದ ಹೋಟೆಲ್‌ಗೆ ನುಗ್ಗಿದೆ. ಹೋಟೆಲ್‌ಗೆ ಬಸ್ ಏಕಾಏಕಿ ನುಗ್ಗಿದ ಪರಿಣಾಮ ಮೂವರಿಗೆ ಗಂಭೀರ ಗಾಯಗಳಾಗಿದ್ದು ಚಾಲಕನ ಕಾಲು ಮುರಿದಿದೆ. ಗಾಯಾಳುಗಳಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದಾಶಿವನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




