ಕರ್ನಾಟಕ ಮತ್ತು ದೆಹಲಿಯಲ್ಲಿ ಕೊವಿಡ್-19 ಸಾವುಗಳ ಸಂಖ್ಯೆ ಹೆಚ್ಚುತ್ತಿದೆ: ರಾಜೇಶ್ ಭೂಷಣ್

ಗುರುವಾರದಂದು ಮಿಡಿಯಾದೊಂದಿಗೆ ಭಾರತದಲ್ಲಿನ ಪ್ರಸಕ್ತ ಕೊವಿಡ್-19 ಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇಂದಿನವರೆಗೆ ಸುಮಾರು 30 ಲಕ್ಷ ಭಾರತೀಯರು ಕೊವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು. ‘‘ಗುಣಮುಖರಾದವರ ಸಂಖ್ಯೆ ಸೋಂಕಿತರ ಸಂಖ್ಯೆಗಿಂತ ಮೂರೂವರೆ ಪಟ್ಟು ಜಾಸ್ತಿಯಿದೆ. ನಿನ್ನೆ (ಬುಧವಾರ) 68,584 ಜನ ಗುಣಮುಖರಾಗಿದ್ದು ದಿನವೊಂದರಲ್ಲಿ ಗುಣ ಹೊಂದಿದ ಅತ್ಯಧಿಕ ಸೋಂಕಿತರ ಸಂಖ್ಯೆ ಇದಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತಾದ್ಯಂತ 11 ಲಕ್ಷಕ್ಕೂ ಹೆಚ್ಚಿನ ಟೆಸ್ಟ್​ಗಳನ್ನು […]

ಕರ್ನಾಟಕ ಮತ್ತು ದೆಹಲಿಯಲ್ಲಿ ಕೊವಿಡ್-19 ಸಾವುಗಳ ಸಂಖ್ಯೆ ಹೆಚ್ಚುತ್ತಿದೆ: ರಾಜೇಶ್ ಭೂಷಣ್
ಅರುಣ್​ ಕುಮಾರ್​ ಬೆಳ್ಳಿ

Updated on: Sep 03, 2020 | 5:30 PM

ಗುರುವಾರದಂದು ಮಿಡಿಯಾದೊಂದಿಗೆ ಭಾರತದಲ್ಲಿನ ಪ್ರಸಕ್ತ ಕೊವಿಡ್-19 ಸ್ಥಿತಿ ಕುರಿತು ಮಾಹಿತಿ ಹಂಚಿಕೊಂಡ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ಇಂದಿನವರೆಗೆ ಸುಮಾರು 30 ಲಕ್ಷ ಭಾರತೀಯರು ಕೊವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು.

‘‘ಗುಣಮುಖರಾದವರ ಸಂಖ್ಯೆ ಸೋಂಕಿತರ ಸಂಖ್ಯೆಗಿಂತ ಮೂರೂವರೆ ಪಟ್ಟು ಜಾಸ್ತಿಯಿದೆ. ನಿನ್ನೆ (ಬುಧವಾರ) 68,584 ಜನ ಗುಣಮುಖರಾಗಿದ್ದು ದಿನವೊಂದರಲ್ಲಿ ಗುಣ ಹೊಂದಿದ ಅತ್ಯಧಿಕ ಸೋಂಕಿತರ ಸಂಖ್ಯೆ ಇದಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತಾದ್ಯಂತ 11 ಲಕ್ಷಕ್ಕೂ ಹೆಚ್ಚಿನ ಟೆಸ್ಟ್​ಗಳನ್ನು ಮಾಡಲಾಗಿದೆ.’’ ಎಂದು ಭೂಷಣ್ ಹೇಳಿದರು.

ಪ್ರತಿ 10 ಲಕ್ಷ ಜನಸಂಖ್ಯೆಗೆ ಸೋಂಕಿತರ ಸಂಖ್ಯೆ ಭಾರತದಲ್ಲೇ ವಿಶ್ವದಲ್ಲಿ ಅತಿ ಕಡಿಮೆ ಎಂದು ಹೇಳಿದ ಭೂಷಣ್, ಆಂಧ್ರ ಪ್ರದೇಶ, ದೆಹಲಿ, ತಮಿಳು ನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರ ಈ ಐದು ರಾಜ್ಯಗಳಲ್ಲೇ ಶೇಕಡಾ 70 ರಷ್ಟು ಸೋಂಕಿಗೆ ಸಂಬಂಧಿಸಿದ ಸಾವುಗಳು ಸಂಭವಿಸಿವೆ ಎಂದರು.

‘‘ಕರ್ನಾಟಕ ಮತ್ತು ದೆಹಲಿಯಲ್ಲಿ ಸಾವುಗಳ ಅನುಪಾತ ಜಾಸ್ತಿಯಿದೆ. ಪ್ರತಿದಿನ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯನ್ನು ನೋಡಿದ್ದೇಯಾದರೆ ಅದು ದೆಹಲಿಯಲ್ಲಿ 50% ರಷ್ಟು ಮತ್ತು ಕರ್ನಾಟಕದಲ್ಲಿ 9.6% ರಷ್ಟು ಹೆಚ್ಚಾಗಿದೆ,’’ ಎಂದು ಭೂಷಣ್ ಹೇಳಿದರು.

ಹಬ್ಬ, ಉತ್ಸವಗಳ ಆಚರಣೆಯಲ್ಲಿ ಮತ್ತು ಪರೀಕ್ಷೆಗಳಿಗೆ ಹಾಜರಾಗುವಾಗ ನಾವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಅತ್ಯವಶ್ಯಕವಾಗಿರುತ್ತದೆ, ಎಂಬ ಸಲಹೆ ಭೂಷಣ್ ನೀಡಿದರು.

 

ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Loading...
Unable to load recommendations.
Follow Us