ಕನ್ನಡದ ಖ್ಯಾತ ಌಂಕರ್ ಕಂ ನಟಿ ಅನುಶ್ರೀಗೆ WhatsApp ಮೂಲಕ CCB ನೋಟಿಸ್

  • Updated On - 4:14 pm, Thu, 24 September 20 Edited By: sadhu srinath
ಕನ್ನಡದ ಖ್ಯಾತ ಌಂಕರ್ ಕಂ ನಟಿ ಅನುಶ್ರೀಗೆ WhatsApp ಮೂಲಕ CCB ನೋಟಿಸ್

ದಕ್ಷಿಣ ಕನ್ನಡ: ಡ್ಯಾನ್ಯರ್ ಕಂ ಬಾಲಿವುಡ್ ನಟ ಕಿಶೋರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಕನ್ನಡದ ಖ್ಯಾತ ಌಂಕರ್ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್ ಜಾರಿಯಾಗಿದೆ. WhatsApp ಮೂಲಕ ಌಂಕರ್ ಅನುಶ್ರೀಗೆ ಮಂಗಳೂರು ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಜೊತೆಗೆ, ಮಂಗಳೂರು ಸಿಸಿಬಿ ತಂಡವೊಂದು ಬೆಂಗಳೂರಿನತ್ತ ಆಗಮಿಸುತ್ತಿರುವ ಮಾಹಿತಿ ಸಿಕ್ಕಿದೆ. 4-5 ಸಿಸಿಬಿ ಪೊಲೀಸರ ತಂಡ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ.

ಈ ಹಿಂದೆ, ನಟ ಕಿಶೋರ್​ ಆಪ್ತ ಸ್ನೇಹಿತ ತರುಣನನ್ನ ಸಹ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಿದ್ದಾರೆ. ಕಿಶೋರ್​ಗೆ ಡ್ರಗ್ಸ್​ ಲೋಕವನ್ನು ಪರಿಚಯ ಮಾಡಿಸಿದ್ದೇ ತರುಣ್‌ ಎಂದು ತಿಳಿದುಬಂದಿದೆ. ಹಾಗಾಗಿ, ತರುಣ್​ನನ್ನು ಬಂಧಿಸಿದ ಪೊಲೀಸರು ಆತನ ಡ್ರಗ್ ಟೆಸ್ಟ್ ಮಾಡಿಸಿದ್ದು ಅದರಲ್ಲಿ ಪಾಸಿಟಿವ್ ಅಂತಾ ರಿಪೋರ್ಟ್ ಬಂದಿದೆ.

ಅಂದ ಹಾಗೆ, ತರುಣ್ ಕೂಡ ಕೋರಿಯೋಗ್ರಫರ್ ಕಂ ಌಂಕರ್. ಇದಲ್ಲದೆ, ಹಲವು ರಿಯಾಲಿಟಿ ಶೋಗಳಲ್ಲಿಯೂ ಸಹ ಭಾಗವಸಿದ್ದಾನೆ. ಜೊತೆಗೆ, ಖ್ಯಾತ ಆಂಕರ್ ಕಂ ನಟಿ ಅನುಶ್ರೀ ಆಪ್ತ ಸ್ನೇಹಿತ ಎಂದು ಹೇಳಲಾಗಿದೆ. ಹೀಗಾಗಿ, ಮಂಗಳೂರು ಮೂಲದ ಕನ್ನಡದ ಖ್ಯಾತ ರಿಯಾಲಿಟಿ ಶೋ ಌಂಕರ್​ ಅನುಶ್ರೀಗೂ ಇದೀಗ ಕಂಟಕ ಶುರುವಾಗಿದೆ ಎಂದು ಹೇಳಲಾಗಿದೆ.

ಅನುಶ್ರೀ ನಾಯಕ ನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಇತ್ತೀಚೆಗೆ CCB ವಿಚಾರಣೆಗೆ ಒಳಗಾದ ಌಂಕರ್​ ಅಕುಲ್ ಬಾಲಾಜಿ ಜೊತೆ ಕೂಡ ಸ್ಟೇಜ್ ಹಂಚಿಕೊಂಡಿದ್ದಾರೆ.

ಕೊರೊನಾದಿಂದ ಕಂಗೆಟ್ಟ ಜೀವನ! ವಿಡಿಯೋದಲ್ಲಿ ಅನುಶ್ರೀ ಭಾವನೆಗಳ ಮೆರವಣಿಗೆ!