SDPI ಕಚೇರಿ ಮೇಲೆ ದಾಳಿ, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ರು 8 ಮಂದಿ

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಕೇಸ್​ಗೆ ಸಂಬಂಧಿಸಿ ಬೆಂಗಳೂರಿನ SDPI ಕಚೇರಿ ಮೇಲೆ ಸಿಸಿಬಿ ತಡರಾತ್ರಿ ದಾಳಿ ನಡೆಸಿದೆ. ಹೆಗಡೆನಗರದ SDPI ಕಚೇರಿ ಮೇಲೆ ದಾಳಿ ನಡೆಸಿ 8 ಜನರನ್ನು ಬಂಧಿಸಲಾಗಿದೆ. ಎಸ್‌ಡಿಪಿಐ ಕಚೇರಿಯಲ್ಲಿ ಅವಿತುಕುಳಿತಿದ್ದ 8 ಆರೋಪಿಗಳು ಮಾರಕಾಸ್ತ್ರಗಳ ಸಮೇತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಟಿವಿ9ಗೆ ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ನಿನ್ನೆ ತಡರಾತ್ರಿ ಸಿಸಿಬಿ ಪೊಲೀಸರು, ಡಿ.ಜೆ.ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. […]

SDPI ಕಚೇರಿ ಮೇಲೆ ದಾಳಿ, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ರು 8 ಮಂದಿ

Updated on: Aug 16, 2020 | 9:41 AM

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಕೇಸ್​ಗೆ ಸಂಬಂಧಿಸಿ ಬೆಂಗಳೂರಿನ SDPI ಕಚೇರಿ ಮೇಲೆ ಸಿಸಿಬಿ ತಡರಾತ್ರಿ ದಾಳಿ ನಡೆಸಿದೆ. ಹೆಗಡೆನಗರದ SDPI ಕಚೇರಿ ಮೇಲೆ ದಾಳಿ ನಡೆಸಿ 8 ಜನರನ್ನು ಬಂಧಿಸಲಾಗಿದೆ.

ಎಸ್‌ಡಿಪಿಐ ಕಚೇರಿಯಲ್ಲಿ ಅವಿತುಕುಳಿತಿದ್ದ 8 ಆರೋಪಿಗಳು ಮಾರಕಾಸ್ತ್ರಗಳ ಸಮೇತ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಟಿವಿ9ಗೆ ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ನಿನ್ನೆ ತಡರಾತ್ರಿ ಸಿಸಿಬಿ ಪೊಲೀಸರು, ಡಿ.ಜೆ.ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಬಳಿ ಇದ್ದ ಕಬ್ಬಿಣದ ರಾಡ್, ಬ್ಯಾಟ್‌ಗಳು, ಇತರೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.