ಚಿಕನ್ ವರ್ಸಸ್ ಮೊಟ್ಟೆ; ಯಾವುದರಲ್ಲಿ ಪ್ರೋಟೀನ್ ಹೆಚ್ಚು?

|

Updated on: Mar 04, 2024 | 3:35 PM

ಫಿಟ್​ನೆಸ್ ಬಗ್ಗೆ ಆಸಕ್ತಿ ಇರುವವರು ತೂಕ ಇಳಿಸಿಕೊಳ್ಳಲು ಪ್ರಯ್ನಿಸುತ್ತಿದ್ದರೆ ಡಯೆಟ್ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ತೂಕ ಇಳಿಸಿಕೊಳ್ಳಲು ಜಿಮ್​ನಲ್ಲಿ ಬೆವರು ಹರಿಸುವುದು ಮಾತ್ರವಲ್ಲದೆ ಆಹಾರಪದ್ಧತಿಯ ಬಗ್ಗೆಯೂ ಎಚ್ಚರ ವಹಿಸಬೇಕು. ಈ ಸಂದರ್ಭದಲ್ಲಿ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕು. ತೆಳ್ಳಗಿನ ಸ್ನಾಯು ಬೆಳವಣಿಗೆ, ಬಿರುಸಾದ ವ್ಯಾಯಾಮ ಮುಂತಾದ ಪ್ರೋಟೀನ್‌ನ ಕೆಲವು ಆರೋಗ್ಯ ಪ್ರಯೋಜನಗಳಾಗಿವೆ.

ಚಿಕನ್ ವರ್ಸಸ್ ಮೊಟ್ಟೆ; ಯಾವುದರಲ್ಲಿ ಪ್ರೋಟೀನ್ ಹೆಚ್ಚು?
ಸಾಂದರ್ಭಿಕ ಚಿತ್ರ
Follow us on

ಪ್ರೋಟೀನ್‌ನ ಅನೇಕ ಮೂಲಗಳಿದ್ದರೂ ಮಾಂಸ ಸೇವಿಸುವ ಅನೇಕರು ಕೋಳಿ ಮತ್ತು ಮೊಟ್ಟೆಗಳನ್ನು ಹೆಚ್ಚು ತಿನ್ನುತ್ತಾರೆ. ಇವೆರಡರಲ್ಲೂ ಪ್ರೋಟೀನ್ ಹೇರಳವಾಗಿದೆ. ಆದರೆ ಕೋಳಿಯಲ್ಲಿ ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಇದೆ ಎಂಬುದು ಕೆಲವರ ವಾದ. ಇದು ನಿಜವೇ? ಕೋಳಿ ಮತ್ತು ಮೊಟ್ಟೆಗಳಲ್ಲಿ ಯಾವುದು ಪ್ರೋಟೀನ್ ಭರಿತವಾಗಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಪಾಲಿಪೆಪ್ಟೈಡ್ಸ್ ಎಂದೂ ಕರೆಯಲ್ಪಡುವ ಪ್ರೋಟೀನ್ ನಮ್ಮ ದೇಹದಲ್ಲಿ ವಿವಿಧ ನಿರ್ಣಾಯಕ ಪಾತ್ರಗಳನ್ನು ವಹಿಸುವ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ಇದು ಹಲ್ಲು, ಮೂಳೆ ಸೇರಿದಂತೆ ದೇಹದ ಪ್ರತಿಯೊಂದು ಭಾಗದ ರಚನೆಗೆ ಅಗತ್ಯ ಎನ್ನುತ್ತಾರೆ ಪೌಷ್ಟಿಕತಜ್ಞೆ ಶ್ರುತಿ ಕೇಲುಸ್ಕರ್. ಕನಿಷ್ಠ ದೈಹಿಕ ಚಟುವಟಿಕೆಯನ್ನು ಹೊಂದಿರುವ ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ ಪ್ರತಿ ಕೆಜಿ ದೇಹದ ತೂಕಕ್ಕೆ 0.8 ಗ್ರಾಂ ಪ್ರೊಟೀನ್‌ ಅತ್ಯಗತ್ಯವಾಗಿದೆ.

ನೇರ ಪ್ರೋಟೀನ್ ಮೂಲಗಳು:

ನೇರ ಪ್ರೋಟೀನ್ ಮೂಲಗಳನ್ನು ಸೇವಿಸುವುದು ಯಾವಾಗಲೂ ಉತ್ತಮ. ಏಕೆಂದರೆ ಅವು ನೇರವಲ್ಲದ ಪ್ರೋಟೀನ್ ಮೂಲಗಳಿಗಿಂತ ಕಡಿಮೆ ಕೊಬ್ಬಿನ ಮಟ್ಟವನ್ನು ಹೊಂದಿರುತ್ತವೆ ಎಂದು ತಜ್ಞರು ಹೇಳುತ್ತಾರೆ. ನೇರ ಪ್ರೋಟೀನ್ ಮೂಲಗಳಲ್ಲಿ ಕೋಳಿ, ಬಿಳಿ ಮಾಂಸದ ಮೀನು, ಮೊಟ್ಟೆ, ಮೊಸರು, ನಟ್ಸ್ ಮತ್ತು ಸೀಡ್ಸ್ ಸೇರಿವೆ.

ಇದನ್ನೂ ಓದಿ: ಸಸ್ಯ ಆಧಾರಿತ ಪ್ರೋಟೀನ್ ಒಳ್ಳೆಯದಾ? ಪ್ರಾಣಿ ಆಧಾರಿತ ಪ್ರೋಟೀನ್ ಉತ್ತಮವಾ?

ನೇರವಲ್ಲದ ಪ್ರೋಟೀನ್ ಮೂಲಗಳು:

ನಾನ್ ಲೀನ್ ಪ್ರೊಟೀನ್ ಮೂಲಗಳಲ್ಲಿ ಸಾಮಾನ್ಯವಾಗಿ ಕೊಬ್ಬಿನಂಶ ಅಧಿಕವಾಗಿರುತ್ತದೆ. ಇವುಗಳಲ್ಲಿ ಸಂಸ್ಕರಿಸಿದ ಮಾಂಸ, ಕೆಂಪು ಮಾಂಸ ಮತ್ತು ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು ಸೇರಿವೆ.

ಕೋಳಿ ಅಥವಾ ಮೊಟ್ಟೆ ಯಾವುದು ಬೆಸ್ಟ್?:

ಪ್ರೋಟೀನ್ ವಿಷಯಕ್ಕೆ ಬಂದಾಗ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ಪ್ರಕಾರ, 100 ಗ್ರಾಂ ಬಿಳಿ ಮೊಟ್ಟೆಗಳು 10.9 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ. ಆದರೆ ಪ್ರೋಟೀನ್ ಹೆಚ್ಚು ಸೇವಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಕಂದು ಮೊಟ್ಟೆಗಳನ್ನು ಸೇವಿಸಿ. ಅಲ್ಲದೆ, 100 ಗ್ರಾಂ ಕಂದು ಮೊಟ್ಟೆಗಳಲ್ಲಿ 12 ಗ್ರಾಂ ಪ್ರೋಟೀನ್ ಇರುತ್ತದೆ. ಚಿಕನ್ ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ. ಯುಎಸ್ಡಿಎ ಪ್ರಕಾರ ನೀವು 100 ಗ್ರಾಂ ಚಿಕನ್ ಸ್ತನವನ್ನು ಸೇವಿಸಿದರೆ 23.2 ಗ್ರಾಂ ಪ್ರೋಟೀನ್ ಸಿಗುತ್ತದೆ.

ಕೋಳಿ ಮತ್ತು ಮೊಟ್ಟೆ ಎರಡೂ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿವೆ. ಆದರೆ, ಇವೆರಡರ ನಡುವಿನ ಆಯ್ಕೆಯು ವೈಯಕ್ತಿಕ ಆಹಾರದ ಆದ್ಯತೆಗಳು, ಪೌಷ್ಟಿಕಾಂಶದ ಅಗತ್ಯತೆಗಳು ಮತ್ತು ಆರೋಗ್ಯದ ಪರಿಗಣನೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನೀವು ತೂಕ ಇಳಿಸುವುದರ ಮೇಲೆ ಕೇಂದ್ರೀಕರಿಸುತ್ತಿದ್ದರೆ ಮತ್ತು ಹೆಚ್ಚಿನ ಪ್ರೋಟೀನ್ ಆಹಾರ ಸೇವಿಸಲು ಬಯಸಿದರೆ ಚಿಕನ್ ನಿಮ್ಮ ಆಯ್ಕೆಯಾಗಿರಬೇಕು.

ಇದನ್ನೂ ಓದಿ: ಅತಿಯಾದ ಪ್ರೋಟೀನ್ ಸೇವನೆಯಿಂದಾಗುವ ಅಪಾಯಗಳೇನು?

ಕೋಳಿ ಮಾಂಸವು ನೇರವಾದ ಮಾಂಸವಾಗಿದ್ದು ಅದರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್‌ ಸಮೃದ್ಧವಾಗಿದೆ. ಇದು ಸ್ನಾಯುಗಳ ಬೆಳವಣಿಗೆ, ದುರಸ್ತಿ ಮತ್ತು ಒಟ್ಟಾರೆ ನಿರ್ವಹಣೆಗೆ ದೇಹಕ್ಕೆ ಅಗತ್ಯವಿರುವ ಎಲ್ಲಾ ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.

ಮೊಟ್ಟೆಗಳು ಕೂಡ ಸಂಪೂರ್ಣ ಪ್ರೋಟೀನ್ ಮೂಲವಾಗಿದೆ. ಅಂದರೆ ಅವು ಸರಿಯಾದ ಪ್ರಮಾಣದಲ್ಲಿ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ. ಅವು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ