ಅತಿಯಾದ ಪ್ರೋಟೀನ್ ಸೇವನೆಯಿಂದಾಗುವ ಅಪಾಯಗಳೇನು?

ಪ್ರೋಟೀನ್ ನಮ್ಮ ದೇಹಕ್ಕೆ ದೈನಂದಿನ ಅವಶ್ಯಕತೆಯಾಗಿದೆ. ಸ್ನಾಯುಗಳನ್ನು ನಿರ್ಮಿಸಲು, ದೇಹವನ್ನು ಬಲಪಡಿಸಲು ಮತ್ತು ಪೋಷಕಾಂಶಗಳ ಸಮತೋಲನವನ್ನು ಹಾಗೇ ಇರಿಸಿಕೊಳ್ಳಲು ನಮ್ಮ ಡಯೆಟ್​ನಲ್ಲಿ ಪ್ರತಿದಿನ ನಿರ್ದಿಷ್ಟ ಪ್ರಮಾಣದ ಪ್ರೋಟೀನ್ ಸೇವಿಸುವುದು ಅಗತ್ಯ. ಆದರೆ, ಅತಿಯಾದ ಪ್ರೋಟೀನ್ ಸೇವನೆ ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಅತಿಯಾದ ಪ್ರೋಟೀನ್ ಸೇವನೆಯಿಂದಾಗುವ ಅಪಾಯಗಳೇನು?
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 21, 2024 | 6:58 PM

ನಮ್ಮ ದೇಹದ ಕೊಬ್ಬನ್ನು ಕರಗಿಸಲು, ಅತ್ಯಾಧಿಕತೆಯನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ಸರಿಪಡಿಸಲು ಪ್ರೋಟೀನ್ ಅತ್ಯಗತ್ಯ. ಆದರೆ, ಹೆಚ್ಚಿನ ಪ್ರೋಟೀನ್ ಸೇವನೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇತ್ತೀಚಿನ ಅಧ್ಯಯನವು ಸಾಮಾನ್ಯ ಪ್ರಮಾಣದಲ್ಲಿ ಪ್ರೋಟೀನ್ ಸೇವನೆಯ ಹೆಚ್ಚಳವು ಹೃದಯದ ಆರೋಗ್ಯಕ್ಕೆ ಹೇಗೆ ಅಪಾಯವನ್ನುಂಟುಮಾಡುತ್ತದೆ ಎಂಬುದನ್ನು ತೋರಿಸುತ್ತದೆ.

ಪ್ರೋಟೀನ್​ಗಳು ಎಂದರೆ ದೊಡ್ಡ ಹಾಗೂ ಸಂಕೀರ್ಣ ಅಣುಗಳಾಗಿವೆ. ಇದು ದೇಹದಲ್ಲಿ ಅನೇಕ ನಿರ್ಣಾಯಕ ಪಾತ್ರಗಳನ್ನು ವಹಿಸುತ್ತದೆ. ಪ್ರೋಟೀನ್ ಜೀವಕೋಶಗಳಲ್ಲಿ ಹೆಚ್ಚಿನ ಕೆಲಸವನ್ನು ಮಾಡುತ್ತಾರೆ ಮತ್ತು ದೇಹದ ಅಂಗಾಂಶಗಳು ಮತ್ತು ಅಂಗಗಳ ರಚನೆ, ಕಾರ್ಯ ಮತ್ತು ನಿಯಂತ್ರಣಕ್ಕೆ ಅಗತ್ಯವಿರುತ್ತದೆ. ಪ್ರೋಟೀನ್​ಗಳು ಅಮೈನೋ ಆಮ್ಲಗಳು ಎಂದು ಕರೆಯಲ್ಪಡುವ ನೂರಾರು ಅಥವಾ ಸಾವಿರಾರು ಸಣ್ಣ ಘಟಕಗಳಿಂದ ಮಾಡಲ್ಪಟ್ಟಿದೆ. ಅವುಗಳು ಉದ್ದವಾದ ಸರಪಳಿಗಳಲ್ಲಿ ಒಂದಕ್ಕೊಂದು ಜೋಡಿಸಲ್ಪಟ್ಟಿರುತ್ತವೆ.

ಇದನ್ನೂ ಓದಿ: ನಿಮ್ಮ ದೇಹಕ್ಕೆ ಪ್ರೋಟೀನ್ ಕಡಿಮೆಯಾಗಿದೆ ಎಂಬುದರ ಲಕ್ಷಣಗಳಿವು

ಉತ್ತಮ ಆರೋಗ್ಯಕ್ಕೆ ಪ್ರೋಟೀನ್ ತಿನ್ನುವುದು ಅತ್ಯಗತ್ಯವಾದರೂ, ಅಮೆರಿಕಾದ ಸಂಶೋಧಕರು ಅದರ ಅಡ್ಡಪರಿಣಾಮಗಳನ್ನು ಕೂಡ ಕಂಡುಹಿಡಿದಿದ್ದಾರೆ. ಇದರ ಮೂಲಕ ಅತಿಯಾಗಿ ಆಹಾರದಲ್ಲಿ ಪ್ರೋಟೀನ್ ಸೇವನೆ ಅಪಧಮನಿಕಾಠಿಣ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಅಪಧಮನಿಕಾಠಿಣ್ಯವು ಅಪಧಮನಿಯ ಗೋಡೆಗಳಲ್ಲಿ ಮತ್ತು ಅದರ ಮೇಲೆ ಕೊಬ್ಬುಗಳು, ಕೊಲೆಸ್ಟ್ರಾಲ್ ಮತ್ತು ಇತರ ವಸ್ತುಗಳ ಸಂಗ್ರಹವಾಗಿದೆ. ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರು ನೇಚರ್ ಮೆಟಾಬಾಲಿಸಮ್‌ನಲ್ಲಿ ಪ್ರಕಟಿಸಿದ ಅಧ್ಯಯನದ ಪ್ರಕಾರ, ಪ್ರೋಟೀನ್‌ನಿಂದ ಶೇ. 22ರಷ್ಟು ಆಹಾರದ ಕ್ಯಾಲೊರಿಗಳನ್ನು ಸೇವಿಸುವುದರಿಂದ ರೋಗನಿರೋಧಕ ಕೋಶಗಳ ಸಕ್ರಿಯಗೊಳಿಸುವಿಕೆ ಹೆಚ್ಚಾಗುತ್ತದೆ, ಇದು ಅಪಧಮನಿಕಾಠಿಣ್ಯದ ಪ್ಲೇಕ್ ರಚನೆಯಲ್ಲಿ ಪಾತ್ರವಹಿಸುತ್ತದೆ ಮತ್ತು ರೋಗದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಪ್ರೋಟೀನ್​ ಪೌಡರ್​ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು

ಪ್ರೋಟೀನ್ ಜೀರ್ಣವಾದಾಗ ಅದು ಅಮೈನೋ ಆಮ್ಲಗಳಾಗಿ ವಿಭಜನೆಯಾಗುತ್ತದೆ. ಇದನ್ನು ಸ್ನಾಯು ಅಂಗಾಂಶ, ಕೂದಲು, ಚರ್ಮ ಮತ್ತು ಉಗುರುಗಳಿಗೆ ಬಿಲ್ಡಿಂಗ್ ಬ್ಲಾಕ್ಸ್ ಆಗಿ ಬಳಸಲಾಗುತ್ತದೆ. ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುತ್ತಿಲ್ಲ ಎಂಬುದರ ಲಕ್ಷಣವೆಂದರೆ ಎಡಿಮಾ ಮತ್ತು ಹೊಟ್ಟೆ ಊದಿಕೊಳ್ಳುವುದು. ಪ್ರೋಟೀನ್ ಕೊರತೆಯ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ, ಕೊಬ್ಬಿನ ಯಕೃತ್ತು ಅಥವಾ ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಶೇಖರಣೆ.

ಪ್ರೋಟೀನ್ ನಮ್ಮ ದೇಹಕ್ಕೆ ಅಗತ್ಯವೆಂದು ಅತಿಯಾಗಿ ಸೇವಿಸಬಾರದು. ಇದರಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳು ಉಂಟಾಗುತ್ತವೆ. ಸಮತೋಲಿತ ಊಟವನ್ನು ಮಾಡುವುದು ಮುಖ್ಯವಾಗಿದೆ. ಅದು ಹೃದಯರಕ್ತನಾಳದ ಸಮಸ್ಯೆಗಳನ್ನು ಉಲ್ಬಣಗೊಳಿಸುವುದಿಲ್ಲ. ಹೀಗಾಗಿ, ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಪ್ರೋಟೀನ್ ಸೇವಿಸಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ