BSY ಸಂಪುಟ ಸೇರುವವರ ಪಟ್ಟಿ‌ ಬಹುತೇಕ ಫೈನಲ್​: ಆದ್ರೆ, ಕೈಬಿಡಬೇಕಾದ ಒಬ್ಬರು ಯಾರೆಂಬುದೇ ದೊಡ್ಡ ಕನ್ಫ್ಯೂಷನ್​!

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಪುಟ ಸೇರುವವರ ಲೇಟೆಸ್ಟ್ ಲಿಸ್ಟ್‌ ಕೊನೆಗೂ ಬಿಡುಗಡೆ ಆಗಿದೆ. ಸಿಎಂ ಯಡಿಯೂರಪ್ಪ 8 ಶಾಸಕರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಟಿವಿ9ಗೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

BSY ಸಂಪುಟ ಸೇರುವವರ ಪಟ್ಟಿ‌ ಬಹುತೇಕ ಫೈನಲ್​: ಆದ್ರೆ, ಕೈಬಿಡಬೇಕಾದ ಒಬ್ಬರು ಯಾರೆಂಬುದೇ ದೊಡ್ಡ ಕನ್ಫ್ಯೂಷನ್​!
ಸಿಎಂ ಬಿ.ಎಸ್.ಯಡಿಯೂರಪ್ಪ

Updated on: Jan 12, 2021 | 10:46 PM

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಂಪುಟ ಸೇರುವವರ ಲೇಟೆಸ್ಟ್ ಲಿಸ್ಟ್‌ ಕೊನೆಗೂ ಫೈನಲ್​ ಆಗಿದೆ. ಸಿಎಂ ಯಡಿಯೂರಪ್ಪ 8 ಶಾಸಕರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ಟಿವಿ9ಗೆ ಬಿಜೆಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

MTB ನಾಗರಾಜ್, ಆರ್.ಶಂಕರ್, ಎಸ್.ಅಂಗಾರ, ಯೋಗೇಶ್ವರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ ಹಾಗೂ ಮುನಿರತ್ನ ಅವರ ಹೆಸರು ಬಹುತೇಕ ಫೈನಲ್ ಆಗಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಸಿದೆ.

ಆದರೆ, 8ರಲ್ಲಿ ಕೇವಲ 7 ಶಾಸಕರಿಗೆ ಮಾತ್ರ ಮಂತ್ರಿಗಿರಿ ಭಾಗ್ಯ ಸಿಗಲಿದೆ ಎಂದು ತಿಳಿದುಬಂದಿದೆ. ಆ, ಎಂಟರಲ್ಲಿ ಕೈಬಿಡಬೇಕಾದ ಒಬ್ಬರು ಯಾರೆಂದು ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ, ಸಿಎಂ ಕಾವೇರಿ ನಿವಾಸದಲ್ಲೇ ಮುನಿರತ್ನ ಮೊಕ್ಕಾಂ ಹೂಡಿದ್ದಾರೆ ಎಂದಯ ಹೇಳಲಾಗಿದೆ.

ಈ ನಡುವೆ, ಸಿಎಂ ನಿವಾಸ ಕಾವೇರಿಯಿಂದ ವಾಪಸ್​ ಆದ ಶಾಸಕ ಬೆಲ್ಲದ್, ಸಂಸದ ಶಿವಕುಮಾರ್ ಉದಾಸಿ ನಾಳೆ ನಿಮಗೇ ಗೊತ್ತಾಗಲಿದೆ ಎಂದು ಅಲ್ಲಿಂದ ಹೇಳಿ ಹೊರಟುಹೋದರು.

‘ಒಬ್ಬರನ್ನು ಕೈಬಿಡಬೇಕಾಗುತ್ತದೆ; ಸಣ್ಣಪುಟ್ಟ ವ್ಯತ್ಯಾಸಗಳಿವೆ; ಸಚಿವರ ಪಟ್ಟಿಯನ್ನು ರಾತ್ರಿ ಬಿಡುಗಡೆ ಮಾಡುವೆ: ಸಿಎಂ ಯಡಿಯೂರಪ್ಪ

Published On - 10:38 pm, Tue, 12 January 21

KUSHAL V
Loading...
Unable to load recommendations.
Follow Us