ಉಡುಪಿಯಲ್ಲಿಂದು ಸಿಎಂ ಎರಡನೇ ದಿನದ ಟೆಂಪಲ್ ರನ್, ಕುಂಬಾಶಿ ದೇಗುಲದ ಗಣಯಾಗದಲ್ಲಿ ಭಾಗಿ

ಕರಾವಳಿ ಭಾಗದ ಪ್ರಸಿದ್ಧ ಗಣಪತಿ ಕ್ಷೇತ್ರವಾಗಿರುವ ಆನೆಗುಡ್ಡದಲ್ಲಿ ಹಾಸನದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದಿಂದ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದೆ. ಜೆ.ಪಿ.ರಾಘವೇಂದ್ರ ರಾವ್, ಸಿಎಂ ಯಡಿಯೂರಪ್ಪನವರ ಆಪ್ತರು. ಹೀಗಾಗಿ ಇಂದು ನಡೆಯುವ ಯಾಗದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿಯಲ್ಲಿಂದು ಸಿಎಂ ಎರಡನೇ ದಿನದ ಟೆಂಪಲ್ ರನ್, ಕುಂಬಾಶಿ ದೇಗುಲದ ಗಣಯಾಗದಲ್ಲಿ ಭಾಗಿ

Updated on: Jan 19, 2021 | 1:31 PM

ಉಡುಪಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಇಂದು ಕೂಡ ಟೆಂಪಲ್ ರನ್ ಮುಂದುವರೆಸಲಿದ್ದಾರೆ. ಕರಾವಳಿ ಪ್ರವಾಸದಲ್ಲಿರುವ ಸಿಎಂ ನಿನ್ನೆ 3 ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇಂದು ಮತ್ತೆ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಆನೆಗುಡ್ಡಕ್ಕೆ ಸಿಎಂ ಬಿಎಸ್ ವೈ ಭೇಟಿ ನೀಡಲಿದ್ದಾರೆ.

ಕರಾವಳಿ ಭಾಗದ ಪ್ರಸಿದ್ಧ ಗಣಪತಿ ಕ್ಷೇತ್ರವಾಗಿರುವ ಆನೆಗುಡ್ಡದಲ್ಲಿ ಹಾಸನದ ಜೆ.ಪಿ.ರಾಘವೇಂದ್ರ ರಾವ್ ಕುಟುಂಬದಿಂದ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದೆ. ಜೆ.ಪಿ.ರಾಘವೇಂದ್ರ ರಾವ್, ಸಿಎಂ ಯಡಿಯೂರಪ್ಪನವರ ಆಪ್ತರು. ಹೀಗಾಗಿ ಇಂದು ನಡೆಯುವ ಯಾಗದಲ್ಲಿ ಭಾಗವಹಿಸಲಿದ್ದಾರೆ.

ಗೋಹತ್ಯೆ ನಿಷೇಧ ಕಾನೂನು ಜಾರಿ ಸಮಾಧಾನ ತಂದಿದೆ
ಇನ್ನು ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ “ಯಾವಾಗಲೂ ನಾವು ರಾಜಕೀಯ ಗೊಂದಲದಲ್ಲಿರುತ್ತೇವೆ. ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ ಎಂದು ಉಡುಪಿಯಲ್ಲಿ ಹೇಳಿದ್ರು. ಈ ವೇಳೆ ಕೃಷ್ಣಮಠ, ಕರಂಬಳ್ಳಿ ವೆಂಕಟರಮಣ ದೇಗುಲಕ್ಕೆ ಹೋಗಿದ್ದೆ. ಇಂದು ಮಹಾಲಕ್ಷ್ಮೀ, ಗಣಪತಿ ದೇಗುಲಕ್ಕೆ ಹೋಗುತ್ತೇನೆ. ಕಾಪು ಹೆಜಮಾಡಿ ಬಂದರು ಶಿಲಾನ್ಯಾಸ ಕಾರ್ಯಕ್ರಮವಿದೆ. ಮೀನುಗಾರರ ಸಮಸ್ಯೆ ಏನಿದೆ ಎಂದು ತಿಳಿದುಕೊಳ್ಳುತ್ತೇನೆ. ಗೋಹತ್ಯೆ ನಿಷೇಧ ಕಾನೂನು ಜಾರಿ ನನಗೆ ಸಮಾಧಾನ ತಂದಿದೆ. ಅಷ್ಟೆ ಅಲ್ಲ ಕಾನೂನು ಜಾರಿ ಮಾಡಿದ್ದು ಎಲ್ಲರಿಗೂ ಸಮಾಧಾನ ತಂದಿದೆ. ಗೋಹತ್ಯೆ ನಿಷೇಧ ಮಾಡುವುದು ಗಾಂಧೀಜಿ ಕನಸಾಗಿತ್ತು. ಬೇರೆ ಬೇರೆ ಕಾರಣಗಳಿಂದ ಮುಂದೂಡುತ್ತಾ ಬಂದರು. ಈಗ ನಾವು ಕಾಯ್ದೆಯನ್ನು ತಕ್ಷಣಕ್ಕೆ ಜಾರಿಗೆ ತಂದಿದ್ದೇವೆ” ಎಂದರು.

‘ರಾಜಕೀಯ ಜಂಜಾಟದ ಮಧ್ಯೆ ಈ ಪ್ರವಾಸ ಮಾಡ್ತಿದ್ದೇನೆ.. ನೆಮ್ಮದಿ, ತೃಪ್ತಿಯಿದ್ದರೆ ಮಾತ್ರ ಸುಗಮ ಆಡಳಿತ ಸಾಧ್ಯ’

Published On - 9:40 am, Tue, 19 January 21