ಹಬ್ಬಕ್ಕೆ ಊರಿಗೆ ಬಂದವನನ್ನು ಕೊಂದು ಬಾವಿಗೆ ಎಸೆದ ಹಂತಕರು!
ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೂರ್ತಿ ಊರಿನಲ್ಲಿ ನಡೆಯಲಿದ್ದ ನಾಗರ ಹಬ್ಬಕ್ಕೆಂದು ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದ. ಹಬ್ಬದ ಸಂಭ್ರಮದಲ್ಲಿದ್ದವನನ್ನ ಕೊಂದು, ಮೃತದೇಹಕ್ಕೆ ಕಲ್ಲು ಕಟ್ಟಿ ಬಾವಿಗೆಸೆಯಲಾಗಿದೆ.

ಮೂರ್ತಿ(ಎಡ) ಕೊಲೆಯಾದ ವ್ಯಕ್ತಿಯ ಮೃತ ದೇಹ ಸಿಕ್ಕ ಸ್ಥಳ (ಬಲ)
ಹಾಸನ: ನಾಗರ ಹಬ್ಬಕ್ಕೆ ಎಂದು ಊರಿಗೆ ಬಂದವನನ್ನು ಕೊಂದು ಬಾವಿಗೆಸೆದಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ. ಮೂರ್ತಿ(48) ಕೊಲೆಯಾದ ವ್ಯಕ್ತಿ.
ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಮೂರ್ತಿ ಊರಿನಲ್ಲಿ ನಡೆಯಲಿದ್ದ ನಾಗರ ಹಬ್ಬಕ್ಕೆಂದು ಮೂರು ದಿನಗಳ ಹಿಂದೆ ಊರಿಗೆ ಬಂದಿದ್ದ. ಹಬ್ಬದ ಸಂಭ್ರಮದಲ್ಲಿದ್ದವನನ್ನ ಕೊಂದು, ಮೃತದೇಹಕ್ಕೆ ಕಲ್ಲು ಕಟ್ಟಿ ಬಾವಿಗೆಸೆಯಲಾಗಿದೆ.
ಭಾನುವಾರ(ಜ.17) ಸಂಜೆ ಕೊಲೆಮಾಡಿ ಮೃತದೇಹ ಬಾವಿಗೆಸೆದಿರೋ ಶಂಕೆ ವ್ಯಕ್ತವಾಗಿದ್ದು ನಿನ್ನೆ ಸಂಜೆ ಮೃತದೇಹ ಪತ್ತೆಯಾಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೊಲೀಸರು-ಕೊಲೆ ಆರೋಪಿಗಳ ನಡುವೆ ಫೈರಿಂಗ್; ಆರೋಪಿಯ ಮುಖಕ್ಕೇ ಬಿತ್ತು ಎಎಸ್ಐ ಹೊಡೆದ ಗುಂಡು