‘ಸೀಲ್ಡೌನ್ನಿಂದಾಗಿ ಜೀವನ ಬೀದಿಪಾಲಾಗಿದೆ’
ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹಾಗಾಗಿ, ಸೋಂಕಿತರು ಪತ್ತೆಯಾದ ನಗರದ ಹಲವಾರು ಏರಿಯಾಗಳನ್ನು ಸೀಲ್ಡೌನ್ ಮಾಡಲಾಗಿದೆ. ಇವುಗಳಲ್ಲಿ ನಗರದ ಹೃದಯ ಭಾಗವಾದ ಚಿಕ್ಕಪೇಟೆ, ಬಳೇಪೇಟೆ, ಮತ್ತು ಅಕ್ಕಿಪೇಟೆ ಏರಿಯಾಗಳು ಸಹ ಒಂದು. ಆದರೆ, ಇದೀಗ ಸೀಲ್ಡೌನ್ ಆಗಿರುವ ಏರಿಯಾದ ಜನರು ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಟಿವಿ9 ಜೊತೆ ಮಾತನಾಡಿದ ಸೀಲ್ಡೌನ್ ಆದ ಏರಿಯಾದ ಜನರು ಮುಂದಿನ ದಿನಗಳಲ್ಲಿ ಜೀವನ ನಡೆಸೋದು ಭಾರಿ ಕಷ್ಟವಾಗಲಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. […]
ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹಾಗಾಗಿ, ಸೋಂಕಿತರು ಪತ್ತೆಯಾದ ನಗರದ ಹಲವಾರು ಏರಿಯಾಗಳನ್ನು ಸೀಲ್ಡೌನ್ ಮಾಡಲಾಗಿದೆ. ಇವುಗಳಲ್ಲಿ ನಗರದ ಹೃದಯ ಭಾಗವಾದ ಚಿಕ್ಕಪೇಟೆ, ಬಳೇಪೇಟೆ, ಮತ್ತು ಅಕ್ಕಿಪೇಟೆ ಏರಿಯಾಗಳು ಸಹ ಒಂದು.
ಆದರೆ, ಇದೀಗ ಸೀಲ್ಡೌನ್ ಆಗಿರುವ ಏರಿಯಾದ ಜನರು ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಟಿವಿ9 ಜೊತೆ ಮಾತನಾಡಿದ ಸೀಲ್ಡೌನ್ ಆದ ಏರಿಯಾದ ಜನರು ಮುಂದಿನ ದಿನಗಳಲ್ಲಿ ಜೀವನ ನಡೆಸೋದು ಭಾರಿ ಕಷ್ಟವಾಗಲಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಸೀಲ್ಡೌನ್ ಮಾಡಿದ ಸರ್ಕಾರ ನಮಗೆ ಏನೂ ಸಹಾಯ ಮಾಡಿಲ್ಲ. ನಮಗೆ ಸಹಾಯ ಮಾಡದೆ ನಮ್ಮನ್ನು ಬೀದಿಗೆ ತಳ್ಳಿದಂತಾಗಿದೆ. ಹೀಗಾಗಿ ಸೀಲ್ಡೌನ್ ಮತ್ತು ಲಾಕ್ಡೌನ್ ಬದಲು ಎಲ್ಲವೂ ಓಪನ್ ಆಗಬೇಕು ಎಂದು ಜನರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
Published On - 2:55 pm, Sat, 11 July 20