ಬೆಲೆ ಸಿಗದ ಹಿನ್ನೆಲೆ ಟ್ರ್ಯಾಕ್ಟರ್‌ ಮೂಲಕ 2 ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಬೆಳೆ ನಾಶ

ರೈತ ಬಸವರಾಜು ಕಳೆದ ಒಂದು ವರ್ಷದಿಂದ ಎಲೆಕೋಸು ಬೆಳೆಯುತ್ತಾ ಬಂದಿದ್ದಾನೆ. ಒಂದು ವರ್ಷದಲ್ಲಿ 3 ಬಾರಿ ಎಲೆಕೋಸು ಬೆಳೆದಿದ್ದಾನೆ. ಆದ್ರೆ ವಿಪರ್ಯಾಸವೆಂದ್ರೆ ಅವನು ಬೆಳೆದ  3 ಬಾರಿಯೂ ಸೂಕ್ತ ಬೆಲೆ ಸಿಕ್ಕಿಲ್ಲ.  ಹೀಗಾಗಿ ತಾನು ಬೆಳೆದಿದ್ದ ಎಲೆ ಕೋಸಿನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಎರಡು ಎಕರೆ ಬೆಳೆಯನ್ನು ನಾಶ ಮಾಡಿದ್ದಾನೆ.

ಬೆಲೆ ಸಿಗದ ಹಿನ್ನೆಲೆ ಟ್ರ್ಯಾಕ್ಟರ್‌ ಮೂಲಕ 2 ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಬೆಳೆ ನಾಶ
ಬೆಲೆ ಸಿಗದ ಹಿನ್ನೆಲೆ ಟ್ರ್ಯಾಕ್ಟರ್‌ ಮೂಲಕ 2 ಎಕರೆಯಲ್ಲಿದ್ದ ಎಲೆಕೋಸು ಬೆಳೆ ನಾಶ
Follow us
ಸಾಧು ಶ್ರೀನಾಥ್​
|

Updated on:Mar 23, 2021 | 1:25 PM

ಚಿಕ್ಕಮಗಳೂರು: ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಮನನೊಂದ ರೈತ ಬಸವರಾಜು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎಲೆ ಕೋಸು ಬೆಳೆಯನ್ನು ನಾಶಪಡಿಸಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಹಿರೇಗೌಜದಲ್ಲಿ ರೈತ ಬಸವರಾಜು ಕಷ್ಟಾಪಟ್ಟು ಬೆವರು ಸುರಿಸಿ ಮಗುವಂತೆ ಬೆಳೆಸಿದ್ದ ಎಲೆ ಕೋಸಿಗೆ ಸೂಕ್ತ ಬೆಲೆ ಸಿಗದ ಕಾರಣ ಕಂಗಾಲಾಗಿ ಟ್ರ್ಯಾಕ್ಟರ್‌ ಮೂಲಕ ಎರಡು ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಬೆಳೆಯನ್ನು ನಾಶ ಮಾಡಿದ್ದಾನೆ.

ರೈತ ಬಸವರಾಜು ಕಳೆದ ಒಂದು ವರ್ಷದಿಂದ ಎಲೆಕೋಸು ಬೆಳೆಯುತ್ತಾ ಬಂದಿದ್ದಾನೆ. ಒಂದು ವರ್ಷದಲ್ಲಿ 3 ಬಾರಿ ಎಲೆಕೋಸು ಬೆಳೆದಿದ್ದಾನೆ. ಆದ್ರೆ ವಿಪರ್ಯಾಸವೆಂದ್ರೆ ಅವನು ಬೆಳೆದ  3 ಬಾರಿಯೂ ಸೂಕ್ತ ಬೆಲೆ ಸಿಕ್ಕಿಲ್ಲ.  ಹೀಗಾಗಿ ತಾನು ಬೆಳೆದಿದ್ದ ಎಲೆ ಕೋಸಿನ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಎರಡು ಎಕರೆ ಬೆಳೆಯನ್ನು ನಾಶ ಮಾಡಿದ್ದಾನೆ. ಇತ್ತ ಬೆಳೆದ ಬೆಳೆಗೆ ಸೂಕ್ತ ಬೆಲೆಯೂ ಸಿಗದೆ, ಲಾಭವಿಲ್ಲದೆ ರೈತ ಕಂಗಾಲಾಗಿದ್ದಾನೆ.

ಇದನ್ನೂ ಓದಿ: ಬಂಗಾರದಂಥ ಬೆಳೆಗೆ ಮಜ್ಜಿಗೆ ರೋಗದ ಕಾಟ: ಬೇಸತ್ತ ರೈತರಿಂದ ಮೆಣಸಿನಕಾಯಿ ಬೆಳೆ ನಾಶ..!

Published On - 1:19 pm, Tue, 23 March 21