ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಮಗು ಸಾವು

ಯಾದಗಿರಿ: ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ನಡೆದಿದೆ. ಯಲ್ಲಾಲಿಂಗ ಸಾವನ್ನಪ್ಪಿರುವ ಎರಡು ವರ್ಷದ ಮಗು. ಮಾನಪ್ಪ ಹಾಗೂ ಸೂರಮ್ಮ ದಂಪತಿಯ ಪುತ್ರನಾದ ಯಲ್ಲಾಲಿಂಗ ಮನೆ ಮುಂದೆ ಆಟವಾಡ್ತಿದ್ದ ವೇಳೆ ಅಲ್ಲೇ ಇದ್ದ ಚರಂಡಿಗೆ ಬಿದ್ದಿದ್ದಾನೆ. ಚರಂಡಿ ನೀರಲ್ಲಿ ಮಗು ಬಿದ್ದಿರುವುದನ್ನ ನೋಡಿದ ಆತನ ಪೋಷಕರು ಕೂಡಲೇ ಆತನನ್ನ ಸುರಪುರ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಯಲ್ಲಾಲಿಂಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.

ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಮಗು ಸಾವು

Updated on: Oct 10, 2020 | 7:08 PM

ಯಾದಗಿರಿ: ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಚರಂಡಿಗೆ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ನಡೆದಿದೆ. ಯಲ್ಲಾಲಿಂಗ ಸಾವನ್ನಪ್ಪಿರುವ ಎರಡು ವರ್ಷದ ಮಗು.
ಮಾನಪ್ಪ ಹಾಗೂ ಸೂರಮ್ಮ ದಂಪತಿಯ ಪುತ್ರನಾದ ಯಲ್ಲಾಲಿಂಗ ಮನೆ ಮುಂದೆ ಆಟವಾಡ್ತಿದ್ದ ವೇಳೆ ಅಲ್ಲೇ ಇದ್ದ ಚರಂಡಿಗೆ ಬಿದ್ದಿದ್ದಾನೆ. ಚರಂಡಿ ನೀರಲ್ಲಿ ಮಗು ಬಿದ್ದಿರುವುದನ್ನ ನೋಡಿದ ಆತನ ಪೋಷಕರು ಕೂಡಲೇ ಆತನನ್ನ ಸುರಪುರ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಯಲ್ಲಾಲಿಂಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.