ಆಟೋ ಚಾಲಕನಿಗೆ ಮಹಾಮಾರಿ ಅಟ್ಯಾಕ್! ಗಡಿ ಭಾಗದಲ್ಲಿ ಹೆಚ್ಚಾಯ್ತು ಆತಂಕ..

|

Updated on: Jun 18, 2020 | 3:04 PM

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಕಂಟ್ರೋಲ್​ನಲ್ಲಿದ್ದರೂ ಭಯ ಕಡಿಮೆಯಾಗಿಲ್ಲ. ಆಂಧ್ರದ ಗಡಿ ಭಾಗದಲ್ಲಿ ಜನರ ಓಡಾಟ ನಿರಂತರವಾಗಿರೋದು ಈ ಆತಂಕಕ್ಕೆ ಪ್ರಮುಖ ಕಾರಣ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ. ಇಲ್ಲಿಂದ ಆಂಧ್ರದ ಗಡಿ ಕೇವಲ 8ಕಿಲೋ ಮೀಟರ್. ಹೀಗಾಗಿಯೇ ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗಕ್ಕೆ ದಿನನಿತ್ಯವೂ ನೂರಾರು ಜನ ಓಡಾಡ್ತಾರೆ. ಅಂತೆಯೇ ಚಳ್ಳಕೆರೆ ತಾಲೂಕಿಗೂ ಆಂಧ್ರದ ಗಡಿ ಟಚ್ ಆಗುತ್ತದೆ, ಪರಶುರಾಂಪುರ ಭಾಗದಲ್ಲಿ ಅನೇಕರು […]

ಆಟೋ ಚಾಲಕನಿಗೆ ಮಹಾಮಾರಿ ಅಟ್ಯಾಕ್! ಗಡಿ ಭಾಗದಲ್ಲಿ ಹೆಚ್ಚಾಯ್ತು ಆತಂಕ..
Follow us on

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಕಂಟ್ರೋಲ್​ನಲ್ಲಿದ್ದರೂ ಭಯ ಕಡಿಮೆಯಾಗಿಲ್ಲ. ಆಂಧ್ರದ ಗಡಿ ಭಾಗದಲ್ಲಿ ಜನರ ಓಡಾಟ ನಿರಂತರವಾಗಿರೋದು ಈ ಆತಂಕಕ್ಕೆ ಪ್ರಮುಖ ಕಾರಣ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ. ಇಲ್ಲಿಂದ ಆಂಧ್ರದ ಗಡಿ ಕೇವಲ 8ಕಿಲೋ ಮೀಟರ್. ಹೀಗಾಗಿಯೇ ಆಂಧ್ರದ ಅನಂತಪುರ ಜಿಲ್ಲೆಯ ರಾಯದುರ್ಗಕ್ಕೆ ದಿನನಿತ್ಯವೂ ನೂರಾರು ಜನ ಓಡಾಡ್ತಾರೆ. ಅಂತೆಯೇ ಚಳ್ಳಕೆರೆ ತಾಲೂಕಿಗೂ ಆಂಧ್ರದ ಗಡಿ ಟಚ್ ಆಗುತ್ತದೆ, ಪರಶುರಾಂಪುರ ಭಾಗದಲ್ಲಿ ಅನೇಕರು ನಿತ್ಯ ಸಂಚರಿಸುತ್ತಾರೆ.

ಎರಡೂ ರಾಜ್ಯಗಳ ಜನರ ಮಧ್ಯೆ ವ್ಯಾಪಾರ ಸಂಬಂಧ ನಿರಂತರವಾಗಿದೆ. ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಇದು ದೊಡ್ಡ ಆತಂಕ ಸೃಷ್ಟಿಸಿದ್ದು, ಇಡೀ ಕೋಟೆನಾಡಿಗೆ ಸೋಂಕು ಹರಡಿಬಿಡುತ್ತಾ ಅನ್ನೋ ಭಯ ಶುರುವಾಗಿದೆ.

ಆಂಧ್ರದ ಗಡಿ ಭಾಗದಲ್ಲೇ ಹೆಚ್ಚು ಸೋಂಕಿತರು?
ಅಂದಹಾಗೆ ಈ ರೀತಿ ಭಯ ಎದುರಾಗೋದಕ್ಕೆ ಬಲವಾದ ಕಾರಣವಿದೆ. ಚಳ್ಳಕೆರೆ ತಾಲೂಕಿನ ಭರಮಸಾಗರದ ಆಟೋ ಚಾಲಕ ಮದುವೆಗೆ ಅಂತಾ ಆಂಧ್ರದ ಕಲ್ಯಾಣದುರ್ಗಕ್ಕೆ ಟ್ರಿಪ್ ಹೋಗಿದ್ದಾನೆ. ಆ ವ್ಯಕ್ತಿಗೆ ಆಂಧ್ರದಲ್ಲಿ ಪರೀಕ್ಷೆ ನಡೆಸಿದಾಗ, ಕೊರೊನಾ ಸೋಂಕು ದೃಢವಾಗಿದೆ.

ಇನ್ನು ಈ ಬಗ್ಗೆ ಆಂಧ್ರದ ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆ ಚಳ್ಳಕೆರೆಯ ಪರಶುರಾಂಪುರದಲ್ಲಿನ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮತ್ತೊಂದ್ಕಡೆ ಆಂಧ್ರಪ್ರದೇಶದ ಗಡಿ ಭಾಗದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ನಿಗಾ ಇಡುವುದೇ ಸವಾಲಾಗಿದೆ.

ಇನ್ನು ಆಂಧ್ರಕ್ಕೆ ಓಡಾಡಿದ ಚಳ್ಳಕೆರೆ ತಾಲೂಕಿನ ಭರಮಸಾಗರದ ಆಟೋ ಚಾಲಕನಿಗೆ ಸೋಂಕು ಖಚಿತವಾದ ಬಳಿಕ ದುರ್ಗದ ಜನ ಬೆಚ್ಚಿದ್ದಾರೆ. ಆತನ ಜೊತೆ ಸಂಪರ್ಕದಲ್ಲಿದ್ದ 7 ಜನರನ್ನೂ ಕ್ವಾರಂಟೈನ್ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಒಟ್ನಲ್ಲಿ ಲಾಕ್​ಡೌನ್​ನಿಂದ ರಿಲೀಫ್ ಸಿಗುತ್ತಿದ್ದಂತೆ ‘ಕೊರೊನಾ’ ಆರ್ಭಟ ಹೆಚ್ಚಾಗುತ್ತಿದೆ. ಈಗಾಗ್ಲೇ ಕರುನಾಡು ಬಾಂಬೆ ನಂಜಿನಿಂದ ತತ್ತರಿಸಿದ್ದು, ಆಂಧ್ರದಿಂದಲೂ ಇದೇ ರೀತಿ ಕೊರೊನಾ ಸ್ಪ್ರೆಡ್ ಆದರೆ ಹೇಗೆ ಅನ್ನೋ ಆತಂಕವೂ ಮೂಡಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಸರ್ಕಾರ ಗಡಿಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡು, ಜನ ಸಂಚಾರದ ಮೇಲೆ ನಿಗಾವಹಿಸಬೇಕಿದೆ. ಇಲ್ಲವಾದ್ರೆ ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಂತೆ ರಾಜ್ಯದಲ್ಲೂ ಡೆಡ್ಲಿ ಕೊರೊನಾ ಅಟ್ಟಹಾಸ ಮೆರೆಯುವ ದಿನಗಳು ದೂರವಿಲ್ಲ. ಹೀಗಾಗಿ ಮತ್ತಷ್ಟು ಮುನ್ನೆಚ್ಚರಿಕೆ ವಹಿಸಬೇಕಿದೆ.

Published On - 7:52 am, Thu, 18 June 20