ಮೊಳಕಾಲ್ಮೂರು: ಏಕಾಏಕಿ ವಿಚಿತ್ರ ರೋಗ, ಸುಲೇನಹಳ್ಳಿ ಜನರಲ್ಲಿ ಆತಂಕ

|

Updated on: Oct 29, 2020 | 12:18 PM

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿಯಲ್ಲಿ 35ಕ್ಕೂ ಹೆಚ್ಚು ಜನರಿಗೆ ಜ್ವರ, ಮೈ-ಕೈ ನೋವು, ಕಾಲು ಊತ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಕಾಣಿಸಿಕೊಂಡಿರುವ ಈ ಖಾಯಿಲೆಯಿಂದ ಜನ ಹೈರಾಣುಗೊಂಡಿದ್ದಾರೆ. ಮೊಳಕಾಲ್ಮೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ಹೆಚ್ಚಿದ ವಿಚಿತ್ರ ರೋಗದಿಂದ ಸುಲೇನಹಳ್ಳಿ ಜನರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮೊಳಕಾಲ್ಮೂರು: ಏಕಾಏಕಿ ವಿಚಿತ್ರ ರೋಗ, ಸುಲೇನಹಳ್ಳಿ ಜನರಲ್ಲಿ ಆತಂಕ
Follow us on

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸುಲೇನಹಳ್ಳಿಯಲ್ಲಿ 35ಕ್ಕೂ ಹೆಚ್ಚು ಜನರಿಗೆ ಜ್ವರ, ಮೈ-ಕೈ ನೋವು, ಕಾಲು ಊತ ಕಾಣಿಸಿಕೊಂಡಿದೆ. ಕಳೆದ ಒಂದು ವಾರದಿಂದ ಕಾಣಿಸಿಕೊಂಡಿರುವ ಈ ಖಾಯಿಲೆಯಿಂದ ಜನ ಹೈರಾಣುಗೊಂಡಿದ್ದಾರೆ.

ಮೊಳಕಾಲ್ಮೂರು ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ಹೆಚ್ಚಿದ ವಿಚಿತ್ರ ರೋಗದಿಂದ ಸುಲೇನಹಳ್ಳಿ ಜನರಲ್ಲಿ ಆತಂಕ ಮನೆ ಮಾಡಿದೆ. ಗ್ರಾಮಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.