ಮಧುಕರ್ ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ: ಸುಧೀರ್ ಅಂಗೂರ್ ಸೇರಿ 10 ಜನರ ವಿರುದ್ಧ FIR

ಆನೇಕಲ್: ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ. ಕಾಲೇಜ್ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ ಎಂದು ಮಧುಕರ್ ಅವರ ನಕಲಿ ಸಹಿ ಬಳಸಿಕೊಂಡು ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್‌ ದೂರು ದಾಖಲಿಸಿದ್ದರು. ದೂರು ಆಧರಿಸಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ. […]

ಮಧುಕರ್ ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ: ಸುಧೀರ್ ಅಂಗೂರ್ ಸೇರಿ 10 ಜನರ ವಿರುದ್ಧ FIR
Follow us
ಆಯೇಷಾ ಬಾನು
|

Updated on:Oct 29, 2020 | 11:46 AM

ಆನೇಕಲ್: ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ.

ಕಾಲೇಜ್ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ ಎಂದು ಮಧುಕರ್ ಅವರ ನಕಲಿ ಸಹಿ ಬಳಸಿಕೊಂಡು ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್‌ ದೂರು ದಾಖಲಿಸಿದ್ದರು.

ದೂರು ಆಧರಿಸಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ. ಶೈಲಜಾ ಚಬ್ಬಿ, ಮಧುಕರ್ ಅಂಗೂರ್ ಮತ್ತು ಸುಧೀರ್ ಅಂಗೂರ್ ಅಕ್ಕ ತಮ್ಮಂದಿರು. ಅಲಯನ್ಸ್​ ವಿವಿ ಸಂಸ್ಥಾಪಕ ಉಪಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದಲ್ಲಿ ಸುಧೀರ್ ಅಂಗೂರ್ ಜೈಲು ಪಾಲಾಗಿದ್ದಾರೆ. ಈ ಪ್ರಕರಣ ಸಂಬಂಧ ಆನೇಕಲ್ ಠಾಣೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಬೆಚ್ಚಿ ಬೀಳಿಸಿದ್ದ ಅಲೆಯನ್ಸ್‌ ವಿವಿ ಅಯ್ಯಪ್ಪ ದೊರೆ ಕೊಲೆ ಕೇಸ್

Published On - 11:38 am, Thu, 29 October 20