ಮುರಿದ ಸೇತುವೆ, ಮರದ ತುಂಡಿಟ್ಟು ಗ್ರಾಮಸ್ಥರೇ ಪರಿಹರಿಸಿಕೊಂಡ್ರು.. ಹಾಗಾದ್ರೆ ಜನಪ್ರತಿನಿಧಿಗಳು ಯಾಕ್ ಬೇಕು?
ಮಡಿಕೇರಿ: ಕೊಡಗಿನಲ್ಲಿ 2018ರಲ್ಲಿ ಆದ ಮಹಾಪ್ರಳಯ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. 2 ವರ್ಷ ಕಳೆದ್ರೂ ಹಲವು ರೀತಿಯ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಕೆಲವು ಸಮಸ್ಯೆಗಳನ್ನ ಊರಿನವರೇ ಪರಿಹರಿಸಿಕೊಳ್ಳುತ್ತಿದ್ದಾರೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲೊಂದು ಗ್ರಾಮ ಇದ್ದು, ದುರಸ್ತಿ ಕಾಣದ ಸೇತುವೆಗೆ ಗ್ರಾಮಸ್ಥರೇ ಹೊಸ ರೂಪ ಕೊಟ್ಟಿದ್ದಾರೆ. ಸೇತುವೆ ಅರ್ಧ ಮುರಿದುಬಿದ್ದಿದೆ. ತುಂಡಾದ ಭಾಗದಲ್ಲಿ ಗ್ರಾಮಸ್ಥರು ಮರದ ತುಂಡುಗಳನ್ನ ಬಳಸಿ ಪ್ಯಾಚ್ ವರ್ಕ್ ಮಾಡಿದ್ದಾರೆ. ನಡೆದು ಹೋಗಲು ಇಷ್ಟಾದ್ರು ಇದ್ಯಲ್ವಾ ಅನ್ನೋ ಸಮಾಧಾನ. ಇದಕ್ಕೆ ಆಡಳಿತ ವರ್ಗದ […]
ಮಡಿಕೇರಿ: ಕೊಡಗಿನಲ್ಲಿ 2018ರಲ್ಲಿ ಆದ ಮಹಾಪ್ರಳಯ ತಂದಿಟ್ಟ ಅನಾಹುತ ಅಷ್ಟಿಷ್ಟಲ್ಲ. 2 ವರ್ಷ ಕಳೆದ್ರೂ ಹಲವು ರೀತಿಯ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಕೆಲವು ಸಮಸ್ಯೆಗಳನ್ನ ಊರಿನವರೇ ಪರಿಹರಿಸಿಕೊಳ್ಳುತ್ತಿದ್ದಾರೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲೊಂದು ಗ್ರಾಮ ಇದ್ದು, ದುರಸ್ತಿ ಕಾಣದ ಸೇತುವೆಗೆ ಗ್ರಾಮಸ್ಥರೇ ಹೊಸ ರೂಪ ಕೊಟ್ಟಿದ್ದಾರೆ.
ಸೇತುವೆ ಅರ್ಧ ಮುರಿದುಬಿದ್ದಿದೆ. ತುಂಡಾದ ಭಾಗದಲ್ಲಿ ಗ್ರಾಮಸ್ಥರು ಮರದ ತುಂಡುಗಳನ್ನ ಬಳಸಿ ಪ್ಯಾಚ್ ವರ್ಕ್ ಮಾಡಿದ್ದಾರೆ. ನಡೆದು ಹೋಗಲು ಇಷ್ಟಾದ್ರು ಇದ್ಯಲ್ವಾ ಅನ್ನೋ ಸಮಾಧಾನ. ಇದಕ್ಕೆ ಆಡಳಿತ ವರ್ಗದ ಅಸಡ್ಡೆ ಅನ್ನಬೇಕೋ.. ಗ್ರಾಮಸ್ಥರ ಸ್ವಾವಲಂಬಿ ನಡೆ ಅನ್ನಬೇಕೋ ಗೊತ್ತಿಲ್ಲ. ಇಂಥದ್ದೊಂದು ಸ್ಥಿತಿ ಕಂಡುಬಂದಿದ್ದು ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿರೋ ಚಡಾವು ಗ್ರಾಮದಲ್ಲಿ.
ಗ್ರಾಮದ ಸಮಸ್ಯೆ ಗ್ರಾಮಸ್ಥರಿಂದಲೇ ಪರಿಹಾರ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯನಾಡಿನಿಂದ ಚಡಾವು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ 2018ರ ಪ್ರಕೃತಿ ವಿಕೋಪಕ್ಕೆ ಅರ್ಧ ಕುಸಿದಿತ್ತು. ಚಡಾವು ಭಾಗದ 100ಕ್ಕೂ ಅಧಿಕ ಕುಟುಂಬಗಳು ಇದರಿಂದಾಗಿ ಸಮಸ್ಯೆ ಅನುಭವಿಸ್ತಿದ್ದಾರೆ. ಪಯಸ್ವಿನಿ ನದಿ ದಾಟಿ ಊರಿಗೆ ಹೋಗೋಕೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಹತ್ತಾರು ಕಿಲೋ ಮೀಟರ್ ಬಳಸಿ ಊರು ಸೇರ್ತಿದ್ರು. ಈಗ ತಾತ್ಕಾಲಿಕ ಪರಿಹಾರವನ್ನು ಗ್ರಾಮಸ್ಥರೇ ಕಂಡುಕೊಂಡಿದ್ದಾರೆ.
ತುಂಡಾದ ಸೇತುವೆಯ ಅರ್ಧ ಭಾಗದಕ್ಕೆ ಮರದ ತುಂಡುಗಳನ್ನ ಬಳಸಿ ಕಾಲು ಸೇತುವೆ ಮಾಡಿಕೊಂಡಿದ್ದಾರೆ. ಸ್ಥಳೀಯ ಆಡಳಿತ ಸೂಕ್ತ ಸ್ಪಂದನೆ ನೀಡದ ಕಾರಣಕ್ಕೆ, ಎಲ್ಲರೂ ಒಟ್ಟಾಗಿ ಶ್ರಮದಾನದ ಮೂಲಕ ಕಾಲು ಸೇತುವೆ ರೆಡಿ ಮಾಡಿದ್ದಾರೆ. ಸದ್ಯಕ್ಕೆ ಇದು ತಾತ್ಕಾಲಿಕ ಪರಿಹಾರ ಅನ್ನಬಹುದು. ಆದ್ರೆ, ಮಳೆ ಬಂದ ಸಂದರ್ಭದಲ್ಲಿ ನದಿ ದಾಟೋದು ಕಷ್ಟ. ಮತ್ತೆ ಹತ್ತಾರು ಕಿಲೋಮೀಟರ್ ಬಳಸಿ ತೆರಳಬೇಕಾದ ಅನಿವಾರ್ಯತೆ ಇದೆ.
ಹಲವು ಬಾರಿ ಮನವಿ ಕೊಟ್ಟರೂ, ಸೇತುವೆ ದುರಸ್ತಿ ಮಾಡುವಂತೆ ಮನವಿ ಮಾಡಿದ್ರೂ ಯಾರೂ ಸ್ಪಂದಿಸಿಲ್ಲ. ಒಂದರ್ಥದಲ್ಲಿ ವ್ಯವಸ್ಥೆ ಮೇಲಿನ ನಂಬಿಕೆಯನ್ನೆ ಜನ ಕಳೆದುಕೊಂಡಿದ್ದಾರೆ. ಚುನಾವಣೆ ವೇಳೆ ಭರವಸೆ ಕೊಡೋದನ್ನ ಬಿಟ್ಟು ಗ್ರಾಮೀಣ ಭಾಗದ ಕಷ್ಟಕ್ಕೆ ನಾವು ಸ್ಪಂದಿಸ್ತೇವೆ ಅನ್ನೋದನ್ನ ಜನಪ್ರತಿನಿಧಿಗಳು ಸಾಬೀತು ಮಾಡ್ಬೇಕಿದೆ.