ಚಿತ್ರದುರ್ಗದ ಮುರುಘಾ ಮಠ ನಕ್ಸಲರ ಅಡ್ಡೆಯಾಗಿದೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಚಿತ್ರದುರ್ಗದ ಮುರುಘಾ ಮಠ ಪ್ರಗತಿಪರರು, ನಕ್ಸಲರ ಅಡ್ಡೆಯಾಗಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠ (Murugha Mutt) ಪ್ರಗತಿಪರರು, ನಕ್ಸಲರ (Naxal) ಅಡ್ಡೆಯಾಗಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ (BJP) ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda patil yatnal) ಹೇಳಿದ್ದಾರೆ. ಚಿತ್ರದುರ್ಗದ ಮಠದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಮಠದ ಆಸ್ತಿ ಬಗ್ಗೆ ತನಿಖೆಯಾಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಮೂರ್ತಿ ಅವರಿಗೆ ಪತ್ರ ಬರೆಯುತ್ತೇನೆ. ಚಿತ್ರದುರ್ಗ ಮುರುಘಾ ಮಠದ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗಲಿ ಎಂದರು.
ಶಿವಮೂರ್ತಿ ಮರುಘಾ ಶರಣರನ್ನು ಗದ್ದುಗೆಯಿಂದ ಕೆಳಗಿಳಿಸಬೇಕು. ಚಿತ್ರದುರ್ಗದ ಮುರುಘಾ ಮಠದ ಆಡಳಿತಾಧಿಕಾರಿ ಮಠವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಅದು ಲಿಂಗಾಯತರ ಶ್ರೀಮಂತ ಮಠವಾಗಿದೆ. ಮಠದ ಆಸ್ತಿ ಹೇಗೆ ಉಳಿಸಬೇಕು? ಅಲ್ಲಿರುವ ಆಡಳಿತಾಧಿಕಾರಿ ದುರುಪಯೋಗ ಮಾಡಿಕೊಂಡಿದ್ದಾರೆ. ಮೊದಲು ೧೦ ಸಾವಿರ ಎಕರೆ ಕಾಫಿ ಎಸ್ಟೇಟ್ ಇತ್ತು. ಈಗ ೫೦೦ ಎಕರೆಗೆ ಇಳಿದಿದೆ. ಹೆಲಿಕಾಪ್ಟರ್ ಯಾರದ್ದು ಎಂದು ಗೊತ್ತಾಗಬೇಕು. ಬೇರೆ ಮಠದ ಮೇಲೆ ಇಂತಹ ಗಂಭೀರ ಆರೋಪ ಬಂದಿಲ್ಲ ಎಂದು ತಿಳಿಸಿದರು.
ಬಾಲಕಿಯರ ಮೇಲಿನ ಆರೋಪ ಬಂದಿದೆ. ಜಾತ್ಯಾತೀತರು, ಪ್ರಗತಿಪರರಿಗೆ ಪ್ರಶಸ್ತಿ ಕೊಡಲಾಗಿದೆ. ಅದಕ್ಕೆ ನಾವು ಹೈಕೋರ್ಟ್ ಮೇಲೆ ಒತ್ತಡ ತರುತ್ತೇವೆ. ಮಠದ ಸಂಪ್ರದಾಯಂತೆ ನಡೆದುಕೊಳ್ಳಬೇಕು. ಪಾಕ್ನ ಮಲಾಲಗೆ ಬಸವ ಪ್ರಶಸ್ತಿ ಕೊಟ್ಟಿದ್ದಾರೆ. ಲಿಂಗಾಯತ ಮಠ ಅಂದರೆ ಶಿಕ್ಷಣ ಕೊಡುವುದು. ಸಿದ್ದಗಂಗಾ ಮಠದಂತೆ ಇರಬೇಕು. ಇದರ ಬಗ್ಗೆ ಎಲ್ಲಾ ತನಿಖೆಯಾಗಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ