ಹೈಕಮಾಂಡ್ ಒಪ್ಪಿಗೆಯಿಲ್ಲದೆ ನಾನ್ಯಾಕೆ ಸಚಿವ ಸ್ಥಾನದ ಭರವಸೆ ನೀಡಲಿ: ಯಡಿಯೂರಪ್ಪ ಪ್ರಶ್ನೆ

ನಿನ್ನೆ ಯಾರಿಗೂ ಭರವಸೆ ನೀಡಿಲ್ಲ. ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅವರು ಒಪ್ಪಿಗೆ ನೀಡದೆ ನಾನು ಯಾಕೆ ಭರವಸೆ ನೀಡಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಹೈಕಮಾಂಡ್ ಒಪ್ಪಿಗೆಯಿಲ್ಲದೆ ನಾನ್ಯಾಕೆ ಸಚಿವ ಸ್ಥಾನದ ಭರವಸೆ ನೀಡಲಿ: ಯಡಿಯೂರಪ್ಪ ಪ್ರಶ್ನೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Edited By:

Updated on: Apr 06, 2022 | 10:58 PM

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೆಲವು ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿದೆ ಎಂಬ ವಿಚಾರದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಯಾರಿಗೂ ಭರವಸೆ ನೀಡಿಲ್ಲ. ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಅವರು ಒಪ್ಪಿಗೆ ನೀಡದೆ ನಾನು ಯಾಕೆ ಭರವಸೆ ನೀಡಲಿ ಎಂದು ಯಡಿಯೂರಪ್ಪ ಮರುಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ, ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದೀರಾ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಕ್ಕೆ ಅವರು ಹೀಗೆ ಉತ್ತರಿಸಿದ್ದಾರೆ. ಹೈಕಮಾಂಡ್ ಒಪ್ಪಿದರೆ ಯಾರು ಸಚಿವರಾಗಬೇಕೋ ಅವರು ಸಚಿವರಾಗುತ್ತಾರೆ ಎಂದು ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಚಿವ ಸ್ಥಾನದ ಬಗ್ಗೆ ನಿನ್ನೆ ಕೆಲವರಿಗೆ ಭರವಸೆ ಕೊಟ್ಟಿದ್ದೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಇಲ್ಲ ಎಂದು ತಲೆ ಅಲ್ಲಾಡಿಸಿದ್ದಾರೆ.

ಶಾಸಕರ ಅಸಮಾಧಾನ ತಣ್ಣಗಾಗಿಸಲು ಯಡಿಯೂರಪ್ಪ ಇಂದೂ ಯತ್ನ, ಸಭೆಯಲ್ಲಿ ಭಾಗಿ

Published On - 11:39 am, Wed, 6 January 21