ಮನೆಮನೆಗೂ ತೆರಳಿ ತಲಾ 25 ಸಾವಿರ ರೂ. ಚೆಕ್ ಕೊಡ್ತೇವೆ -ಮಳೆ ಸಂತ್ರಸ್ತರಿಗೆ CM BSY ಭರವಸೆ
ಬೆಂಗಳೂರು: ಹೊಸಕೆರೆಹಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇದೀಗತಾನೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಸಿಎಂ ಬಿಎಸ್‌ವೈಗೆ ಕಂದಾಯ ಸಚಿವ ಆರ್.ಅಶೋಕ್ ಸಾಥ್ ನೀಡಿದರು. ಮಳೆ ಹಾನಿಯ ಬಗ್ಗೆ ಆರ್.ಅಶೋಕ್ ಮತ್ತು ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದರು. ಜೊತೆಗೆ, ಮಳೆಯಿಂದ ಹಾನಿಯಾದ ಮನೆಗಳಿಗೂ ಸಿಎಂ BSY ಭೇಟಿ ನೀಡಿ ಸಂತ್ರಸ್ತರಿಂದಲೂ ಮಾಹಿತಿ ಪಡೆದರು. ರಾಜಕಾಲುವೆ ಒತ್ತುವರಿ 2-3 ದಿನಗಳಲ್ಲೇ ತೆರವುಗೊಳಿಸ್ತೇವೆ ಇತ್ತ ಪರಿಶೀಲನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮನೆಮನೆಗೂ ತೆರಳಿ ತಲಾ 25 ಸಾವಿರ […]
ಬೆಂಗಳೂರು: ಹೊಸಕೆರೆಹಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಇದೀಗತಾನೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಸಿಎಂ ಬಿಎಸ್‌ವೈಗೆ ಕಂದಾಯ ಸಚಿವ ಆರ್.ಅಶೋಕ್ ಸಾಥ್ ನೀಡಿದರು. ಮಳೆ ಹಾನಿಯ ಬಗ್ಗೆ ಆರ್.ಅಶೋಕ್ ಮತ್ತು ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದರು. ಜೊತೆಗೆ, ಮಳೆಯಿಂದ ಹಾನಿಯಾದ ಮನೆಗಳಿಗೂ ಸಿಎಂ BSY ಭೇಟಿ ನೀಡಿ ಸಂತ್ರಸ್ತರಿಂದಲೂ ಮಾಹಿತಿ ಪಡೆದರು.
ರಾಜಕಾಲುವೆ ಒತ್ತುವರಿ 2-3 ದಿನಗಳಲ್ಲೇ ತೆರವುಗೊಳಿಸ್ತೇವೆ ಇತ್ತ ಪರಿಶೀಲನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮನೆಮನೆಗೂ ತೆರಳಿ ತಲಾ 25 ಸಾವಿರ ರೂಪಾಯಿ ಚೆಕ್ ನೀಡ್ತೇವೆ. ಮುಂದಿನ ದಿನಗಳಲ್ಲಿ ಹಾನಿಯಾಗದಂತೆ ಶಾಶ್ವತ ಪರಿಹಾರ ಕಲ್ಪಿಸಿಕೊಡುತ್ತೇವೆ ಎಂದು ಭರವಸೆ ಸಹ ನೀಡುತ್ತೇನೆ ಎಂದು ಹೇಳಿದರು.
ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಸಚಿವ ಅಶೋಕ್ ಜೊತೆ ಚರ್ಚೆ ಮಾಡುತ್ತೇನೆ. ರಾಜಕಾಲುವೆ ಒತ್ತುವರಿಯನ್ನು 2-3 ದಿನಗಳಲ್ಲೇ ತೆರವುಗೊಳಿಸ್ತೇವೆ ಎಂದು ಸಂತ್ರಸ್ತರಿಗೆ ಆಶ್ವಾಸನೆ ನೀಡಿದರು.
ಈ ನಡುವೆ, ದತ್ತಾತ್ರೇಯ ದೇಗುಲ ಬಳಿ ಮನೆಗಳ ಪರಿಶೀಲಿಸದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕಾರು ತಡೆದ ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳೇ ಬಡವರ ಮನೆ ನೋಡಿ ಎಂದು ಜನರ ಕೂಗು ಸಹ ಹಾಕಿದರು. ಆಗ, ಸಿಎಂ ಯಡಿಯೂರಪ್ಪ ದತ್ತಾತ್ರೇಯ ದೇಗುಲದೊಳಗೆ ತೆರಳಿದರು. ನಂತರ, ಕುಮಾರಸ್ವಾಮಿ ಲೇಔಟ್ನತ್ತ ಪರಿಶೀಲನೆಗೆ ತೆರಳಿದರು.
ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಘೋಷಣೆ ಮಾಡಲ್ಲ: ಜಾರಿಕೊಂಡ ಸಿಎಂ