ಸಂಕಷ್ಟಹರ ಗಣಪನ ಬಳಿ ಕೊರೊನಾ ನಿವಾರಣೆಗೆ ಸಿಎಂ BSY ಪ್ರಾರ್ಥನೆ

ಬೆಂಗಳೂರು: ಮುಖ್ಯಮಂತ್ರಿ BS ಯಡಿಯೂರಪ್ಪರ ಕಾವೇರಿ ನಿವಾಸದಲ್ಲೂ ಗಣೇಶ ಚತುರ್ಥಿಯ ಸಂಭ್ರಮ ಮನೆಮಾಡಿತು. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಿಎಂ ಯಡಿಯೂರಪ್ಪ ಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಸಿಎಂ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿ ಎಲ್ಲಾ ಕುಟುಂಬಸ್ಥರು ಭಾಗಿಯಾದರು, ಬೆಳಗ್ಗೆಯೇ ಸರಳವಾಗಿ ಸಂಭ್ರಮದ ಗಣಪತಿ ಕೂರಿಸಿ ಪೂಜಿಸಿದ ಸಿಎಂ ಪೂಜೆ ವೇಳೆ ಕೊರೊನಾ ಸಂಕಷ್ಟ ನಿವಾರಣೆಗೆ ಸಂಕಲ್ಪ ಮಾಡಿಕೊಂಡರು ಎಂದು ತಿಳಿದುಬಂದಿದೆ. ಜೊತೆಗೆ, ರಾಜ್ಯದ ಜನತೆಗೆ ಕೊರೊನಾದಿಂದ‌ ಮುಕ್ತಿ ನೀಡುವಂತೆ ಪ್ರಾರ್ಥನೆ ಸಹ ಸಲ್ಲಿಸಿದರಂತೆ.

ಸಂಕಷ್ಟಹರ ಗಣಪನ ಬಳಿ ಕೊರೊನಾ ನಿವಾರಣೆಗೆ ಸಿಎಂ BSY ಪ್ರಾರ್ಥನೆ
Follow us
KUSHAL V
|

Updated on: Aug 22, 2020 | 11:58 AM

ಬೆಂಗಳೂರು: ಮುಖ್ಯಮಂತ್ರಿ BS ಯಡಿಯೂರಪ್ಪರ ಕಾವೇರಿ ನಿವಾಸದಲ್ಲೂ ಗಣೇಶ ಚತುರ್ಥಿಯ ಸಂಭ್ರಮ ಮನೆಮಾಡಿತು. ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಸಿಎಂ ಯಡಿಯೂರಪ್ಪ ಪೂಜೆ ಸಲ್ಲಿಸಿದರು.

ಪೂಜೆಯಲ್ಲಿ ಸಿಎಂ ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿ ಎಲ್ಲಾ ಕುಟುಂಬಸ್ಥರು ಭಾಗಿಯಾದರು, ಬೆಳಗ್ಗೆಯೇ ಸರಳವಾಗಿ ಸಂಭ್ರಮದ ಗಣಪತಿ ಕೂರಿಸಿ ಪೂಜಿಸಿದ ಸಿಎಂ ಪೂಜೆ ವೇಳೆ ಕೊರೊನಾ ಸಂಕಷ್ಟ ನಿವಾರಣೆಗೆ ಸಂಕಲ್ಪ ಮಾಡಿಕೊಂಡರು ಎಂದು ತಿಳಿದುಬಂದಿದೆ. ಜೊತೆಗೆ, ರಾಜ್ಯದ ಜನತೆಗೆ ಕೊರೊನಾದಿಂದ‌ ಮುಕ್ತಿ ನೀಡುವಂತೆ ಪ್ರಾರ್ಥನೆ ಸಹ ಸಲ್ಲಿಸಿದರಂತೆ.