
ಬೆಂಗಳೂರು: ನಗರದ ಹೊಸಕೆರೆಹಳ್ಳಿಯಲ್ಲಿ ಇತ್ತೀಚೆಗೆ ಭಾರಿ ಮಳೆಯಾಗಿ ಅಲ್ಲಿನ ನಿವಾಸಿಗಳು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಹಲವಾರು ಮನೆಗಳಿಗೆ ನೀರು ನುಗ್ಗಿ ದಿನಬಳಕೆಯ ವಸ್ತುಗಳು ಹಾಗೂ ಉಪಕರಣಗಳು ಹಾಳಾಗಿದ್ದವು. ಬಡಾವಣೆಯ ವಿದ್ಯಾರ್ಥಿಗಳ ನೋಟ್‌ಬುಕ್ ಸಹ ನೀರಿನಲ್ಲಿ ಕೊಚ್ಚಿಹೋಗಿದ್ದವು.
ಇದನ್ನು ಗಮನಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬಡಾವಣೆಯ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ನೋಟ್‌ಬುಕ್ ಜೊತೆಗೆ ಸಿಎಂ ಬಿಎಸ್‌ವೈರಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಸಹ ದೊರೆಯಿತು. ಸಿಎಂ ಅಧಿಕೃತ ನಿವಾಸವಾದ ಕಾವೇರಿಗೆ ವಿದ್ಯಾರ್ಥಿಗಳನ್ನ ಕರೆಸಿ ನೋಟ್ ಬುಕ್‌ಗಳ ವಿತರಣೆ ಜೊತೆಗೆ ಆರ್ಥಿಕ ನೆರವು ಸಹ ನೀಡಿದರು.