ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ.. ಸರಳ ದಸರಾ ಜಂಬೂ ಸವಾರಿಗೆ ಸಿಎಂ ಚಾಲನೆ

| Updated By: KUSHAL V

Updated on: Oct 26, 2020 | 4:12 PM

ಮೈಸೂರು: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಬಿ.ಎಸ್​.ಯಡಿಯೂರಪ್ಪ ಚಿನ್ನದ ಅಂಬಾರಿಯಲ್ಲಿ ಸ್ಥಾಪಿತವಾದ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಶುಭ ಕುಂಭ ಲಗ್ನದಲ್ಲಿ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕೊರೊನಾ ಹಿನ್ನೆಲೆ ಈ ಬಾರಿ ಜಂಬೂಸವಾರಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ರಾಜ ನಡಿಗೆ: ಐತಿಹಾಸಿಕ ಜಂಬೂಸವಾರಿಗಾಗಿ ಮೈಸೂರು ಅರಮನೆಯಲ್ಲಿ ಚಿನ್ನದ ಅಂಬಾರಿಯನ್ನು ಅಲಂಕಾರ ಮಾಡಲಾಯಿತು. ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯುನನ್ನು ಬಣ್ಣಗಳಿಂದ […]

ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ.. ಸರಳ ದಸರಾ ಜಂಬೂ ಸವಾರಿಗೆ ಸಿಎಂ ಚಾಲನೆ
Follow us on

ಮೈಸೂರು: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಬಿ.ಎಸ್​.ಯಡಿಯೂರಪ್ಪ ಚಿನ್ನದ ಅಂಬಾರಿಯಲ್ಲಿ ಸ್ಥಾಪಿತವಾದ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು. ಶುಭ ಕುಂಭ ಲಗ್ನದಲ್ಲಿ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಕೊರೊನಾ ಹಿನ್ನೆಲೆ ಈ ಬಾರಿ ಜಂಬೂಸವಾರಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ.

ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ರಾಜ ನಡಿಗೆ:
ಐತಿಹಾಸಿಕ ಜಂಬೂಸವಾರಿಗಾಗಿ ಮೈಸೂರು ಅರಮನೆಯಲ್ಲಿ ಚಿನ್ನದ ಅಂಬಾರಿಯನ್ನು ಅಲಂಕಾರ ಮಾಡಲಾಯಿತು. ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯುನನ್ನು ಬಣ್ಣಗಳಿಂದ ಸಿಂಗರಿಸಲಾಗಿದೆ. ಕ್ಯಾಪ್ಟನ್ ಅಭಿಮನ್ಯು ಆನೆಗೆ ಹಣೆಪಟ್ಟಿ, ದಂತಗಳಿಗೆ ಕವಚ, ವಿಶೇಷ ಕಾಸಿನ ಸರದ ಕೊರಳ ಘಂಟೆ, ಕಾಲಿಗೆ ಗೆಜ್ಜೆ ಸೇರಿದಂತೆ ಹಲವು ಆಭರಣಗಳಿಂದ ಅಲಂಕಾರ ಮಾಡಲಾಗಿದೆ. ಅರಮನೆ ಆವರಣದಲ್ಲಿಯೇ ವಿಜಯದಶಮಿ ಮೆರವಣಿಗೆಯಾಗಿದೆ. ಮೊದಲ ಬಾರಿಗೆ ‘ಅಭಿಮನ್ಯು’ ಅಂಬಾರಿ ಹೊರುತ್ತಿದ್ದು, ಅಭಿಮನ್ಯುಗೆ ವಿಜಯಾ, ಕಾವೇರಿ ಆನೆಗಳು ಸಾಥ್ ನೀಡಿದವು. ಇದು ಅರಮನೆಯಲ್ಲಿ ರಾಜ ವೈಭವವನ್ನೇ ಮತ್ತೆ ಸೃಷ್ಟಿಸಿದಂತಿತ್ತು.

ಇನ್ನು ಸರಳ ದಸರಾ ಹಿನ್ನೆಲೆಯಲ್ಲಿ ಪ್ರತಿ ವರ್ಷ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5.5 ಕಿಲೋ ಮೀಟರ್ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಕೇವಲ 400 ಮೀಟರ್‌ ಅಂತರದಲ್ಲೇ ಸಾಗಿ ಬಂದಿದೆ. ವಿಜಯದಶಮಿ ಜಂಬೂಸವಾರಿಯಲ್ಲಿ ಕೇವಲ 4 ಕಲಾತಂಡಗಳು ಭಾಗಿಯಾಗಿವೆ. ಅಶ್ವಾರೋಹಿ ದಳದ 2 ತುಕಡಿ, ಒಂದು ಸ್ತಬ್ಧ ಚಿತ್ರ ಮಾತ್ರ ಭಾಗಿಯಾಗಿದ್ದು ಇದರ ಜೊತೆಗೆ ಕರ್ನಾಟಕ ಪೊಲೀಸ್ ಬ್ಯಾಂಡ್​ ಆನೆಗಾಡಿಯೂ ಭಾಗಿಯಾಗಿದೆ. ಪ್ರತಿ ಬಾರಿ ಕಂಡು ಬರುತ್ತಿದ್ದ ಸಂಭ್ರಮ, ಸಡಗರ ಈ ಬಾರಿ ಕೊಂಚ ಕಮ್ಮಿಯಾಗಿತ್ತು. ಲಕ್ಷಾಂತರ ಜನ ನಿಂತು ನೋಡುತಿದ್ದ ಬೀದಿಗಳು ಖಾಲಿ ಖಾಲಿಯಾಗಿ ಕಂಡು ಬಂದವು.


Published On - 3:58 pm, Mon, 26 October 20