
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಭಾಗವಾದ ಐತಿಹಾಸಿಕ ದಸರಾ ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದೆ. ಸೋಮವಾರ ನಡೆಯಲಿರುವ ಜಂಬೂಸವಾರಿ ವೇಳೆ ಸಿಎಂ ಯಡಿಯೂರಪ್ಪರಿಂದ ಪೂಜೆ ನೆರವೇರಿಸಲಾಗುವುದು.
ಮಧ್ಯಾಹ್ನ 3.40ರಿಂದ ಸಂಜೆ 4.15ರ ಸಮಯದಲ್ಲಿ ಮುಖ್ಯಮಂತ್ರಿಗಳು ಜಂಬೂ ಸವಾರಗೆ ಚಾಲನೆ ನೀಡುವರು. ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ಮಾಡುವರು ಎಂಬ ಮಾಹಿತಿ ಸಿಕ್ಕಿದೆ.
ಈ ಬಾರಿ ಜಂಬೂಸವಾರಿ ವೇಳೆ 2 ಸ್ತಬ್ಧಚಿತ್ರಗಳ ಮೆರವಣಿಗೆ
ಇನ್ನು, ಈ ಬಾರಿ ಜಂಬೂಸವಾರಿ ವೇಳೆ 2 ಸ್ತಬ್ಧಚಿತ್ರಗಳ ಮೆರವಣಿಗೆ ಮಾತ್ರ ನಡೆಸಲಾಗುವುದು ಎಂದು ತಿಳದುಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾ ಸರಳವಾಗಿ ಆಚರಿಸಲಾಗುತ್ತಿದ್ದು ಈ ಬಾರಿ ಕೇವಲ 2 ಸ್ತಬ್ಧಚಿತ್ರ ಮಾತ್ರ ಮೆರವಣಿಗೆ ನಡೆಸುವುದು.
ಮೈಸೂರಿನ ಸಂಸ್ಕೃತಿಯ ಪ್ರತೀಕವಾದ ಆನೆ ಬಂಡಿಯ ಸ್ತಬ್ಧಚಿತ್ರ ಮತ್ತು ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸುವ ಸ್ತಬ್ಧಚಿತ್ರ ಮಾತ್ರ ಮೆರವಣಿಗೆಯಲ್ಲ ಪಾಲ್ಗೊಳ್ಳುವುದು. ಪ್ರತಿವರ್ಷದಂತೆ ಈ ಬಾರಿ 30 ಸ್ತಬ್ಧಚಿತ್ರ ಮೆರವಣಿಗೆ ಇರಲ್ಲ.