ನಾಳೆ ರಜೆ ಹಿನ್ನೆಲೆ.. ಶಕ್ತಿ ಕೇಂದ್ರದಲ್ಲಿ ಇಂದೇ ಆಯುಧ ಪೂಜೆ ಸಂಭ್ರಮ!
ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನ ಸೌಧ ಮತ್ತು ವಿಕಾಸ ಸೌಧದಲ್ಲಿ ಆಯುಧ ಪೂಜೆಯ ಸಂಭ್ರಮ ಇಂದು ಮನೆಮಾಡಿತ್ತು. ನಾಳೆ ರಜೆಯಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಇಂದೇ ಪೂಜೆ ಸಲ್ಲಿಸಿದರು. ಎಲ್ಲಾ ಇಲಾಖೆಗಳಲ್ಲಿ ಆಯುಧ ಪೂಜೆ ನೆರವೇರಿಸಿದ ಸಿಬ್ಬಂದಿ ತಮ್ಮ ಕಚೇರಿಗಳ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಿದರು. ಬಳಿಕ ಹೂವಿನ ಅಲಂಕಾರದೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು. ಕೊರೊನಾದಿಂದ ಸರಳವಾಗಿ ಪೂಜಾ ಕಾರ್ಯ ನೆರವೇರಿಸಿದರು. ಕ್ಯಾಬಿನೆಟ್ ಹಾಲ್, ಸಿಎಂ ಕಚೇರಿ, ಸಚಿವರ ಕಚೇರಿ ಹಾಗೂ ಅಧಿಕಾರಿಗಳ ಕಚೇರಿಗಳಲ್ಲಿ […]

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರಗಳಾದ ವಿಧಾನ ಸೌಧ ಮತ್ತು ವಿಕಾಸ ಸೌಧದಲ್ಲಿ ಆಯುಧ ಪೂಜೆಯ ಸಂಭ್ರಮ ಇಂದು ಮನೆಮಾಡಿತ್ತು. ನಾಳೆ ರಜೆಯಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಇಂದೇ ಪೂಜೆ ಸಲ್ಲಿಸಿದರು.
ಎಲ್ಲಾ ಇಲಾಖೆಗಳಲ್ಲಿ ಆಯುಧ ಪೂಜೆ ನೆರವೇರಿಸಿದ ಸಿಬ್ಬಂದಿ ತಮ್ಮ ಕಚೇರಿಗಳ ಮುಂಭಾಗದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ ಸಿಂಗರಿಸಿದರು. ಬಳಿಕ ಹೂವಿನ ಅಲಂಕಾರದೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು. ಕೊರೊನಾದಿಂದ ಸರಳವಾಗಿ ಪೂಜಾ ಕಾರ್ಯ ನೆರವೇರಿಸಿದರು. ಕ್ಯಾಬಿನೆಟ್ ಹಾಲ್, ಸಿಎಂ ಕಚೇರಿ, ಸಚಿವರ ಕಚೇರಿ ಹಾಗೂ ಅಧಿಕಾರಿಗಳ ಕಚೇರಿಗಳಲ್ಲಿ ಪೂಜೆ ಸಲ್ಲಿಸಿದರು.




