ಹೊಸಕೋಟೆ ಪೆಟ್ರೋಲ್ ಬಂಕ್‌ನಲ್ಲಿ ವಂಚನೆ ಆರೋಪ, ಗ್ರಾಹಕರಿಂದ ಮುತ್ತಿಗೆ
ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಹಸಿಗಾಳ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್‌ಗೆ ಗ್ರಾಹಕರು ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಕ್ಯಾಂಟರ್ಗೆ ಡೀಸೆಲ್ ತುಂಬಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಕ್ಯಾಂಟರ್ ವಾಹನದ ಡೀಸೆಲ್ ಟ್ಯಾಂಕ್ ಸಾಮರ್ಥ್ಯ 190 ಲೀಟರ್. ಆದರೆ ಕ್ಯಾಂಟರ್‌ನಲ್ಲಿ 25 ಲೀಟರ್ ಇದ್ದಾಗ ಚಾಲಕ ಡೀಸೆಲ್ ಹಾಕಿಸಿದ್ದ. ಈ ವೇಳೆ 25 ಲೀ. ಇದ್ದರೂ 189 […]

ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಹಸಿಗಾಳ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್‌ಗೆ ಗ್ರಾಹಕರು ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಕ್ಯಾಂಟರ್ಗೆ ಡೀಸೆಲ್ ತುಂಬಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಕ್ಯಾಂಟರ್ ವಾಹನದ ಡೀಸೆಲ್ ಟ್ಯಾಂಕ್ ಸಾಮರ್ಥ್ಯ 190 ಲೀಟರ್. ಆದರೆ ಕ್ಯಾಂಟರ್‌ನಲ್ಲಿ 25 ಲೀಟರ್ ಇದ್ದಾಗ ಚಾಲಕ ಡೀಸೆಲ್ ಹಾಕಿಸಿದ್ದ. ಈ ವೇಳೆ 25 ಲೀ. ಇದ್ದರೂ 189 ಲೀ. ಡೀಸೆಲ್ ಹಾಕಿದ್ದಾನೆ ಎಂದು ಚಾಲಕ ಆರೋಪಿಸಿದ್ದಾನೆ. ಹಾಗೂ ಕ್ಯಾಂಟರ್ಗೆ 190 ಲೀಟರ್ ಸಾಮರ್ಥ್ಯ ಇರುತ್ತೆ. ಆದರೆ ಹೇಗೆ 189 ಲೀಟರ್ ಹಾಕಲು ಸಾಧ್ಯವಾಯಿತು ಎಂದು ಪ್ರಶ್ನೆ ಮಾಡಿದ್ದಾನೆ.
ಚಾಲಕ ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಜಮಾವಣೆಗೊಂಡಿದ್ದಾರೆ. ಹಲವರಿಗೆ ಇದೇ ರೀತಿ ಬಂಕ್ ಸಿಬ್ಬಂದಿ ವಂಚನೆ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸೂಲಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.







