ಶಿರಾದಲ್ಲಿ ಅಲೆ ಅಲ್ಲ, ಸುನಾಮಿ ರೀತಿಯ ಬೆಂಬಲ ಸಿಕ್ಕಿದೆ -BY ವಿಜಯೇಂದ್ರ

ತುಮಕೂರು: ದೊಡ್ಡ ಸವಾಲನ್ನು ಒಗ್ಗಟ್ಟಾಗಿ ಸ್ವೀಕರಿಸಿ ಗೆಲುವು ಸಾಧಿಸಿದ್ದೇವೆ ಎಂದು ತುಮಕೂರಿನಲ್ಲಿ ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ನಂತರ ಮಾತನಾಡಿದ ವಿಜಯೇಂದ್ರ ಬಿಜೆಪಿಯ ಎಲ್ಲಾ ಮುಖಂಡರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ಶಿರಾ ಕ್ಷೇತ್ರದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಸಿಎಂ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಶಿರಾದಲ್ಲಿ ಅಲೆ ಅಲ್ಲ, ಸುನಾಮಿ ರೀತಿಯ ಬೆಂಬಲ ಸಿಕ್ಕಿದೆ ಎಂದು ಮತದಾರರ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದ್ರು. ಅಲ್ಲದೆ ರಾಜಕಾರಣವನ್ನು ಜಾತಿ […]

ಶಿರಾದಲ್ಲಿ ಅಲೆ ಅಲ್ಲ, ಸುನಾಮಿ ರೀತಿಯ ಬೆಂಬಲ ಸಿಕ್ಕಿದೆ -BY ವಿಜಯೇಂದ್ರ
Edited By:

Updated on: Nov 10, 2020 | 4:20 PM

ತುಮಕೂರು: ದೊಡ್ಡ ಸವಾಲನ್ನು ಒಗ್ಗಟ್ಟಾಗಿ ಸ್ವೀಕರಿಸಿ ಗೆಲುವು ಸಾಧಿಸಿದ್ದೇವೆ ಎಂದು ತುಮಕೂರಿನಲ್ಲಿ ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ನಂತರ ಮಾತನಾಡಿದ ವಿಜಯೇಂದ್ರ ಬಿಜೆಪಿಯ ಎಲ್ಲಾ ಮುಖಂಡರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ಶಿರಾ ಕ್ಷೇತ್ರದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಸಿಎಂ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಶಿರಾದಲ್ಲಿ ಅಲೆ ಅಲ್ಲ, ಸುನಾಮಿ ರೀತಿಯ ಬೆಂಬಲ ಸಿಕ್ಕಿದೆ ಎಂದು ಮತದಾರರ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದ್ರು.

ಅಲ್ಲದೆ ರಾಜಕಾರಣವನ್ನು ಜಾತಿ ಆಧಾರದಲ್ಲಿ ಗೆಲ್ಲುವುದು ಮುಗಿದಿದೆ. ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ. ವಿರೋಧ ಪಕ್ಷದವರು ಚುನಾವಣೆ ಘೋಷಣೆ ಆದಾಗಲೇ ಸೋಲು ಒಪ್ಪಿಕೊಂಡಿದ್ದರು. ಶಿರಾ ಮತ್ತು ಆರ್​.ಆರ್​. ನಗರ ಅಸೆಂಬ್ಲಿ ಫಲಿತಾಂಶ ನೋಡಿ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು.