Zero traffic: ಜೀರೋ ಟ್ರಾಫಿಕ್ ಮಾಡಿಸಿದ್ಯಾಕೆ ಅಂತ ಸಿದ್ದರಾಮಯ್ಯ ಮೈಸೂರು ಪೊಲೀಸ್ ಕಮೀಶನರ್​ ವಿರುದ್ಧ ರೇಗಿದರು!  

Zero traffic: ಜೀರೋ ಟ್ರಾಫಿಕ್ ಮಾಡಿಸಿದ್ಯಾಕೆ ಅಂತ ಸಿದ್ದರಾಮಯ್ಯ ಮೈಸೂರು ಪೊಲೀಸ್ ಕಮೀಶನರ್​ ವಿರುದ್ಧ ರೇಗಿದರು!  

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 10, 2023 | 7:19 PM

ಪೊಲೀಸ್ ಆಯುಕ್ತರಿಗೆ ಅದು ನೆನಪಿರಲಿಲ್ಲವೋ ಅಥವಾ ಗೊತ್ತಿದ್ದೂ ಅದನ್ನು ಮಾಡಿಸಿರೋ ನಮಗೆ ಗೊತ್ತಿಲ್ಲ.

ಮೈಸೂರು: ಸರಕಾರಗಳು ಬದಲಾದಾಗ ಎಲ್ಲರಿಗಿಂತ ಹೆಚ್ಚು ಸಮಸ್ಯೆ ಅನುಭವಿಸುವವರು ಅಂದರೆ ಸರ್ಕಾರೀ ಆಧಿಕಾರಿಗಳು (government officials). ಯಾಕೆ ಗೊತ್ತಾ? ಹಿಂದಿನ ಸರ್ಕಾರದ ಮುಖ್ಯಮಂತ್ರಿ, ಮತ್ತು ಸಚಿವರ ಮರ್ಜಿ ಒಂದು ತೆರನಾಗಿದ್ದರೆ ಹೊಸ ಸರ್ಕಾರದ ಪ್ರತಿನಿಧಿಗಳದ್ದು ಮತ್ತೊಂದು ಬಗೆಯಾಗಿರುತ್ತದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ. ಇಂದು ಮೈಸೂರು ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಗರದ ಏರ್ಫೋಟ್ ನಿಂದ ಜಿಲ್ಲಾ ಪಂಚಾಯತ್ ಅವರಣಕ್ಕೆ ಬರುವಾಗ ನಗರದ ಪೊಲೀಸ್ ಕಮೀಶನರ್ ರಮೇಶ್ ಬಾನೋತ್ (Ramesh Bhanot) ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿದ್ದಾರೆ. ಅಂಥದ್ದೇನೂ ತನಗೆ ಬೇಕಿಲ್ಲ ಅಂತ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೇಲೆ ಹೇಳಿದ್ದರು. ಆದರೆ ಪೊಲೀಸ್ ಆಯುಕ್ತರಿಗೆ ಅದು ನೆನಪಿರಲಿಲ್ಲವೋ ಅಥವಾ ಗೊತ್ತಿದ್ದೂ ಅದನ್ನು ಮಾಡಿಸಿರೋ ನಮಗೆ ಗೊತ್ತಿಲ್ಲ. ಅವರ ಈ ಕೆಲಸಕ್ಕಾಗಿ ಮುಖ್ಯಮಂತ್ರಿಗಳು ಉಳಿದವರ ಮುಂದೆ ರಮೇಶ್ ಬಾನೋತ್ ಅವರ ಮೇಲೆ ರೇಗಿದ್ದು ಮಾತ್ರ ನಮಗೆ ಗೊತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ