ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ: ಹುಟ್ಟು ಕಿವುಡು ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕಲ್ಯಾಣ ಕರ್ನಾಟಕದ ತೀರಾ ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ರಾಯಚೂರಿನ ರಿಮ್ಸ್ ಆಸ್ಪತ್ರೆ ವೈದ್ಯಕೀಯ ವಿಭಾಗದಲ್ಲಿ ಸಾಧನೆಗೈದಿದೆ. ಹುಟ್ಟು ಕಿವುಡು ಅಂಗವೈಕಲ್ಯದಿಂದ ಬಳಲುತ್ತಿದ್ದ ಇಬ್ಬರು ಪುಟ್ಟ ಬಾಲಕರಿಗೆ ರಿಮ್ಸ್ ಆಸ್ಪತ್ರೆ ವೈದ್ಯರು ಇಯರ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಿ ಇತಿಹಾಸ ಬರೆದಿದ್ದಾರೆ.

ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ: ಹುಟ್ಟು ಕಿವುಡು ಮಕ್ಕಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹುಟ್ಟು ಕಿವುಡು ಮಕ್ಕಳಿಗೆ ಯಶಸ್ವಿಯಾದ ಶಸ್ತ್ರಚಿಕಿತ್ಸೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 07, 2023 | 1:33 PM

ರಾಯಚೂರು: ಹುಟ್ಟಿದ ಮಕ್ಕಳು ವಿಶೇಷ ಚೇತನರು ಎಂಬ ಕೊರಗಿನಲ್ಲಿದ್ದ ಪೋಷಕರ ಮುಖದಲ್ಲಿ ಮಂದಹಾಸಕ್ಕೆ ಕಾರಣವಾಗಿದ್ದು ರಾಯಚೂರಿನ ಪ್ರತಿಷ್ಠಿತ ಸರಕಾರಿ ರಿಮ್ಸ್ ಆಸ್ಪತ್ರೆ. ಹೌದು ಇಬ್ಬರು ಮುದ್ದಾದ ‌ಮಕ್ಕಳಿಗೆ ಕ್ಲಿಷ್ಟಕರವಾದ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ(cochlear implant surgery) ಯಶಸ್ವಿಯಾಗಿ ನಡೆಸುವ ಮೂಲಕ ಮುದ್ದಾದ ಮಕ್ಕಳಿಗೆ ಹೊಸ ಬೆಳಕನ್ನ ನೀಡಲಾಗಿದೆ. ಈ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ‌ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಸಕ್ಸಸ್ ಪುಲ್ ಆಗಿ ನಡೆಸಿದ ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ರಿಮ್ಸ್ ಭಾಗಿಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯ ಸರ್ಕಾರ ಹುಟ್ಟು ಕಿವುಡುತನ ಪರಿಹಾರಕ್ಕೆಂದೆ ಕಾಕ್ಲಿಯರ್ ಇಂಪ್ಲಾಂಟ್ ಸ್ಕೀಂ ಪರಿಚಯಸಿದೆ.

ರಾಜ್ಯಾದ್ಯಂತ ಒಟ್ಟು 500 ಹುಟ್ಟು ಕಿವುಡು ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಗೆ ಟಾರ್ಗೆಟ್ ನೀಡಲಾಗಿದೆ. ಅದರಂತೆ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ 80 ಮಕ್ಕಳ ಟಾರ್ಗೆಟ್ ನೀಡಲಾಗಿದೆ. ಅದರ ಭಾಗವಾಗಿ ಸಿಂಧನೂರು ಹಾಗೂ ಸಿರವಾರ ತಾಲ್ಲೂಕಿನ ಇಬ್ಬರು ಮಕ್ಕಳಿಗೆ ಈ ಕಾಕ್ಲೇರ್ ಪ್ಲಾಂಟ್ ಸರ್ಜರಿ ಮಾಡಲಾಗಿದೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಈ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಇದೇ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಂಡರೇ ಸುಮಾರು‌ 12 ಲಕ್ಷ ಖರ್ಚಾಗುತ್ತದೆ. ಆದರೆ ಸರ್ಕಾರದ ಈ ಸ್ಕೀಂನಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಎಲ್ಲಾ ವರ್ಗದ ಜನರಿಗೂ ಇದು ಅನ್ವಯವಾಗಿದ್ದು ಹುಟ್ಟು ಕಿವುಡು ಮಕ್ಕಳನ್ನ ಹೊಂದಿರುವ ಪೋಷಕರು ಆರು ವರ್ಷದೊಳಗಿನ ಮಕ್ಕಳನ್ನ ರಿಮ್ಸ್ ಆಸ್ಪತ್ರೆಗೆ ಕರೆತರುವಂತೆ ರಿಮ್ಸ್ ಆಸ್ಪತ್ರೆ ಆಡಳಿತ ವರ್ಗ ತಿಳಿಸಿದೆ.

ಇದನ್ನೂ ಓದಿ:ಆಸ್ಪತ್ರೆಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಡಿಸ್ಚಾರ್ಜ್, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ ರೋಡ್​ ಶೋಗೆ ರೆಡಿ

ರಾಯಚೂರು ಮತ್ತು ಸಿಂಧನೂರು ಪಟ್ಟಣದ 2ವರ್ಷ ಮತ್ತು 4 ವರ್ಷದ ಇಬ್ಬರು ಮಕ್ಕಳು ಹುಟ್ಟಿನಿಂದಲೇ ಶ್ರವಣದೋಷ ಮತ್ತು ಮೂಗನಾಗಿದ್ದರು. ಮಕ್ಕಳ ಈ ಕಾಯಿಲೆ ನಿವಾರಣೆಗಾಗಿ ಹೆತ್ತವರು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯರು ಸಹ ಮಗುವಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಅಗತ್ಯವಿದೆ ಎಂದು ತಿಳಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇದಕ್ಕೆ 10-12 ಲಕ್ಷ ರೂಪಾಯಿ ತಗಲುವುದಾಗಿ ಹೇಳಿದ್ದರು. ಹೆತ್ತವರು ಕಡುಬಡವರಾಗಿದ್ದ ಅಷ್ಟೋಂದು ವೆಚ್ಚ ಬರಿಸಲು ಸಾಧ್ಯವಾಗದೇ, ರಿಮ್ಸ್ ಆಸ್ಪತ್ರೆಗೆ ದಾಖಲು ಆಗಿದ್ದರು.

ದಾಖಲಾದ ಮಕ್ಕಳನ್ನ ತಪಾಸಣೆ ನಡೆಸಿದ ರಿಮ್ಸ್ ವೈದ್ಯಕೀಯ ತಂಡ ಬೆಂಗಳೂರಿನಿ ಡಾ. ಸುನೀಲ್ ದತ್ತ & ಡಾ.ರಮೇಶ್ ತಂಡದ ಸಲಹೆ ಮೇರೆಗೆ ಇಎನ್​ಟಿ ವಿಭಾಗ ಮತ್ತು ಅರಿವಳಿಕೆ ವಿಭಾಗದ ಸಿಬ್ಬಂದಿಗಳ ಸಹಾಯದ ಮೇರೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮಕ್ಕಳಿಗೆ ವಿಶೇಷ ಸಾಧನವನ್ನ ಅಳವಡಿಸಿದ್ದಾರೆ. ಈ ಶಸ್ತ್ರ ಚಿಕಿತ್ಸೆ ಬಳಿಕ ಮಕ್ಕಳಿಗೆ ಮೈಸೂರಿನಲ್ಲಿ ಶ್ರವಣ ಮತ್ತು ಮೌಖಿಕ ತರಬೇತಿ ನೀಡಲಾಗುತ್ತದೆ. ಒಂದು ವರ್ಷದವರೆಗೆ ಮಕ್ಕಳಿಗೆ ಥೆರಪಿ ನೀಡಲಾಗುತ್ತದೆ. ಇಬ್ಬರು ಮಕ್ಕಳಿಗೆ ಶ್ರವಣ ಸಾಮಾಗ್ರಿಗಳು ನೀಡಿರುವುದರಿಂದ ಸಾಮಾನ್ಯ ಶ್ರವಣ ಮತ್ತು ಭಾಷೆ ಮಾತನಾಡಲಿದ್ದಾರೆ. ರಿಮ್ಸ್ ವೈದ್ಯರ ಶಸ್ತ್ರ ಚಿಕೆತ್ಸೆಯಿಂದ ವಿಕಲಚೇತನ ಮಕ್ಕಳು ಜನಿಸಿದ್ದಾರೆ ಎಂಬ ಕೊರಗಿನಲ್ಲಿದ್ದ ಹೆತ್ತವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ:ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಔಷಧಿಗಳಿಗೆ ಬರ, ಶಸ್ತ್ರಚಿಕಿತ್ಸೆಗೆ ವೈದ್ಯಕೀಯ ಸಲಕರಣೆಗಳ ಕೊರತೆ; ಸಂಕಷ್ಟದಲ್ಲಿ ರೋಗಿಗಳು

ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಯಶಸ್ವಿಗೊಳಿಸಿದ ಮೊದಲ ಆಸ್ಪತ್ರೆ ಎಂಬ ಕಿರೀಟ ರಿಮ್ಸ್ ಆಸ್ಪತ್ರೆ ಮೂಡಿಗೆ ಏರಿದೆ. ಲಕ್ಷಾಂತರ ರೂಪಾಯಿ ಶಸ್ತ್ರ ಚಿಕಿತ್ಸೆಯನ್ನ ಫ್ರೀಯಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಚಿಕಿತ್ಸೆಗೆ ಒಳಗಾದ ಇಬ್ಬರು ಬಾಲಕರು ಸದ್ಯ ಆಸ್ಪತ್ರೆಯಲ್ಲಿದ್ದು, ಆಸ್ಪತ್ರೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.

ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ